ಸುದ್ದಿಲೈವ್/ಶಿಕಾರಿಪುರ
ಕಾಡುಹಂದಿ ಬೇಟೆಗಾರರನ್ನ ಶಿಕಾರಿಪುರದ ಅರಣ್ಯ ಅಧಿಕಾರಿಗಳು ಬೇಟೆಯಾಡಿದ್ದಾರೆ. ಇಬ್ಬರನ್ನ ಬಂಧಿಸಲಾಗಿದೆ.
ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಮೋಹನಕುಮಾರ್ ಡಿ , ಮತ್ತು ಶ್ರೀ ವಿ ಎಸ್ ರವೀಂದ್ರನಾಯ್ಕ್,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿಕಾರಿಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಕಾಡುಹಂದಿ ಬೇಟೆ ಪ್ರಕರಣ ಪತ್ತೆ ಹಚ್ಚಿ WLOR 01/2024-25 Dt 03.01.2025 ನ್ನು ದಾಖಲಿಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ದಸ್ತಗಿರಯಾದವರನ್ನ ನ್ಯಾಮತಿ ತಾಲೂಕ್ ಹಳೇಜೋಗ ಗ್ರಾಮದ ಲೋಕಪ್ಪ ಮತ್ತು ಮೈಲಾರಿ.. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿರುತ್ತಾನೆ.
ಸದರಿ ಕಾರ್ಯಾಚರಣೆಯಲ್ಲಿ ಶಿಕಾರಿಪುರ ವಲಯ ಅರಣ್ಯಧಿಕಾರಿ ರೇವಣಸಿದ್ಧಯ್ಯ ಬಿ ಹಿರೇಮಠ್, drfo ಗಳಾದ ಹರೀಶ್ ಅಜ್ಜಪ್ಪನವರ, ಕುಮಾರನಾಯ್ಕ್, ದೊಡ್ಡಮಧುಸೂಧನ್, ಕೊಟ್ರೇಶ್, ಗಸ್ತು ವನಪಾಲಕರಾದ ಶೇಖಪ್ಪ, ಶಿವಪ್ಪ ರಾತೋಡ್, ಸಿಬ್ಬಂದಿ ಗಳಾದ ರಿಯಾಜ್ ಅಹ್ಮದ್,ಸುನಿಲ್, ಬೊಮ್ಮ, ರಾಮು,ಭಾಗವಹಿಸಿದ್ದರು.