A woman died in a road accident. An incident took place this evening in which a woman pedestrian was killed as a result of being hit by a bike.
ಸುದ್ದಿಲೈವ್/ಶಿವಮೊಗ್ಗ
ರಸ್ತೆ ಅಪಘಾತದಲ್ಲಿ ಮಹಿಳೆಯೋರ್ವರು ಅಸುನೀಗಿದ್ದಾರೆ. ಬೈಕೊಂದು ಗುದ್ದಿದ ಪರಿಣಾಮ ಪಾದಚಾರಿ ಮಹಿಳೆಯೋರ್ವರು ಸಾವುಕಂಡಿರುವ ಘಟನೆ ಇಂದು ಸಂಜೆ ನಡೆದಿದೆ.
ವಿನೋಬ ನಗರದ 60 ಅಡಿ ರಸ್ತೆಯಲ್ಲಿ ಶುಭಮಂಗಳ ಕಲ್ಯಾಣ ಮಂದಿರದ ಎದುರಿನ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಸುಮಾರು 55 ವರ್ಷದ ಮಹಿಳೆಗೆ ಬೈಕೊಂದು ಗುದ್ದಿದೆ. ತಕ್ಷಣವೇ ಮಹಿಳೆಯನ್ನ ಮೆಗ್ಗಾನ್ ಗೆ ಸಾಗಿಸಲಾಗಿದ್ದರು ಮಾರ್ಗ ಮಧ್ಯೆಯಲ್ಲಿ ಮಹಿಳೆ ಸಾವು ಕಂಡಿದ್ದಾರೆ.
ಮೃತ ಮಹಿಳೆಯನ್ನ ಗಾಯಿತ್ರಿ ಎಂದು ಗುರುತಿಸಲಾಗಿದೆ. ಮೊಮ್ಮಗನನ್ನ ವೃದ್ಧರೊಬ್ವರು ಶಾಲೆಯಿಂದ ಕರೆದುಕೊಂಡು ಬರುವಾಗ ಈ ಅವಘಢ ಸಂಭವಿಸಿದೆ. ಇವಿಷ್ಟು ಪ್ರಾಥಮಿಕ ಮಾಹಿತಿಯಾಗಿದೆ. ಪ್ರಕರಣ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.