ಬಡ್ಡಿಗೆ ಬಲಿ?


ಸುದ್ದಿಲೈವ್/ಶಿವಮೊಗ್ಗ

ಖಾಸಗಿ ಫೈನಾನ್ಸ್ ಗಳ ಕಿರುಕುಳದ ಹಿನ್ನಲೆಯಲ್ಲಿ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿಕಾರಿಪುರ ತಾಲೂಕು ಮಾರವಳ್ಳಿ ಗ್ರಾಮದಲ್ಲಿ ನಡೆದಿದೆ. 

ಪ್ರೇಮಾ ಎಂಬ 43 ವರ್ಷದ ಮಹಿಳೆ ನೇಣು ಬಿಗಿದು ಸಾವನ್ನಪ್ಪಿದ್ದಾರೆ. ಖಾಸಗಿ ಫೈನಾನ್ಸ್ ನಲ್ಲಿ ಮೂರು ಲಕ್ಷ ಸಾಲ ಮಾಡಿದ್ದ ಪ್ರೇಮಾ ಬಡ್ಡಿ ಕಟ್ಟಲಾಗದೆ ನೇಣಿಗೆ ಶರಣಾಗಿರುವುದಾಗಿ ತಿಳಿದುಬಂದಿದೆ. 

ಕೂಲಿಕೆಲಸ ಮಾಡುತ್ತಿದ್ದ ಪ್ರೇಮಾ  ನಿನ್ನೆ ಸಂಜೆ ಸಾಲಗಾರರು ಮನೆಗೆ ಬಂದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ೨೫ ರಿಂದ ೩೦ % ಬಡ್ಡಿ ಕಟ್ಟುವಂತೆ ಫೈನಾನ್ಸ್ ನವರು ಒತ್ತಾಯಿಸುತ್ತಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. 

ಪ್ರಕರಣ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close