![]() |
The 76th Republic Day was celebrated at the city's DAR ground. Education Madhu Bangarappa started the Republic Day program by hoisting the national tricolor flag. |
ಸುದ್ದಿಲೈವ್/ಶಿವಮೊಗ್ಗ
ನಗರದ ಡಿಎಆರ್ ಮೈದಾನದಲ್ಲಿ 76 ನೇ ಗಣರಾಜ್ಯೋತ್ಸವನ್ನ ಆಚರಿಸಲಾಯಿತು. ಶಿಕ್ಷಣ ಮಧು ಬಂಗಾರಪ್ಪ ರಾಷ್ಟದ ತ್ರಿವರ್ಣ ಧ್ವಜ ಹಾರಿಸಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಧ್ವಜವಂದನೆ, ಪೆರೇಡ್ ವೀಕ್ಷಣೆ ನಡೆದರೆ ನಂತರ ಕವಾಯಿತು ನಡೆಯಿತು. ಚೇತನ್ ಬಿರಾದಾರ್ ನೇತೃತ್ವದಲ್ಲಿ ಕೆಎಸ್ಆರ್ ಪಿ ತುಕಡಿ, ಪಿಎಸ್ ಐ ಸ್ವಪ್ನ ನೇತೃತ್ವದಲ್ಲಿ, ಗೃಹರಕ್ಷಕದವರ ಅರಣ್ಯ ಇಲಾಖೆ ಪ್ರಭು ನೇತೃತ್ವದಲ್ಲಿ ಅಗ್ನಿಶಾಮಕ ದಳ ನರೇಂದ್ರ ಅವರ ನೇತೃತ್ವದಲ್ಲಿ ಕವಾಯಿತು ನಡೆದಿದೆ.
ಎನ್ ಸಿಸಿ, ಸಾಂದೀಪಿನಿ ಶಾಲೆ, ಆದಿಚುಂಚನಗಿರಿ, ಶಾಲೆ, ಭಾರತ್ ಸ್ಕೌಟ್ ವಿಭಾಗ, ಸೇಕ್ರೆಡ್ ಹಾರ್ಟ್, ವಿಕಾಸ ಶಾಲೆ, ದುರ್ಗಿಗುಡಿ, ಮುರಾರ್ಜಿ ಶಾಲೆ ಮಕ್ಕಳು ಭಾಗಿಯಾದರೆ ಮೊದಲ ಬಾರಿಗೆ ಪೌರಕಾರ್ಮಿಕರು ಭಾಗಿಯಾಗಿದ್ದು ವಿಶೇಷವಾಗಿತ್ತು.
ನಂತರ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿದ ಮಧು ಬಂಗಾರಪ್ಪ, ಭಾರತದ ಗಣರಾಜ್ಯದ ಉದ್ದೇಶವನ್ನ ಜಾರಿಗೊಳಿಸುವುದು ನಮ್ಮ ಕರ್ತವ್ಯವಾಗಿದೆ, ವಿವಿಧತೆಯಲ್ಲಿ ಏಕತೆ ಕಂಡ ಭಾರತ ದೇಶ ನಮ್ಮದಾಗಿದೆ. ಸಿಎಂ ಸಿದ್ದರಾಮಯ್ಯ ಸರ್ವರಿಗೂ ಸಮಪಾಲು ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ಯಾರೆಂಟಿ ಮೂಲಕ ಜನರ ಕಷ್ಟಗಳಿಗೆ ಸರ್ಕಾರ ಸ್ಪಂಧಿಸುತ್ತಿದೆ ಎಂದರು.
ಇದುವರೆಗೂ 3.8 ಕೋಟಿ ಶಕ್ತಿಯೋಜನೆಯಲ್ಲಿ ಮಹಿಳೆಯರು ಪ್ರಯಾಣಿಸಿದರೆ, 4.8 ಲಕ್ಷ ಕುಟುಂಬಗಳು 332 ಕೋಟಿ ಗೃಹ ಜ್ಯೋತಿಯ ಸಬ್ಸಿಡಿ ಪಡೆದಿದ್ದಾರೆ. ಲಾ 3.87 ಕೋಟಿ 773 ಕೋಟಿ ಮೊತ್ತದ ಲಾಭ ಪಡೆದಿದ್ದಾರೆ. 360 ಲಕ್ಷ ಕುಟುಂಬಗಳು ಅನ್ಯಭಾಗ್ಯದಲ್ಲಿ 170 ಕೋಟಿ 298 ಕೋಟಿ ಮೊತ್ತವನ್ನ ಪಡೆದಿದ್ದಾರೆ.
6273 ವಿದ್ಯಾರ್ಥಿಗಳಿಗೆ 9.50 ಕೋಟಿ ಹಣ ನೇತವಾಗಿ ಯುವನಿಧಿ ಹಣ ತಲುಪಿದೆ. 10 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ನಿರ್ಮಾಣ, ಅಲ್ಲಮಪ್ರಭು ಫ್ರೀಡಂ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ಬಿಡುಗಡೆ, ನಿರ್ಮಿಸಲು ಚಾಲನೆ ನೀಡಲಾಗಿದೆ. 27 ಶಾಲೆ ಆರಂಭಿಸಲು ಯೋಚಿಸಲಾಗಿದೆ. ಕೃಷಿಗೆ ಈ ವರ್ಷ ಉತ್ತಮವಾಗಿದೆ. ಶರಾವತಿ ಮುಳುಡೆ ಮತ್ತು ಬಗುರ್ ಹುಕಂ ಸಂತ್ರಸ್ಯರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜಬೆ ರೂಪಿಸಲಾಗಿದೆ. 600 ಕ್ಕೀ ಹೆಚ್ಚು ಮಕ್ಕಳು ಎದೆಹಾಲು ಕೇಂದ್ರ ಆರಂಭವಾಗಿದೆ. ಪ್ರವಾಸೋದ್ಯಮ, ಮೊದಲಾದ ಸಮಗ್ರ ಅಭಿವೃಧ್ಧಿ ಮಾಡಲಾಗಿದೆ. ಬಹು ಸಂಸ್ಕೃತಿ ಉಳಿತಿಗೆ ಅಗತ್ಯ ಕ್ರಮವಾಗಿದೆ ಎಂದರು.