ಸುದ್ದಿಲೈವ್/ಶಿವಮೊಗ್ಗ
ಹಬ್ಬಕ್ಕೂ ಮುಂಚೆನೆ ಎಸ್ ಆರ್ ಎಂ ಎಂ ಕಾಲೇಜಿನಲ್ಲಿ ಸಂಕ್ರಾಂತಿ ಹಬ್ಬ ನಡೆದಿದೆ. ಹಬ್ಬದ ಪ್ರಯುಕ್ತ ಎಸ್ ಆರ್ ಎಂ ಎಂ ಕಾಲೇಜಿನ ಬಿಸಿಎ ಮತ್ತು ಬಿಎಸ್ ಸಿ ಕಾಲೇಜಿನ ವಿದ್ಯಾರ್ಥಿಗಳು ಸುಗ್ಗಿ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ .
ಮಲೆನಾಡಿನಲ್ಲಿ ದೀಪಾವಳಿಯಿಂದ ಸಂಕ್ರಾಂತಿ ಹಬ್ಬದ ವರೆಗೆ ಹೋರಿಗಳ ಆರ್ಭಟ ನಡೆಯುತ್ತವೆ. ಹೋರಿ ಹಬ್ಬಕ್ಕಾಗಿ ಹೋರಿಗಳಿಗೆ ಪೀಪಿ ಕಟ್ಟಿ ಅಲಂಕಾರ ಮಾಡಿ ಹೋರಿಗಳ ಕುತ್ತಿಗೆಗೆ ಕೊಬ್ಬರಿ ಕಟ್ಟಲಾಗುತ್ತದೆ. ಕೊಬ್ಬರಿ ಕೀಳಯವವನೆ ಪೈಲ್ವಾನರಾಗುತ್ತಾರೆ. ಪೈಲ್ವಾನರಲ್ಲಿ ಫಂಟರ್ ಗಳಿರುತ್ತಾರೆ. ನಿರ್ದಿಷ್ಟ ಹೋರಿಗಳ ಕುತ್ತಿಗೆಗೆ ಕಟ್ಟುವ ಕೊಬ್ಬರಿಯನ್ನ ಕೀಳುವವರೆ ಫಂಟರ್ ಗಳ ಮಾಗಿರುತ್ತಾರೆ.
ಅಂತಹ ಅಖಾಡವನ್ನ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಕ್ಕಮಟ್ಟಿಗೆ ಸೃಷ್ಠಿಸಿದ್ದಾರೆ. ಕಾಲೇಜಿನ ಮಕ್ಕಳ ಅಖಾಡದಲ್ಲಿ ಶ್ರೀನಂದಿ, ಚಟ್ಟಹಳ್ಳಿಯ ಭೈರವನ ಆರ್ಭಟ ಮುಗಿಲು ಮುಟ್ಟಿತ್ತು. ಕಿಚ್ಚು ಆಯಿಸುವ ಸಂಪ್ರದಾಯದಂತೆ ಕಾಲೇಜಿನಲ್ಲೂ ಹೋರಿಗಳನ್ನ ತಂದಿದ್ದರಿಂದ ಮಲೆನಾಡಿನ ಹೋರಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ.
ಸಂಕ್ರಾಂತಿ ಹಬ್ಬ ಎಂದರೆ ಕೃಷಿಕರ ಹಬ್ಬ. ಸಂಕ್ರಾಂತಿ ಬಂತೋ ರಥೋ ರಥೋ... ಎಂಬ ರವಿಚಂದ್ರನ ನಟನೆಯ ಸಿನಿಮಾ ಹಾಡಿನ ದೃಶ್ಯಾವಳಿಗಳನ್ನ ಈ ವಿದ್ಯಾರ್ಥಿಗಳು ಕಟ್ಟುಕೊಟ್ಟಿದ್ದಾರೆ. ವಿದ್ಯಾರ್ಥಿನಿಯರು ಸೀರೆಯಲ್ಲಿ ಬಂದರೆ, ವಿದ್ಯಾರ್ಥಿಗಳು ಪಂಚೆ ಶರ್ಟ್ ನಲ್ಲಿ ಆಗಮಿಸಿದ್ದು ಹಭ್ಬಕ್ಕೆ ಸಂಭ್ರಮ ಹೆಚ್ಚಿಸಿದೆ. ವಿದ್ಯಾರ್ಥಿನಿಯರ ಸಿನಿಮಾ ಹಾಡಿನ ನೃತ್ಯ ಎಂತಹವರನ್ನೂ ಮೂಖ ಪ್ರೇಕ್ಷಕನಾಗಿಸಿದೆ.