ಸುದ್ದಿಲೈವ್/ಶಿವಮೊಗ್ಗ
ಪರಿಶಿಷ್ಟ ಜಾತಿಯ 49 ಅಲೆಮಾರಿ ಸೂಕ್ಷ್ಮ, ಅತಿ ಸೂಕ್ಷ್ಮ ಸಮುದಾಯ ಜಾತಿಯವರಿಗೆ ಶೇ.3% ಒಳ ಮೀಸಲಾತಿ ನೀಡುವ ಬಗ್ಗೆ ಶಿಳ್ಳೇಕ್ಯಾತ ಜನಾಂಗ ಜನಜಾಗೃತಿಗೆ ಮುಂದಾಗಿದೆ.
ಡಿ.18 ರಂದು ಒಳ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿ ಚಲೋವನ್ನ ಹಮ್ಮಿಕೊಂಡಿರುವ ಸಮಾಜದ ಮುಖಂಡರು ಈ ಕುರಿತು ಜನಜಾಗೃತಿಗೆ ಮುಂದಾಗಿದ್ದಾರೆ. ಸಮುದಾಯದ ಮುಖಂಡರು ಶಿವಮೊಗ್ಗ ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದಲ್ಲಿ ಬಂಟಿಂಗ್ಸ್, ಕರಪತ್ರ, ಸ್ಟಿಕ್ಕರ್ ಗಳನ್ನ ಹಂಚುವ ಮೂಲಕ ಜನಜಾಗೃತಿ ಮೂಡಿಸಲಾಯಿತು.
ಶಿಳ್ಳೇಕ್ಯಾತರ ಜನಾಂಗದ ಮುಖಂಡರು ಪರಿಶಿಷ್ಟ ಜಾತಿಯ 49 ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಒಳ ಮೀಸಲಾತಿಯು 3% ನಿಗದಿ ಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ದಿನಾಂಕ 18-12-2024 ರಂದು "ಬೆಳಗಾವಿಯ ಸುವರ್ಣ ಸೌಧ ಚಲೋ " ಹೋರಾಟ ಹಮ್ಮಿಕೊಂಡಿದೆ.
ಈ ಕುರಿತು ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಅಲೆಮಾರಿ ಸಂಘಟನೆ ಎಲ್ಲಾ 49 ಅಲೆಮಾರಿ ಬಂಧುಗಳ ಜೊತೆ ಭಾಗವಹಿಸಲು ಸಿದ್ದತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಅಲೆಮಾರಿ ಮತ್ತು ಅರೆ ಅಲೆಮಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುಷ್ಠಾನ ಸಮಿತಿ ಸದಸ್ಯರಾದ ಸಂದೀಪ್.ಜಿ ಹಾಗೂ ಸಮುದಾಯದ ಪ್ರಮುಖ ಮುಖಂಡ ರಾದ ನಾಗರಾಜಪ್ಪ, ಶೇಖರಪ್ಪ, ತಿಪ್ಪೇಶ, ರಮೇಶ, ಪ್ರತಾಪ್, ನಾಗಪ್ಪ, ಸಂತೋಷ್ ಹಲವಾರು ಪಾಲ್ಗೊಂಡಿದ್ದರು.