ಸುದ್ದಿಲೈವ್/ಶಿವಮೊಗ್ಗ
ಮೀಸಲಾತಿ ವಿಚಾರವಾಗಿ ಇಂದು ಜಿಲ್ಲಾ ಸಮಸ್ತ ಬಂಜಾರ ಸಮಾಜದ ಬಂಧುಗಳ ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಸಂಘಗಳ ಸಂಯುಕ್ತ ಸಹಯೋಗದಲ್ಲಿ ಬಂಜಾರ ಸಮಾಜದ ಜನಜಾಗೃತಿ ಅಭಿಯಾನ ಡಿಸಿ ಕಚೇರಿ ಎದು ನಡೆದಿದೆ.
ಶಿವಮೊಗ್ಗ ಹೊಳೆ ಬಸ್ ನಿಲ್ದಾಣ, ಗೋಪಿ ವೃತ್ತ ಹಾಗೂ ಉಷಾ ನರ್ಸಿಂಗ್ ಹೋಮ್ ನಿಂದ ನಡೆದುಕೊಂಡು ಬಙದ ಪ್ರತಿಭಟನಾಕಾರರು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಧರಣಿ ಕುಳಿತರು.
ಒಳಮೀಸಲಾತಿಯಿಂದ ಬಂಜಾರದ ಮಕ್ಕಳಿಗೆ ವ್ಯಾಸಂಗ ಮಾಡಲಿಕ್ಕೆ ವಿದ್ಯಾರ್ಥಿ ವೇತನ ಹಾಗೂ ಮೀಸಲಾತಿ ಸಿಗುವುದಿಲ್ಲ. ಸಹಾಧನದ ಸವಲತ್ತು ಅಲಭ್ಯ, ವಿದ್ಯಾರ್ಥಿಗಳಿಗೆ ಶೇಕಡವಾರು ಉದ್ಯೋಗ ವಂಚನೆ, ನೌಕರರ ವರ್ಗದವರಿಗೆ ಬಡ್ತಿ ಮೀಸಲಾತಿ ಸಿಗದೆ ವಂಚನೆ, ವಿಎಸ್ ಎಸ್ ಎನ್ ಸಹಕಾರ ಸಂಸ್ಥೆಯಲ್ಲಿ ಬಂಜಾರ ಸಮಾಜದವರಿಗೆ ಸದಸ್ಯರಾಗುವ ಅರ್ಹತೆ ಕಡಿತಗೊಳ್ಳಲಿದೆ.
ತಾಂಡಗಳಲ್ಲಿ ಎಸ್ ಸಿ ಪಿಯಲ್ಲಿ ಸಿಗಬಹುದಾದ ಮೂಲ ಸೌಲಭ್ಯ ರಸ್ತೆ, ಚರಂಡಿ, ಸಮುದಾಯ ಭವನ, ಲೈಬ್ರರಿ, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ. ರೈತರಿಗೆ ಸಿಗಬಹುದಾದ ಗಂಗಾ ಕಲ್ಯಾಣ ಯೋಜನೆಯೂ ಸಿಗದೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮವೇ ಸ್ಥಗಿತಗೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಜಾಗೋ ಬಂಜಾರ, ಮಾರೋ ನಂಗಾರ ಎಂಬ ಅಭಿಯಾನದ ಅಡಿ ಈ ಜಾಗೃತಿ ಸಮಾವೇಶ ನಡೆದಿದೆ. ಶಾಸಕಿ ಶಾರದ ಪೂರ್ಯನಾಯ್ಕ ಅವರ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ, ಸೊರಬ ಮತ್ತು ತೀರ್ಥಹಳ್ಳಿಯ 6 ತಾಲೂಕಿನ ಸಮುದಾಯದ ಸಮಾಜದವರು ಭಾಗಿಯಾಗಿದ್ದರು.