ನಕಲಿ ಚಿನ್ನದ ನಾಣ್ಯವೆಂದು ನಂಬಿಸಿ 8 ಲಕ್ಷ ರೂ. ವಂಚನೆ

An FIR has been registered in an incident where people in Hassan district were cheated of Rs 8 lakh by mistaking the fake gold coins as genuine gold coins.


ಸುದ್ದಿಲೈವ್/ಶಿರಾಳಕೊಪ್ಪ

ನಕಲಿ ಚಿನ್ನದ ನಾಣ್ಯಗಳನ್ನ ಅಸಲಿ ಚಿನ್ನದ ನಾಣ್ಯವೆಂದು ನಂಬಿಸಿ 8 ಲಕ್ಷ ರೂ.ಗಳನ್ನ ಹಾಸನ ಜಿಲ್ಲೆಯವರಿಗೆ ವಂಚಿಸಿರುವ ಘಟನೆ ಎಫ್ಐಆರ್ ದಾಖಲಾಗಿದೆ. 

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಇಂತಿತೊಳಲು  ಗ್ರಾಮದ ಕಲ್ಲೇಶ್ ಎಂಬುವರು ಧರ್ಮಸ್ಥಳಕ್ಕೆ ತೆರಳಿದ್ದು ಧರ್ಮಸ್ಥಳದಲ್ಲಿ ಶಿರಸಿ ಚಂದ್ರು ಎಂಬ 50 ವರ್ಷದ ಯಜಮಾನ ಪರಿಚಯವಾಗಿ ನಿಮ್ಮ ಕಡೆ ತೋಟದ ಕೆಲಸ ವಿದ್ದರೆ ಹೇಳಿ ನಾನು ಹೆಂಡ್ತಿ ಬಂದು ಕೆಲಸ ಮಾಡುವುದಾಗಿ ಹೇಳಿರ್ತಾನೆ.

ಕೆಲಸ ಇದೆ ಎಂದು ಕಲ್ಲೇಶ್ ಒಪ್ಪಿ ಮೊಬೈಲ್ ನಂಬರ್ ಕೊಟ್ಟಿದ್ದನು‌ ಕಲ್ಲೇಶ್ ಮತ್ತು ಶಿರಿಸಿಯ ಚಂದ್ರು ತಮ್ಮ ಊರಿಗೆ ಹೋಗಿ ಒಂದುವಾರದ ನಂತರ ಕರೆ ಮಾಡಿ ಅಣ್ಣ ನಮ್ಮ ಮನೆಯ ಪಕ್ಕದಲ್ಲಿ ಅಜ್ಜ ಅಜ್ಜಿ ಇದ್ದಾರೆ. ಅವರು ಮನೆ ಕಟ್ಟುವಾಗ ಚಿನ್ನದ ನಾಣ್ಯ ಸಿಕ್ಕಿದೆ. ಅದನ್ನ ಮಾರಾಟ ಮಾಡಿಸಬೇಕು. ನೀವು ಪರಿಚಯವೆಂದು ಕರೆ ಮಾಡಿರುವೆ ನಿಮಗೆ ಬೇಕಾದಲ್ಲಿ ನನಗೆ ತಿಳಿಸಿ ಎಂದು ಹೇಳಿದ್ದಾನೆ. 

ಅದಕ್ಕೆ ಕಲ್ಲೇಶ್ ಅದು ನಿಜವಾದ ಚಿನ್ನದ ನಾಣ್ಯವೇ ಎಂದು ಕಲ್ಲೇಶ್ ಪ್ರಶ್ನಿಸಿದ್ದು, ನೀವು ಒಮ್ಮೆ ಶಿರಾಳಕೊಪ್ಪಕ್ಕೆ ಬನ್ನಿ ನಿಮಗೆ ಚಿನ್ನದ ನಾಣ್ಯ ತೋರಿಸುವೆ ಎಂದು ನಂಬಿಸಿ ಒಂದು ದಿನ ಬನ್ನಿ ಎಂದು ಹೇಳಿದ ಮರುದಿನವೇ ಕಲ್ಲೇಶ್ ಹಾಸನ ಜಿಲ್ಲೆಯಿಂದ ಬಂದಿದ್ದಾರೆ. ಶಿರಾಳಕೊಪ್ಪದಲ್ಲಿ ಚಿನ್ನದ ನಾಣ್ಯ ತೋರಿಸಿ ನೀವು ಹೋಗಿ ಪರಿಶೀಲಿಸಿ ಎಂದು ಶಿರಸಿ ಚಂದ್ರ ಹೇಳಿದ್ದಾನೆ. 

ಈ ಚಿನ್ನಕ್ಕೆ 10 ಸಾವಿರ ಹಣವನ್ನ ಪಡೆದುಕೊಂಡು ಅಸಲಿ ಚಿನ್ನದ ನಾಣ್ಯವನ್ನ ಕೊಟ್ಟು ಕಳುಹಿಸಿದ್ದಾನೆ. ನಂತರ ಇದು ಅಸಲಿ ಎಂದು ತಿಳಿದಾಗ ಕಲ್ಲೇಶ್ 1 ಕೆಜಿ ಚಿನ್ನದ ನಾಣ್ಯ ಬೇಕು ಎಷ್ಟಾಗುತ್ತೆ ಎಂದಿದ್ದಾರೆ. ಐದು ಲಕ್ಷವಾಗುತ್ತೆ. ಆದರೆ ನಮ್ಮ ಬಳಿ ಕೇವಲ 800 ಗ್ರಾಂ ಚಿನ್ನ ಮಾತ್ರವಿದೆ ಎಂದು ನಂಬಿಸಿ ಉಳಿದಿದ್ದು ಮುಂದಿನಗಳಲ್ಲಿ ಕೊಡಿಸುವೆ ಎಂದು ನಂಬಿಸಿದ್ದಾರೆ. 

ಸರಿ ಎಂದು ಬ್ಯಾಂಕ್ ಸಾಲ ಮಾಡಿ ಕಲ್ಲೇಶ್ 8 ಲಕ್ಷ ತೆಗೆದುಕೊಂಡು ಶಿರಾಳಕೊಪ್ಪಕ್ಕೆ ಬಂದಿದ್ದು, ಆ ವೇಳೆ ಒಬ್ಬ ಯುವಕ, ಅಜ್ಜಿ ಮತ್ತು ಶಿರಸಿ ಚಂದ್ರು ಒಂದು ಖಾಸಗಿ ಆಸ್ಪತ್ರೆಯ ಹಿಂಭಾಗದಲ್ಲಿ ನಿಂತಿದ್ದು ನಂತರ ಕಲ್ಲೇಶ್ ಭೇಟಿಯಾಗಿ 5 ಲಕ್ಷ ಕೊಟ್ಟು,  800 ನಕಲಿ ಚಿನ್ನದ ನಾಣ್ಯ ಪಡೆದು ಉಳಿದ 3 ಲಕ್ಷ ಹಣ ನೀಡಿ  ಇದಕ್ಕೆ ತಕ್ಕಂತೆ ಚಿನ್ನದ ನಾಣ್ಯ ಕೊಡಿಸಿ ಎಂದು ಹಣಕೊಟ್ಟು ಬಂದಿದ್ದಾರೆ. ಪ್ರಕರಣ ಶಿರಾಳಕೊಪ್ಪದಲ್ಲಿ ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close