ವಿದ್ಯುತ್ ಶಾಕ್ ನಿಂದ ಮನೆಯ ಮಾಲೀಕ ಸಾವು

 


ಸುದ್ದಿಲೈವ್/ಶಿರಾಳಕೊಪ್ಪ

ವಿದ್ಯುತ್ ಶಾಕ್ ನಿಂದ ಮನೆಯ ಮಾಲೀಕ ಸಾವನ್ನಪ್ಪಿರುವ ಘಟನೆ ಶಿರಾಳಕೊಪ್ಪದ ಹರಗಿ ಗ್ರಾಮದಲ್ಲಿ ನಡೆದಿದೆ.

ನೂತನವಾಗಿ ಮನೆ ಕಟ್ಟುತ್ತಿದ್ದ ಹರಗಿ ಗ್ರಾಮದ ಗಂಗಾಧರಪ್ಪ ತಂದೆ ಲೋಕಪ್ಪ (35)  ಸ್ಲ್ಯಾಬ್ ಹಾಕಿದ್ದರು. ಸ್ಲ್ಯಾಬ್ ಗೆ ಇಂದು ನೀರು ಹಾಕಿ ಮೆಟ್ಟಿಲು ಇಳಿದು ಹೋಗುವಾಗ ಮೋಟಾರ್ ವಿದ್ಯುತ್ ತಂತಿ ತಗುಲಿ ಗಂಗಾಧರಪ್ಪ ಸಾವು ಕಂಡಿದ್ದಾರೆ.

ನೂತನ ಮನೆ ಕಟ್ಟುತ್ತಿದ್ದ ಮಾಲೀಕರೇ ಬಲಿಯಾದಂತಾಗಿದೆ. ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close