ಅಪಘಾತ ತಡೆಗೆ ರಿಪ್ಪನ್‌ಪೇಟೆ ಪೊಲೀಸರಿಂದ ವಿನೂತನ ಅಭಿಯಾನ



ಸುದ್ದಿಲೈವ್/ರಿಪ್ಪನ್‌ಪೇಟೆ 

ಪಟ್ಟಣದ ಪೊಲೀಸರು ಇಂದು ಕೆಂಚನಾಳ ಗ್ರಾಪಂ ವ್ಯಾಪ್ತಿಯ ಹಳ್ಳಿ ಹಳ್ಳಿಗಳಿಗೆ ತೆರಳಿ ಟ್ರ್ಯಾಕ್ಟರ್ ಹಾಗೂ ಟ್ರೈಲರ್ ಗಳಿಗೆ ರಿಪ್ಲೆಕ್ಷನ್ ಸ್ಟಿಕ್ಕರ್ ಅಳವಡಿಸುವ ಮೂಲಕ ಚಾಲಕ ಹಾಗೂ ಮಾಲೀಕರಲ್ಲಿ ಜಾಗೃತಿ‌ಮೂಡಿಸುವ ಕಾರ್ಯ ಕೈಗೊಂಡಿದ್ದಾರೆ.

ಹೌದು ರಿಪ್ಪನ್‌ಪೇಟೆ ಪೊಲೀಸ್ ಜೀಪ್ ಕೆಂಚನಾಳ ಗ್ರಾಪಂ ವ್ಯಾಪ್ತಿಯ ಹಳ್ಳಿ ಹಳ್ಳಿಯಲ್ಲೂ ಶಬ್ದ ಮಾಡಿತ್ತು ಕಾರಣವೇನೆಂದರೇ ಅಪಘಾತ ತಡೆಯುವ ಮಹತ್ತರವಾದ ಉದ್ದೇಶದಿಂದ ಟ್ರ್ಯಾಕ್ಟರ್ ಹಾಗೂ ಟ್ರೈಲರ್ ಗಳಿಗೆ ರಿಫ್ಲೆಕ್ಷನ್ ಸ್ಟಿಕ್ಕರ್ ಅಳವಡಿಸುವ ಕಾರ್ಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡದಿಂದ ಹಮ್ಮಿಕೊಳ್ಳಲಾಗಿತ್ತು.

ಕೆಂಚನಾಳ ಗ್ರಾಪಂ ವ್ಯಾಪ್ತಿಯ ಮಾದಾಪುರ, ಆಲುವಳ್ಳಿ , ಹೊನ್ನಕೊಪ್ಪ , ಗಾಳಿಬೈಲು ಗ್ರಾಮದಲ್ಲಿ ಸಂಜೆ ತಡವಾಗಿ ಹೊಲಗಳಿಂದ ಮನೆಗಳಿಗೆ ಬರುವ, ಟ್ರ್ಯಾಕ್ಟರ್, ಟ್ರೇಲರ್‌ಗಳು ರಸ್ತೆಗಳಲ್ಲಿ ಸಂಚರಿಸುವ ಭಾರಿ ವಾಹನಗಳಿಗೆ ಸಮರ್ಪಕವಾಗಿ ಗೋಚರಿಸದ ಕಾರಣ ಅಪಘಾತಗಳು ಸಂಭವಿಸುವ ಸಾಧ್ಯತೆಯೇ ಹೆಚ್ಚು ಈ ಹಿನ್ನಲೆಯಲ್ಲಿ ಇಂದು ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದಲ್ಲಿ ಸಿಬ್ಬಂದಿಗಳ ತಂಡ ಕೆಂಚನಾಳ ಗ್ರಾಪಂ ಸಹಕಾರದೊಂದಿಗೆ ಟ್ರ್ಯಾಕ್ಟರ್ ,ಟಿಲ್ಲರ್ ಹಾಗೂ ಟ್ರೈಲರ್ ಗಳಿಗೆ ರಿಫ್ಲೆಕ್ಷನ್ ಸ್ಟಿಕ್ಕರ್ ಅಂಟಿಸುವ ಕಾರ್ಯ ಕೈಗೊಂಡಿದ್ದರು.

ಕೃಷಿ ಪ್ರಧಾನ ಚಟುವಟಿಕೆಯಾಗಿರುವ ಕೆಂಚನಾಳ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಖುದ್ದು ಪೊಲೀಸರೇ ಗದ್ದೆ , ತೋಟಕ್ಕೆ ಹೋಗಿ ಟ್ರ್ಯಾಕ್ಟರ್ ಹಾಗೂ ಟಿಲ್ಲರ್ ಮಾಲೀಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಸ್ಟಿಕ್ಕರ್ ಅಳವಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಅಪಘಾತ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಟ್ರ್ಯಾಕ್ಟರ್ ಹಾಗೂ ಟ್ರೈಲರ್ ಗಳಿಗೆ ರೇಡಿಯಂ ಸ್ಟಿಕ್ಕರ್ ಅಳವಡಿಸುವ ಮೂಲಕ ಚಾಲಕರಲ್ಲಿ ಜಾಗೃತಿ ಮೂಡಿಸಿದ ರಿಪ್ಪನ್‌ಪೇಟೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ಸಂಧರ್ಭದಲ್ಲಿ ಎಎಸ್ ಐ ಮಂಜಪ್ಪ , ಸಿಬ್ಬಂದಿಗಳಾದ ಉಮೇಶ್ ,ಸೋಮಶೇಖರ್ , ಗಿರೀಶ್ , ಸಂತೋಷ್ , ಹಾಗೂ ಮಧುಸೂಧನ್ ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close