ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಪತ್ನಿಯ ಕೊಲೆ?




ಸುದ್ದಿಲೈವ್/ಶಿವಮೊಗ್ಗ

ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಮಹಿಳೆ ರುಕ್ಸಾನಾ ಕೊಲೆಯಾಗಿರುವುದಾಗಿ ಕೊಲೆ ಆರೋಪಿ ಯೂಸಫ್ ಸಹೋದರ ಇಸ್ಮಾಯಿಲ್ ತಿಳಿಸಿದ್ದಾರೆ. 

ಹಿಂದೂ ಜನಾಂಗದವನ ಜೊತೆ ಅಕ್ರಮ ಸಂಬಂಧದ ಹಿಬ್ನಲೆಯಲ್ಲಿ ಈ ಗಟಬೆ ನಡೆದಿದ್ದು ಮೂರು ದಿನಗಳ ಹಿಂದೆ ರುಕ್ಸಾನಾ ಸಾಗರ ತಾಲೂಕು  ಆನಂದಪುರಂ ಬಳಿಯಿರುವ ತವರು ಮನೆಗೆ ಹೋಗಿದ್ದರು. ಗಂಡ ವಾಪಾಸ್ ಕರೆದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ರುಕ್ಸಾನಾ ವಾದಿ-ಎ-ಹುದಾ ಬಡಾವಣೆಯ ಗಂಡನ ಮನೆಗೆ ಬಂದಿದ್ದಳು.

ಆಗ ಹೆಂಡತಿಯ ಮೊಬೈಲ್ ರೆಕಾರ್ಡಿಂಗ್ ಯೂಸಫ್ ಗೆ ಸಿಕ್ಕಿದೆ. ಇದಕ್ಕೂ ಮೊದಲು ಯೂಸಫ್ ತನ್ನ ತಾಯಿ ಹತ್ತಿರ ಹೆಂಡತಿ ಹಿಂದೂ ಹುಡುಗನ ಜೊತೆ ಲವ್ವಿ ಡವ್ಬಿ ಇರುವ ವಿಚಾರ ತಿಳಿಸಿರುವುದಾಗಿ ಇಸ್ಮಾಯಿಲ್ ಹೇಳಿದ್ದಾರೆ.

ಈ ಕುರಿತು ಎಸ್ಪಿ ಮಿಥುನ್ ಕುಮಾರ್ ಸಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ರುಕ್ಸಾನಾ ಕೊಲೆ ಪ್ರಕರಣದಲ್ಲಿ ಆರೋಪಿ ಎರಡು ಮೂರು ಆಯುಧಗಳನ್ನ ಬಳಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಕುಟುಂಬ ಕಲಹದ ಹಿನ್ನಲೆಯಲ್ಲಿ ಮರ್ಡರ್ ನಡೆದಿದೆ ಎಂದು ತಿಳಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close