ಒಂದು ದ್ವಿಚಕ್ರ ವಾಹನ ಕಳುವಿಗೆ ಪತ್ತೆಯಾಗಿದ್ದು ಎರಡು ವಾಹನ


ಸುದ್ದಿಲೈವ್/ಭದ್ರಾವತಿ

ತರೀಕೆರೆಯ ಭವನಗಿರಿ ನಿವಾಸಿ ಜುಲೈ 16 ರಂದು ಹೋಡಾ ಆಕ್ಟಿವ್ ಡಿಎಲ್ಎಕ್ಸ್ ನಲ್ಲಿ ಭದ್ರಾವತಿಯ ಸಿದ್ಧಾಪುರ ಬೈಪಾಸ್ ನ ತಿಬ್ಬಾದೇವಿ ಇಂಜಿನಿಯರಿಂಗ್ ವರ್ಕ್ ಮುಂದೆ ಬಂದು ನಿಲ್ಲಿಸಿದ್ದ ನವೀನ್ ಕೆಲಸ ಮುಗಿಸಿಕೊಂಡು ಬರುವ ಹೊತ್ತಿಗೆ ಆತನ ದ್ವಿಚಕ್ರವಾಹನ ಕಳುವಾಗಿದ್ದು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಪ್ರಕರಣದಲ್ಲಿ ಕಳುವಾದ ದ್ವಿಚಕ್ರ ವಾಹನ ಹಾಗೂ ಆರೋಪಿತರ ಪತ್ತೆಗಾಗಿ, ಮಿಥುನ್ ಕುಮಾರ್ ಜಿ ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನೀಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2, ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ  ನಾಗರಾಜ್ ಪೊಲೀಸ್ ಉಪಾಧೀಕ್ಷರು ಭಧ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ  ಶ್ರೀಶೈಲ ಕುಮಾರ್ ಸಿಪಿಐ ಭದ್ರಾವತಿ ನಗರ ವೃತ್ತರವರ ನೇತೃತ್ವದಲ್ಲಿ  ಟಿ ರಮೇಶ ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ, ಟಿ.ಪಿ ಮಂಜಪ್ಪ ಎ.ಎಸ್ ಐ ಹಾಗೂ ಠಾಣಾ ಸಿಬ್ಬಂಧಿಗಳಾದ ಸಿ.ಹೆಚ್.ಸಿ ನವೀನ ಮತ್ತು ರಘು ಬಿ. ಎಂ. ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

ತನಿಖಾ ತಂಡವು ಡಿ.11 ರಂದು ಪ್ರಕರಣದ ಆರೋಪಿಯಾದ ಭದ್ರಾವತಿ ಹೆಬ್ವಂಡಿ ತಾಂಡದ ನಿವಾಸಿ ರಂಗನಾಥ ಆರ್(32), ರನ್ನ ಬಂಧಿಸಲಾಗಿದೆ.  ಆತನಿಂದ  ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 1,10,000/-  ರೂಗಳ 02 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.  

ಸದರಿ ತನಿಖಾ ತಂಡದ ಉತ್ತಮವಾದ ಕರ್ತವ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ  ಅಭಿನಂದಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close