ಬಿಡಾಡಿ ಕುದುರೆ ರಕ್ಷಣೆ

Firefighters rescued the horse from Tunga Channel near Golden City Layout near Alkola Circle.


ಸುದ್ದಿಲೈವ್/ಶಿವಮೊಗ್ಗ

ಆಲ್ಕೊಳ ವೃತ್ತದ ಬಳಿಯಿರುವ ಗೋಲ್ಡನ್ ಸಿಟಿ ಲೇಔಟ್ ಬಳಿಯಿರುವ ತುಂಗ ಚಾನೆಲ್ ನಲ್ಲಿದ್ದ ಕುದುರೆಯನ್ನ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. 

ಅಲ್ಕೊಳ ವೃತ್ತದ ಬಳಿಯಿರುವ ಗೋಲ್ಡನ್ ಲೇಔಟ್ ನಲ್ಲಿ ಹಾದು ಹೋಗಿರುವ ತುಂಗ ಚಾನೆಲ್ ನಲ್ಲಿ ಕಳೆದ ಎರಡು ದಿನಗಳಿಂದ ಕುದುರೆಯೊಂದು ಮೇಲಕ್ಕೆ ಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು. 

ನೀರಿಗಾಗಿ ಇಳಿದಿದ್ದ ಕುದುರೆ ಮೇಲೆ ಬರಲು ಆಗದೆ  ಕಳೆದ ಎರಡು ದಿನಗಳಿಂದ ಚಾನೆಲ್ ನಲ್ಲಿಯೇ ಸಿಲುಕಿ ಒದ್ದಾಡುತ್ತಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದನ್ನ ಗಮನಿಸಿದ ಅಕ್ಕಪಕ್ಕದವರು ಅಗ್ನಿಶಾಮಕದಳದವರಿಗೆ ಮಾಹಿತಿ ಕೊಟ್ಟಿದ್ದಾರೆ. 

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಹಗ್ಗದ ಸಹಾಯದಿಂದ ಕುದುರೆಯನ್ನ ಮೇಲಕ್ಕೆ ಎತ್ತಿ ಬಿಟ್ಟಿದ್ದಾರೆ. ಆದರೆ ಇದೊಂದು ಬಿಡಾಡಿ ಕುದುರೆ ಇರಬಹುದೆಂದು ಹೇಳಲಾಗುತ್ತಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close