MrJazsohanisharma

ಕೆ ಬಸವರಾಜು ಅವರಿಗೆ ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ವತಿಯಿಂದ ಅಭಿನಂದನೆ

K. Basavaraj was elected unanimously as the President of the Hotel Users Association and was felicitated by the Gandhibazar Building and Traders Association of the city.


ಸುದ್ದಿಲೈವ್/ಶಿವಮೊಗ್ಗ

ಹೋಟೆಲ್ ಮಾಲೀಕರ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ಬಸವರಾಜ್ ಅವರನ್ನು ಶಿವಮೊಗ್ಗ ನಗರದ ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಅಧ್ಯಕ್ಷ ಎ.ಎಚ್.ಸುನೀಲ್ ಮಾತನಾಡಿ, ಹೋಟೆಲ್ ನಡೆಸುತ್ತಿರುವ ಎಲ್ಲರೂ ಒಟ್ಟುಗೂಡಿ ಸಂಘ ಮುನ್ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಹೋಟೆಲ್ ನಡೆಸುವ ಎಲ್ಲರಿಗೂ ಬೆಂಬಲವಾಗಿ ಸಂಘವು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿಯು ಕಾರ್ಯೋನ್ಮುಖವಾಗಬೇಕು. ಹೋಟೆಲ್ ಮಾಲೀಕರ ಬಳಕೆದಾರರ ಸಹಕಾರ ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳುವ ಮೂಲಕ ಸಂಘದ ವ್ಯಾಪ್ತಿ ಹೆಚ್ಚಿಸಬೇಕು. ಹೋಟೆಲ್ ನಡೆಸುವವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಕೆಲಸವಾಗಬೇಕು ಎಂದು ತಿಳಿಸಿದರು.

ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್ ಮಾತನಾಡಿ, ಸ್ವಾಗತ್ ಕ್ಯಾಂಟೀನ್ ಬಸಣ್ಣ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಸಂಘಟನೆ ಬಲ ಹೆಚ್ಚಿಸಿಕೊಂಡು ಕಾರ್ಯ ನಿರ್ವಹಿಸಲಿ ಎಂದು ಶುಭಕೋರಿದರು.

ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಜಿ.ಮಧು, ಪ್ರಭಾಕರ ಗೌಡ, ಆಶೀಸ್ ಜಿ.ಶೇಟ್, ಸದಾನಂದ, ಗಣೇಶ್, ಸುನೀಲ್‌ಕುಮಾರ್, ರಂಗನಾಥ್, ಶ್ರೀನಿವಾಸ್, ಜನ್ನಿ, ರಾಜು, ಬಾಬು ಮತ್ತಿತರರು ಉಪಸ್ಥಿತರಿದ್ದರು.

Girl in a jacket

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close