ವಿವಾಹಿತೆಯ ಗಮನ ಸೆಳೆದು ಮಾಂಗಲ್ಯ ಸರ ಕಳುವು, ಸಿಸಿ ಟಿವಿಯಲ್ಲಿ ಸೆರೆ

 


ಸುದ್ದಿಲೈವ್/ಸೊರಬ

ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಅಂದಾಜು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತು ದುಷ್ಕರ್ಮಿಗಳಿಬ್ಬರು ಬೈಕ್‌ನಲ್ಲಿ(bike) ಪರಾರಿಯಾದ(escape) ಘಟನೆ ಶನಿವಾರ ರಾತ್ರಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಕಾನುಕೇರಿ ಬಡಾವಣೆ ನಿವಾಸಿ ಲಕ್ಷ್ಮೀಬಾಯಿ ಸರ ಕಳೆದುಕೊಂಡವರು. ಸೊರಬ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಗ ಭಾಗಿಯಾಗಿದ್ದರಿಂದ ಶನಿವಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಮರುಳುತ್ತಿದ್ದ ವೇಳೆ ಮಹಿಳೆಯನ್ನು ದಾರಿಯಲ್ಲಿ ತಡೆದ ಇಬ್ಬರು ಅಪರಿಚಿತ ವ್ಯಕ್ತಿಗಳು, ಈ ಕೃತ್ಯ ಎಸಗಿದ್ದಾರೆ. ಪ್ರಕರಣ ಸೊರಬ ಠಾಣೆಯಲ್ಲಿ ದಾಖಲಾಗಿದೆ.

ಚಾಮರಾಜಪೇಟೆ ಏರಿಯಾದಲ್ಲಿರುವ ನಿಜಗುಣ ರೆಸೆಡೆನ್ಸಿ ಎದುರುಗಡೆ ಹಾದು ಹೋಗಿರುವ ಟಾರ್ ರಸ್ತೆಯ ಬಧಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಾತ್ರಿ 10-30 ಗಂಟೆ ಸುಮಾರಿಗೆ ಅವರ ಹಿಂದುಗಡೆಯಿಂದ ಯಾರೋ 02 ಜನ ಬೈಕಿನಲ್ಲಿ ಬಂದು ಮಹಿಳೆಯ ಹಿಂಭಾಗದಲ್ಲಿ ಕೈ ತೋರಿಸಿ ಅಕ್ಕ ಯಾರೋ ಕರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಹಿಳೆ ಹಿಂದಕ್ಕೆ ತಿರುಗಿನೋಡಿದಾಗ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರಕ್ಕೆ ಕೈಹಾಕಿ ಕಿತ್ತುಕೊಂಡು ಹೋಗಿದ್ದಾರೆ. ಮುಂಬದಿ ಕುಳಿತಿದ್ದ ವ್ಯಕ್ತಿ ಹೆಲ್ಮೆಟ್ ಧರಿಸಿದ್ದರೆ ಹಿಂಬದಿ ಸವಾರ ತಲೆಗೆ ಕೇಸರಿ ಟೆವಲ್ ಸುತ್ತಿಕೊಂಡಿದ್ದನು. ಕಪ್ಪು ಕಿತ್ತಳೆ ಮಿಶ್ರಿತ ಬೈಕ್ ನಲ್ಲಿ ಬಂದ ಅಪರಿಚಿತರಿಂದ ಒಟ್ಟು 25 ಗ್ರಾಂ ನ 1,60,000 ರೂ. ಮೌಲ್ಯದ ಚಿನ್ನದಾಭರಣ ಕಳುವಾಗಿದೆ.


The theft of Mangalya Sar by attracting the attention of a married woman was captured on CC TV

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close