ಜಗದೀಶ್ ಬಿಡುಗಡೆ


ಸುದ್ದಿಲೈವ್/ಶಿವಮೊಗ್ಗ

ಅನುಮಾನಗೊಂಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ6 ಆರೋಪಿ ಜಗದೀಶರವರ ಬಿಡುಗಡೆಯಾಗಿದೆ.  ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದಿಂದ ಜಗದೀಶ್ ಬಿಡುಗಡೆಯಾಗಿದೆ. 

ಜಾಮೀನು ಸಿಕ್ಕ ಎರಡು ದಿನಗಳ ಬಳಿಕ  ಜಗದೀಶ್ ಬಿಡುಗಡೆಗೊಂಡಿದ್ದಾನೆ. ನಿನ್ನೆ ಇವರ ಪೋಷಕರು ಟಿವಿ ಮಾಧ್ಯಮಗಳಲ್ಲಿ ಶೂರಿಟಿ ಇಲ್ಲದ ಕಾರಣ ಬಿಡುಗಡೆಗೆ ಅಡ್ಡಿ ಆಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದರು. 

ಜಗದೀಶ್ ಗೆ ಶ್ಯೂರಿಟಿ ಸಿಗದ ಹಿನ್ನೆಲೆ ವಿಳಂಬವಾಗಿ ಬಿಡುಗಡೆಯಾಗಿದ್ದಾನೆ. ಆಗಸ್ಟ್ 29ರಂದು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಜಗದೀಶ್ ಸ್ಥಳಾಂತರವಾಗಿತ್ತು.

ಚಿತ್ರದುರ್ಗದ ಆಟೋ ಡ್ರೈವರ್ ಆಗಿದ್ದ ಜಗದೀಶ್ ರೇಣುಕಾಚಾರ್ಯನನ್ನ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಎಂಬ ಆರೋಪದ ಮೇಲೆ ಆತ ಜೈಲು ಸೇರಿದ್ದ. ಇಂದು ಆತನ ಸಹೋದರಿ ಜಗದೀಶ್ ನನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ.  

ಆಗಸ್ಟ್ ಕೊನೆ ವಾರದಲ್ಲಿ ಏ6 ಆರೋಪಿ ಜಗದೀಶ್, ಎ12 ಆರೋಪಿ ಲಕ್ಷ್ಮಣ್ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಶಿವಮೊಗ್ಗ ಜೈಲಿಗೆ ಶಿಫ್ಟ್ ಆಗಿದ್ದರು. ನಿನ್ನ ಲಕ್ಷ್ಮಣ್ ಬಿಡುಗಡೆಯಾಗಿದ್ದ, ಇಂದು ಜಗದೀಶ್ ಬಿಡುಗಡೆಯಾಗಿದ್ದು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close