ಟಯರ್ ಬ್ಲಾಸ್ಟ್ ಆಗಿ ಖಾಸಗಿ ಬಸ್ ಸಂಪೂರ್ಣ ಬೆಂಕಿಗೆ ಆಹುತಿ



ಸುದ್ದಿಲೈವ್/ಶಿವಮೊಗ್ಗ

ಸಕ್ರೆಬೈಲ್ ಆನೆ ಬಿಡಾರದ ಬಳಿ ಖಾಸಗಿ ಬಸ್ಸೊಂದು ಅಗ್ನಿ ಅಕಸ್ಮಿಕಕ್ಕೆ ತುತ್ತಾಗಿದೆ.  ಇಂದು ಬೆಳಗ್ಗಿನ ಜಾವ ಖಾಸಗಿ ಬಸ್ ಧಗಧಗನೆ ದಹಿಸಿದೆ. 

ಅದೃಷ್ಟಕ್ಕೆ ಯಾವ ಪ್ರಯಾಣಿಕರಿಗೂ ಅಪಾಯ ಉಂಟಾಗಿಲ್ಲ . ಖಾಸಗಿ ಬಸ್ ಮಂಗಳೂರಿನಿಂದ ದಾವಣಗೆರೆಗ ತೆರಳುತ್ತಿತ್ತು . ಜಾವ ನಾಲ್ಕು ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಕ್ರೆಬೈಲ್ ಆನೆ ಬಿಡಾರದ ಬಳಿ ಬಸ್ ಬರುತ್ತಿದ್ದಾಗ ಬಸ್ ನ ಟಯರ್ ಬ್ಲಾಸ್ಟ್ ಆಗಿ ಇಡಿಬಸ್ ಬೆಂಕಿಗೆ ಕಾಣಿಸಿಕೊಂಡಿದೆ.

ತಕ್ಷಣವೇ ಬಸನ್ನು ಚಾಲಕ ರಸ್ತೆ ಬದಿಗೆ ತಂದು. ನಿಲ್ಲಿಸಿದ್ದಾರೆ ಆಬಳಿಕ ಪ್ರಯಾಣಿಕರನ್ನ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ. 18 ಜನ ಪ್ರಯಾಣಿಕರಿದ್ದ ಬಸ್ ನ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ.  ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.


18 ಜನರನ್ನ ಬೇರೆ ಬಸ್ ನಲ್ಲಿ ಸಾಗಿಸಲಾಗಿದೆ. ಪ್ರಕರಣ ಶಿವಮೊಗ್ಗ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close