ಸುದ್ದಿಲೈವ್/ಶಿವಮೊಗ್ಗ
ಬೆಳಗಾವಿ ವಿಧಾನಸೌಧದ ಮುಂದೆ ಪಂಚಮಸಾಲಿ ಹೋರಾಟ ಹಾಗೂ ಲಾಠಿ ಚಾರ್ಜ್ ವಿಚಾರದಲ್ಲಿ ಪೊಲೀಸರ ವೈಫಲ್ಯವೆದ್ದು ಕಾಣುತ್ತಿದೆ ಎಂದು ಮಾಜಿ ಡಿಸಿಎಂ ಆರೋಪಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಸಮಾಜ ಸ್ವಾಭಾವಿಕವಾಗಿ ಬೇಡಿಕೆಗಳಿಗೆ ಮನವಿ ಸಲ್ಲಿಸುತ್ತಾರೆ. ಆದರೆ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕೆನ್ನುವುದು ಸರ್ಕಾರ ತಿಳಿದಿರಬೇಕು. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಆಕ್ಷೇಪಿಸಿದರು.
ಪಂಚಮಸಾಲಿಯವರು ಮೊದಲೇ ಪ್ರತಿಭಟನೆ ಬಗ್ಗೆ ತಿಳಿಸಿದ್ದರು. ಸರ್ಕಾರದ ಕ್ರಮಕ್ಕೆ ನಾನು ಖಂಡನೆ ವ್ಯಕ್ತಪಡಿಸುತ್ತೇನೆ. ಸರ್ಕಾರ ಮೊದಲು ಎಲ್ಲರ ಮೇಲಿನ ಕೇಸು ವಾಪಸ್ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೋರಬೇಕು. ಲಾಠಿ ಚಾರ್ಜ್ ಮಾಡಿರುವುದು ಒಳ್ಳೆಯದಲ್ಲ. ಸರ್ಕಾರ ಬೇಡಿಕೆ ಬಗ್ಗೆ ಕೂತು ಮೊದಲು ಚರ್ಚೆ ಮಾಡಲಿ.ಲಾಠಿ ಚಾರ್ಜ್ ಕ್ರಮ ಸರಿಯಲ್ಲ ಎಂದು ಗುಡುಗಿದರು.
ವೈನಾಡುವಿಗೆ ಸಿಎಂ ಸಿದ್ಧರಾಮಯ್ಯ ಪರಿಹಾರ ಘೋಷಿಸಿದ್ದರು. ಸಂತ್ರಸ್ತರಿಗೆ ಮನೆ ಕಟ್ಟಿ ಕೊಡುತ್ತೇವೆಂದು ಹೇಳಿದ್ದರು. ಅದು ಕರುಣೆಯೂ ಅಲ್ಲ ಭಿಕ್ಷೆಯೂ ಅಲ್ಲ. ಅವರ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಮನಧಿ ಮನವೊಲಿಸಲು ಆ ತರಾ ಹೇಳಿದ್ದಾರೆ. ಮುಸಲ್ಮಾನರನ್ನು ತೃಪ್ತಿ ಪಡಿಸಲು ಇವರು ಹೊಟಿದ್ದಾರೆ. ರಾಜ್ಯದಲ್ಲೂ ಮನೆಗಳು ಬಿದ್ದಿವೆ. ಶಿವಮೊಗ್ಗದಲ್ಲಿ ಮನೆಗಳು ಬಿದ್ದಿವೆ. ಅವರಿಗೂ ಪರಿಹಾರ ಮೊದಲು ನೀಡಲಿ ಎಂದು ಆಕ್ಷೇಪಿಸಿದರು.
ಅವರ ನಾಯಕರನ್ನು ಸಂತೃಪ್ತಿಗೊಳಿಸಲು ಸಿಎಂ ಸಿದ್ಧರಾಮಯ್ಯ ಪರಿಹಾರ ಘೋಷಿಸಿದ್ದಾರೆ ಅಷ್ಟೇ ಎಂದು ಈಶ್ವರಪ್ಪ ಸರ್ಕಾರ ಮತ್ತು ಸಿದ್ದರಾಮಯ್ಯನವರನ್ನ ತರಾಟೆಗೆ ತೆಗೆದುಕೊಂಡರು.