shimoga image

205 ಮೆಟ್ರಿಕ್ ಟನ್ ಮರಳು ಸೀಜ್

The raid was conducted under the officer of Tehsildar Rajeev, Mines and Geology Department Officer Priya, Rural Police Station PI Satyanarayan on illegal sand collection road in the area.

ಸುದ್ದಿಲೈವ್/ಶಿವಮೊಗ್ಗ

ಗ್ರಾಮಾಂತರ ಭಾಗದಲ್ಲಿ ಅಕ್ರಮ ಮರಳು ಸಂಗ್ರಹ ಅಡ್ಡದ ಮೇಲೆ ತಹಶೀಲ್ದಾರ್ ರಾಜೀವ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪ್ರಿಯಾ, ಗ್ರಾಮಾಂತರ ಪೊಲೀಸ್ ಠಾಣೆ ಪಿಐ ಸತ್ಯ ನಾರಾಯಣ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. 

ಹಾಡೋನ ಹಳ್ಳಿ ಗ್ರಾಮದಲ್ಲಿ ಹೊಳೆಯತಟದಲ್ಲಿ ಮರಳನ್ನ ಸಂಗ್ರಹಿಸಿ ಅಕ್ರಮ ಮರಳು ಸಾಗಾಣಿಕೆಗೆ ಸಿದ್ದತೆ ನಡೆಸಿದಂತೆ ಮತ್ತೊಂದು ಭಾಗದಲ್ಲಿ ಇದೇರೀತಿ ಮರಳು ಸಂಗ್ರಹ ಮಾಡಿರುವ ಘಟನೆ ನಡೆದಿದೆ. ಇಲ್ಲಿ ದೇವಸ್ಥಾನ ಕಮಿಟಿಗೆ ಹಣಕಟ್ಟಿ ನಂತರ ಅಕ್ರಮ‌ಮರಳು ಮಾಡುತ್ತಿದ್ದ ಬಗ್ಗೆ ವರದಿ ಬಂದಿದ್ದು ನಂತರ ಇದೇ ಮೂರು ಅಧಿಕಾರಿಗಳು ದಾಳಿ ನಡೆಸಿ 60 ಮೆಟ್ರಿಕ್ ಕ್ವಿಂಟಾಲ್ ಮರಳು ಪತ್ತೆಯಾಗಿತ್ತು. 

ಈಗ ತುಂಗ ಭದ್ರೆಯ ಒಡಲಿನಲ್ಲಿದ್ದ ಮರಳನ್ನ ತೆಗೆದು ಅಕ್ರಮ ಮರಳು ಸಂಗ್ರಹ ಮಾಡಿದ 205 ಮೆಟ್ರಕ್ ಟನ್ ಮರಳು ಪತ್ತೆಯಾಗಿದೆ. ಹೊಳೆಹಟ್ಟಿ ಗ್ರಾಮದಲ್ಲಿ ಅಕ್ರಮ ಸಂಗ್ರಹವಾಗಿದ್ದ  ಮರಳನ್ನ ತಕ್ಷಣವೇ ಅಧಿಕಾರಿಗಳು ಸೀಜ್ ಮಾಡಿ ಪಿಡಬ್ಲೂಡಿಗೆ  ಹಸ್ತಾಂತರಿಸಿದೆ. ಆದರೆ ಯಾವುದೇ ವಾಹನಗಳು ಪತ್ತೆಯಾಗಿಲ್ಲ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close