ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ರಂಗೇರಿದ ಹೊಸ ವರ್ಷಾಚರಣೆ ಮುಗಿಲು ಮುಟ್ಟಿದೆ. ಸಂಭ್ರಮಾಚರಣೆಯಲ್ಲಿ ಯುವಕ ಮತ್ತು ಯುವತಿಯರ ಮುಳುಗಿದ್ದಾರೆ.
ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಶಿವಮೊಗ್ಗದ ಕ್ಲಬ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಯುವಕರು-ಯುವತಿಯರು ಕುಣಿದು ಕುಪ್ಪಳಿಸಿದ್ದಾರೆ. ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿ ನ್ಯೂ ಇಯರ್ ಬರಮಾಡಿಕೊಂಡಿದ್ದಾರೆ.
2025 ಅನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಪಟಾಕಿ ಸಿಡಿಸಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಾಚರಣೆನಡೆದಿದೆ.
ಎಸ್ಪಿಯಿಂದ ವರ್ಷಾಚರಣೆ
ಕಳೆದ ವರ್ಷ ಎಸ್ಪಿ ಮಿಥುನ್ ಕುಮಾರ್ ಕೇಕ್ ಕಟ್ ಮಾಡಿ ತಮ್ಮ ಸಿಬ್ವಂದಿಗಳಿಗೆ ಕೇಕ್ ತಿನಿಸುವ ಮೂಲಕ ವರ್ಷಾಚರಣೆಯನ್ನ ಸಂಭ್ರಮಿಸಿದ್ದರು. ಈ ಬಾರಿಯೂ ಸಹ ಎಸ್ಪಿಯವರು ಕೇಕ್ ಕಟ್ ಮಾಡಿ ಹೊಸವರ್ಷವನ್ನ ಬರಮಾಡಿ ಕೊಂಡಿದ್ದಾರೆ.
ಅಮೀರ್ ಅಹಮದ್ ವೃತ್ತದ ಬಳಿ ಎಸ್ಪಿ ಮಿಥುನ್ ಕುನಾರ್ ಕೇಕ್ ಕಟ್ ಮಾಡಿ ಸಿಬ್ವಂದಿಗಳಿಗೆ ಹಂಚಿದರು. ಜೊಯೆಗೆ ಶುಔಅಶಯಗಳನ್ನ ಕೋರುವ ಮೂಲಕ ಹೊಸವರ್ಷವನ್ನ ಬರಮಾಡಿಕೊಂಡರು. ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಪಿಐ ಗುರುರಾಜ್ ಕೆಟಿ ಮತ್ತು ಇತರೆ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.