ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯ ಚುನಾವಣೆ(election) ಜ.12 ರಂದು ನಡೆಯಲಿದ್ದು 15 ಜನರ ನಿರ್ದೇಶಕರ ಆಯ್ಕೆಗೆ ಮತದಾನ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಕೆ.ಜಿ.ಕುಮಾರ ಸ್ವಾಮಿ ಸೊಸೈಟಿಯು 20 ವರ್ಷ ನಿಂತ ನೀರಾಗಿದೆ. ನಿವೇಶನ, ಮನೆ ಹಂಚುವ ಚುವಟಿಕೆ ಮಾಡದೆ ಹಿಂದಿನ ಆಡಳಿತ ಮಂಡಳಿ ನಿಷ್ಕ್ರಿಯವಾಗಿದೆ. 27 ವರ್ಷದಿಂದ ಸದಸ್ಯತ್ವವೂ ಆಗಿಲ್ಲ. ಹಾಗಾಗಿ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡಬೇಕು ಎಂದರು.
ಕಳೆದ ಬಾರಿ 700 ಮತಗಳಿದ್ದವು. ಈ ಬಾರಿ 3063 ಮತದಾರರಿದ್ದಾರೆ. 300 ಜನ ತೀರಿಕೊಂಡಿದ್ದವರ ಕುಟುಂಬಸ್ಥರಿಗೆ ಮತದಾನ ನೀಡಲಾಗಿದೆ. ಮತದಾರರ ಪಟ್ಟಿ ಹೊರಬಂದ ಮೇಲೆ 20 ವರ್ಷ ಹಿಂದೆ ಇದ್ದ ಮತದಾರರ ಪಟ್ಟಿ ಮುಂದು ವರೆದಿದೆ ಎಂದು ತಿಳಿದು ಬಂದಿದೆ. ಇದನ್ನ ದೂರು ನೀಡಾಗುವುದು ಎಂದರು.
ಕೌಟುಂಬಿಕ ಸೊಸೈಟಿಯಾಗಿದೆ. ಎಸ್ಪಿ ದಿನೇಶ್ ಮಾತನಾಡಿ, ಮೂವರು ಸಿಟಿಂಗ್ ಡೈರೆಕ್ಟರ್ ಹೊರಗೆ ಬಂದಿದ್ದಾರೆ. ಮೀಟಿಂಗ್ ಗಳಲ್ಲಿ ಆಕ್ಷೇಪ ಮಾಡಲು ಅವಕಾಶವಿರಲಿಲ್ಲ. 100 ವರ್ಷ ಪೂರೈಸಿದ ಸೊಸೈಟಿಯಾಗಿದೆ. ರವೀಂದ್ರ ನಗರ ರಾಜೇಂದ್ರ ನಗರ ಹುಟ್ಟಿಕೊಂಡಿದ್ದೆ ಸೊಸೈಟಿಯಾಗಿದೆ ಎಂದರು.
ಎಲ್ಲಾ ಸದಸ್ಯರಿಗೆ ನಿವೇಶನಗಳನ್ನ ವಿತರಿಸಲು ನಮ್ಮ ಆಡಳಿತ ಮಂಡಳಿ ಗೆದ್ದು ಬಂದರೆ ಕೊಡಿಸುವ ಭರವಸೆ ನೀಡಿದರು. ಉಮಾಶಂಕರ ಉಪಾಧ್ಯ ಮಾತನಾಡಿ, ಎಸ್ಪಿ ದಿನೇಶ್ ರನ್ನ ಕೈಬಿಡಬೇಕು ಎಂದು ಹಿಂದಿನ ಆಡಳಿತ ಮಂಡಳಿ ನಿರ್ಧರಿಸಿತ್ತು. ಅವರು ಚುನಾವಣೆ ಸ್ಪರ್ಧಿಸದಿದ್ದರೆ ಬೇರೆಯವರನ್ನ ಸ್ಪರ್ಧಿಗೆ ಇಳಿಸಬೇಕು. ಆದರೆ ದಿನೇಶ್ ಮತ್ತು ಪ್ರಕಾಶ್ ಅವರನ್ನ ಕೈಬಿಡಲು ಕಾರಣವಿರಲಿಲ್ಲ ಹಾಗಾಗಿ ನಾವೇ ಬೇರೆ ತಂಡ ಕಟ್ಟಿಕೊಂಡು ಸ್ಪರ್ಧಿಸಲಾಗುತ್ತಿದೆ. ಯಾವುದೇ ಹೊಂದಾಣಿಕೆ ಇಲ್ಲ. ಮಾಜಿ ಶಾಸಕರು ನಮಗೆ ಧೈರ್ಯಕೊಟ್ಟಿದ್ದಾರೆ ಎಂದರು.
ಅನಂತರಾಮ್, ಎಂ ಉಮಾಶಂಕರ ಉಪಾಧ್ಯ, ಹೆಚ್ ತುಳಸಿ ರಾಮ್ ಪ್ರಸಾದ್, ಎಸ್ಪಿ ದಿನೇಶ್, ಅ.ಮ.ಪ್ರಕಾಶ್, ಬಿ.ವಿ.ಭೀಮೇಶ್, ಎಲ್ ಕೆ ಲಕ್ಷ್ಮೀನಾರಾಯಣ, ಕೆ.ಇ.ಸೋಮಶೇಖರ್, ಕೆ.ಜಿ.ಕುಮಾರ ಸ್ವಾಮಿ, ನಾಗರಾಜ ಬಿ.ಎಸ್, ಉಮೇಶ್ ಪುಟ್ಟಪ್ಪ.ಪಿ., ಎಂ.ಆರ್ ಪ್ರಕಾಶ್, ಕವಿತಾ ಇ.ಶ್ರೀನಿವಾಸ್, ವೇದಾವತಿ ಕೆ.ಎಸ್ ಸೊಸೈಟಿ ಸ್ಪರ್ಧಿಸುತ್ತಿದ್ದಾರೆ.
ಪ್ರತಿ ಸದಸ್ಯರಿಗೆ 15 ಮತಗಳನ್ನ ಚಲಾಯಿಸುವ ಹಕ್ಕಿದೆ. ಸೊಸೈಟಿಯ ಗುರುತಿನ ಚೀಟಿ ಕಡ್ಡಾಯ ವಾಗಿದೆ. ಮತದಾನ ನ್ಯಾಷನಲ್ ಹೈಸ್ಕೂಲ್ ನಲ್ಲಿ ಮತದಾನ ನಡೆಯಲಿದೆ. ಗುರುತಿನ ಚೀಟಿ ಇಲ್ಲದವರು ಸೊಸೈಟಿಗೆ ಫೊಟೊ ನೀಡಬೇಕು ಎಂದರು.
Shimoga Housing Cooperative Society Election on January 12