ಪಾಲಿಕೆ ಆಯುಕ್ತರಿಗೆ ದಿಗ್ಬಂಧನ, ಆಯುಕ್ತರ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಶಾಸಕರ ಎಚ್ಚರಿಕೆ


ಸುದ್ದಿಲೈವ್/ಶಿವಮೊಗ್ಗ

ಕಳೆದ 8 ವರ್ಷಗಳಿಂದ ಗೋವಿಂದಾ‌ಪುರ ಮತ್ತು ಗೋಪಿಶೆಟ್ಟಿಹಳ್ಳಿಯ ಆಶ್ರಯ ಬಡಾವಣೆಯ ಮನೆಗಳನ್ನ ಹಂಚದೆ ವಿಳಂಭಕ್ಕೆ ಬ್ರೇಕ್ ಹಾಕಲು ಹೊರಟಿದ್ದ ಶಾಸಕ ಚೆನ್ನಬಸಪ್ಪನವರ ಪ್ರಯತ್ನಕ್ಕೆ ಫಲದೊರಕದಂತಾಗಿದೆ.  

ಲಾಟರಿ ಮೂಲಕ ಎತ್ತುವ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಡ್ರಾಮಾ ಮತ್ತು ಹೈಡ್ರಾಮಕ್ಕೆ ಕಾರಣವಾಗಿದೆ. ಕುವೆಂಪು ರಂಗ ಮಂದಿರದಲ್ಲಿ ಇಂದು ಆಶ್ರಯ ಫಲಾನುಭವಿಗಳ ಆಯ್ಕೆಯನ್ನ ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ನಾಟಕಮಯವಾಗಿದೆ. ಆಯುಕ್ತರನ್ನ ದಿಗ್ಭಂಧಪಡಿಸುವ ಯತ್ನಕ್ಕೆ ಫಲಾನುಭವಿಗಳ ನಡೆಸಿದ್ದಾರೆ. 

ಪಾಲಿಕೆ ಆಯುಕ್ತರ ವಿರುದ್ಧ ಹಕ್ಕುಚ್ಯುತಿ ಮಂಡನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿರುವ ಹೇಳಿಕೆ ಮದ್ಯೆಯೇ ಪ್ರತಿಭಟನಾ ಜಾಗಕ್ಕೆ ಬಂದ ಆಯುಕ್ತರನ್ನ ಆಶ್ರಯ ಮನೆಗಳ ಫಲಾನುಭವಿಗಳು ಮತ್ತು ಬಿಜೆಪಿ ಮಾಜಿ ಕಾರ್ಪರೇಟರ್ ಗಳು ಸೇರಿ ಪಾಲಿಕೆ ಆಯುಕ್ತರನ್ನ ಘೇರಾವ್ ಹಾಕಿದರು. 

ಲಾಟರಿ ಪ್ರಕ್ರಿಯೆಯನ್ನ ಮುಗಿಸಿ ಹೋಗುವಂತೆ ಕುವೆಂಪುರ ರಂಗ ಮಂದಿರದ ಎರಡು ಗೇಟುಗಳನ್ನ ಬಂದ್ ಮಾಡಲಾಯಿತು. ಈ ವೇಳೆ ಮಾಧ್ಯಮಗಳ ಜೊತೆ ನಿಂತು ವಿಡಿಯೋ ತೆಗೆಯುತ್ತಿದ್ದ ಪಾಲಿಕೆ ಪಿಎಗಳ ಮೇಲೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.  ವಿಡಿಯೋ ತೆಗೆಯದಂತೆ ಪ್ರತಿಭಟನಾಕಾರರು ತಾಕೀತು ಮಾಡಿದರು. 

ಪ್ರತಿಭಟನಾಕಾರರನ್ನ ಕೋಟೆ ಪೊಲೀಸ್ ಪಿಐ ಹರೀಶ್ ಪಟೇಲ್ ಸ್ಥಳಕ್ಕೆ ಆಗಮಿಸಿ ಆಯುಕ್ತರನ್ನ ಕಚೇರಿಗೆ ಹೋಗಲು ಬಿಡಿ ಎಂದು ಹೇಳಿದರು ಅವರ ಕಾರಿನ ಮುಂಭಾಗದಲ್ಲಿ ಕುಳಿತು ಬಡವರ ಹಂಚಿ ಹೋಗುವಂತೆ ಆಗ್ರಹಿಸಿದರು. ಈ ವೇಳೆ ಮಾಜಿ ಕಾರ್ಪರೇಟರ್ ಪ್ರಭುವರ ಮನವನ್ನ‌ಪೊಲೀಸರು ಒಲಿಸಿದರೂ ಫಲಾನುಭಾವಿಗಳ ಮನವೊಲಿಸುವವಲ್ಲಿ ಕಷ್ಟವಾಯಿತು. 

ಬಡವರ ಪರವಾಗಿ ಇಂದು ಕರೆಯ ಬೇಕಿದ್ದ ಸಭೆಯನ್ನ ಯಾಕೆ ರದ್ದು ಮಾಡಿದ್ದೀರಿ. ಮೊದಲು ನಮಗೆ ನ್ಯಾಯಕೊಡಿಸಿ ಆಮೇಲೆ ‌ಆಯುಕ್ತರಿಗೆ ರಕ್ಷಣೆ ನೀಡಿ ಎಂಬ ಮಾತುಗಳು ಪೊಲೀಸರನ್ನ ಕಟ್ಟುಹಾಕಿತು. ಆದರೆ ಗೇಟಿನ ಬಳಿ ಪ್ರತಿಭಟನೆ ಕಾರಣದಿಂದ ಆಯುತ್ತರನ್ನ ಕಾಲ್ನಡಿಗೆಯಲ್ಲಿ ಪ್ರತಿಭಟನಾ ಸ್ಥಳದಿಂದ ಪೊಲೀಸ್ ರಕ್ಷಣೆಯಲ್ಲಿ ಸಾಗಿಸಲಾಯಿತು. 

ಇದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಆಯುಕ್ತೆ ಕವಿತಾ ಯೋಗಪ್ಪನವರ್ , 3000 ಮನೆಗಳ ಹಂಚಿಕೆಯಲ್ಲಿ ಈಗಾಗಲೇ 624 ಮನೆಗಳ ಹಂಚಿಕೆಯಾಗಿದೆ. ಆದರೆ 646 ಮನೆಗಳ ಹಂಚಿಕೆಗೆ ಈಗ ಸಿದ್ದತೆ ನಡೆದಿತ್ತು. ಆದರೆ ಮನೆ ಹಂಚಿಕೆಗೆ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ‌. ಮೆಸ್ಕಾಂಗೆ 12‌ಕೋಟಿ ಹಣ ಕಟ್ಟಬೇಕಿದೆ. ಹಾಗಾಗಿ ಇಂದು ಲಾಟರಿ ಎತ್ತುವ ಪ್ರಕ್ರಿಯೆಯನ್ನ ಮುಂದು ಹಾಕಲಾಗಿದೆ. ಈ ವಿಷಯವನ್ನ ಆಶ್ರಯ ಸಮಿತಿ ಅಧ್ಯಕ್ಷರು ಆದ ಮತ್ತು ಶಾಸಕರೂ ಆದ ಚನ್ನಬಸಪ್ಪನವರಿಗೆ ತಿಳಿಸಿರುವುದಾಗಿ ಹೇಳಿದರು.

ಆದರೆ ಇತ್ತ ಶಾಸಕರೂ ಆದ ಮತ್ತು ಸಮಿತಿಯ ಅಧ್ಯಕ್ಷರಾದ ಚೆನ್ನಬಸಪ್ಪನವರು ಆಯುಕ್ತರು ಕಾಂಗ್ರೆಸ್ ಏಜೆಂಟಾಗಿದ್ದಾರೆ. ಲಾಟರಿ ಪ್ರಕ್ರಿಯೆ ರದ್ದುಗೊಳಿಸುವ ಹಕ್ಕು ಸಮಿತಿಯ ಅಧ್ಯಕ್ಷನಿಗೆ ಇದೆ. ನನ್ನ ಗಮನಕ್ಕೆ ಇದು ಬಂದೇ ಇಲ್ಲ. ಅಧ್ಯಕ್ಷನ ಗಮನಕ್ಕೆ ತಾರದೆ ಲಾಟರಿ ಪ್ರಕ್ರಿಯೆ ರದ್ದುಗೊಳಿಸಿ ಅವಮಾನಿಸಿದ್ದಾರೆ. 

ಮುಂದಿನ ವಾರ ಮತ್ತೆ ಇದೇ ಸಭೆಯನ್ನ ನಡೆಸುವುದಾಗಿ ಆಯುಕ್ತರು ಹೇಳಿದ್ದಾರೆ. ಒಂದು ವಾರದಲ್ಲಿ ಮೆಸ್ಕಾಂ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತಾರಾ? ಎಂದು ಪ್ರಶ್ನಿಸಿದ ಅವರು ಸಮಿತಿ ಅಧ್ಯಕ್ಷನನ ಮಾತಿಗೆ ಅಗೌರವಿಸದ ಆಯುಕ್ತರ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು. ಲಾಟರಿ ಪ್ರಕ್ರಿಯೆ ಮುಗಿಸಿ ಮತ್ತೆ ಅಭಿವೃದ್ಧಿ ಇದ್ದರೆ ಸಮಯ ತೆಗೆದುಕೊಂಡು ಕೆಲಸ ಮುಗಿಸೋಣವೆಂದರೂ ಕೇಳದ ಆಯಕ್ತರು ರಾಜಕೀಯ ಪ್ರೇರಿತರಾಗಿ ಸಭೆ ಮುಂದುಹಾಕಿದ್ದಾರೆ ಎಂದು ಹೇಳಿದರು. 

ಆಯುಕ್ತರ ದಿಗ್ಬಂಧನ ಕಾರ್ಯಕ್ರಮ ಮುಗಿದ ನಂತರವೂ ಶಾಸಕ ಚೆನ್ನಬಸಪ್ಪ ಆಶ್ರಯ ಫಲಸನುಭವಿಗಳ ಜೊತೆ ಪದರತಿಭಟನೆ ಮುಂದು ವರೆಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close