ಸುದ್ದಿಲೈವ್/ಶಿವಮೊಗ್ಗ
ಹೊಸ ವರ್ಷದ ಆರಂಭದ ದಿನವೇ ಭೀಕರ ಅಪಘಾತ ಸಂಭವಿಸಿದೆ. ಶಿವಮೊಗ್ಗ ನಗರದ ಎಂ ಕೆ ಕೆ ರಸ್ತೆಯ ಸಿದ್ದಯ್ಯ ವೃತ್ತದ ಬಳಿ ಆಫಘಾತ ಸಂಭವಿಸಿದ್ದು ಯುವಕನೋರ್ವ ಸಾವ್ನಪ್ಪಿದ್ದು ಓರ್ವನಿಗೆ ತೀವ್ರಗಾಯಗಳಾಗಿವೆ. ಗಾಯಗೊಂಡವನು ಪ್ರಜ್ಞಹೀನಸ್ಥಿತಿಗೆ ತಲುಪಿರುವುದಾಗಿ ತಿಳಿದು ಬಂದಿದೆ.
ಎಂಕೆಕೆ ರಸ್ತೆ ಸಿದ್ದಯ್ಯ ವೃತ್ತದ ಬಳಿ ವೋಲ್ವೋ ಕಾರೊಂದು ಪಲ್ಟಿ ಹೊಡೆದಿದೆ. ಬೈಕ್ ಸಹ ಅಪಘಾತಗೊಂಡಿದ್ದು ಸವಾರನೋರ್ವ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಹೊಸವರ್ಷ ಆಚರಣೆ ನಂತರ ನಡದ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಕಾರಿನಲ್ಲಿದ್ದ ಹುಡುಗಿಯರು ಸೇರಿದಂತೆ ಐವರು ಬಚಾವ್ ಆಗಿದ್ದಾರೆ. ಕಾರು ಚಾಲಕನಿಗೆ ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೂಲ ಏನು ಹೇಳುತ್ತೆ?
ಹೊಸವರ್ಷ ಆಚರಣೆಯ ವೇಳೆ ಸಂಭ್ರಮಾಚರಣೆಗಾಗಿ ಗೋಪಾಳದ ಕೊರಮರಕೇರಿ ನಿವಾಸಿ ಧನುಶ್(19) ರಾತ್ರಿ 1 ಗಂಟೆಗೆ ಕೇಕ್ ತರಲು ಪ್ರಜ್ವಲ್(20) ಜೊತೆಗೆ ಸಿಟಿಸೆಂಟ್ರಲ್ ಗೆ ಬಂದಿದ್ದಾನೆ. ಬಿಹೆಚ್ ರಸ್ತೆಯಲ್ಲಿ ರಾಯಲ್ ಆರ್ಕಿಡ್ ಬಳಿ ಕಾರವೊಂದಕ್ಕೆ ಟಚ್ ಆಗಿದೆ. ಗಲಾಟೆಯಾಗಿದೆ.
ಗಲಾಟೆಯಲ್ಲಿ ಕಾರಿಗೆ ಕಲ್ಲು ಹೊಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದರೂ. ಕಲ್ಲಿನಿಂದ ಹೊಡೆದಿರುವ ಬಗ್ಗೆ ಮೃತರ ಕುಟುಂಬ ತಿರಸ್ಕರಿಸಿದೆ. ಗಲಾಟೆಯಾಗಿ ಬೈಕ್ ಸವಾರ ಕ್ಷಮೆ ಕೇಳಿದ್ದಾನೆ. ಆದರೂ ಕಾರಿನವರು ಸಹ ಬೈಕ್ ನ್ನ ಚೇಸ್ ಮಾಡಿಕೊಂಡು ಅಪಘಾತ ಪಡಿಸಿರುವುದಾಗಿ ಮೃತರ ಕುಟುಂಬ ಆರೋಪಿಸಿದೆ. ಹಾಗೇನಾದರೂ ಆದರೆ ಇದು ಒಂದು ಮರ್ಡರ್ ಪ್ರಕರಣವಾಗಲಿದೆ.
ಮೃತ ಧನುಶ್ |
ಬೈಕ್ ನ ಹಿಂಬದಿ ಸವಾರ ಪ್ರಜ್ವಲ್ (21) ನಿಗೆ ತೀವ್ರಗಾಯವಾಗಿದ್ದು ಆತನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಜ್ವಲ್ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ತಿಳಿದು ಬಂದಿದೆ. ಧನುಶ್ ಸ್ಥಳದಲ್ಲೇ ಸಾವುಕಂಡಿದ್ದಾನೆ.
ಕಾರಿನಲ್ಲಿದ್ದವರು ಐವರು ಇದ್ದು ಇದರಲ್ಲಿ ಮೂವರು ಹೆಣ್ಮಕ್ಕಳಿದ್ದು ಇಬ್ಬರು ಗಂಡಮಕ್ಕಳಿದ್ದರು ಎನ್ನಲಾಗಿದೆ. ಕಾರಿನವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಕಾರಿನಲ್ಲಿದ್ದವರು ಸಾಗರ ರಸ್ತೆಯಲ್ಲಿರುವ ಪೊಲೀಸ್ ಕ್ವಾಟ್ರಸ್ ನಿವಾಸಿಯಾಗಿದ್ದಾರೆ. ಧನುಶ್ ಗಾರೆ ಕೆಲಸದ ಹುಡುಗನಾಗಿದ್ದಾನೆ. ಪಶ್ಚಿಮಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇನ್ನೂ ದಾಖಲಾಗಬೇಕಿದೆ.