ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆಯ ಮೂರನೇ ತ್ರೈಮಾಸಿಕ ಸಭೆ



ಸುದ್ದಿಲೈವ್/ಶಿವಮೊಗ್ಗ

ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಾಲಯದಲ್ಲಿ ಇಂದು ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆಯ ಮೂರನೇ ತ್ರೈಮಾಸಿಕ ಸಭೆ ನಡೆಯಿತು. ಈ ಸಭೆಯಲ್ಲಿ ಹಿಂದಿನ‌ ಮೂರು ತಿಂಗಳ  ಕಾರ್ಯಕ್ರಮಗಳ ವರದಿ ಹಾಗೂ ನಡಾವಳಿಯನ್ನು ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಮ್ಮು ಫೋಂಡೆಯವರು ವಾಚಿಸಿದರು. ಎಲ್ಲ ಸದಸ್ಯರು ಸಭೆಯಲ್ಲಿ ಮುಂದಿನ ಮೂರು ತಿಂಗಳ ಕಾರ್ಯಯೋಜನೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಸಂಘಟನೆಯ ಬಲವರ್ಧನೆಗೆ ರಾಜ್ಯ ಗೌರವಾಧ್ಯಕ್ಷರಾದ ಶ್ರೀ ಲಕ್ಷ್ಮಣ ಬೋಡಕೆಯವರು ಮಾತನಾಡಿ ಯುವ ಸೇನೆಯ ಧ್ಯೇಯೋದ್ಧೇಶಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ನಂತರ ಮಾತನಾಡಿದ ರಾಜ್ಯಾಧ್ಯಕ್ಷರಾದ ಶ್ರೀ ಸಂತೋಷ್ ವರಕ್ ಅವರು ಅತ್ಯಂತ ಹಿಂದುಳಿದ ಗೌಳಿ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಿದಲ್ಲಿ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವೆಂದರು. ಕ್ರೀಡೆಯೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟು ಪರಿಶ್ರಮ ಪಟ್ಟಲ್ಲಿ ಮಾತ್ರ ಗುರಿ ತಲುಪಲು ಸಾಧ್ಯವೆಂದರು. ಈ ಸಂದರ್ಭದಲ್ಲಿ ದನಗರಗೌಳಿ ಸಮುದಾಯದ ಮೊದಲ ವಕೀಲೆಯಾಗಿರುವ ಶ್ರೀಮತಿ ಸಕ್ಕುಬಾಯಿ ರಾಮಚಂದ್ರ ಶಿಂಧೆಯವರು ಹೆಣ್ಣುಮಕ್ಕಳ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.

ಕುಸ್ತಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕುಮಾರಿ  ಗಂಗಾವತಿ ಬಾಬು ವರಕ್ ಹಾಗೂ ಜುಡೋ ಸ್ಪರ್ಧೇಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಆಡಿಬಂದಿರುವ ಕುಮಾರಿ ಭೂಮಿಕಾ ಗುಂಡ್ರೆ ಅವರೊಂದಿಗೆ ಇತರೆ 8 ವಿದ್ಯಾರ್ಥಿಗಳು ಜುಡೋ ಹಾಗೂ ಕುಸ್ತಿಯಲ್ಲಿ ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ಪ್ರಶಸ್ತಿಗಳನ್ನು ಗಳಿಸಿದ ದನಗರಗೌಳಿ ಸಮುದಾಯ ಯುವ ಪ್ರತಿಭೆಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಯುವ ಸೇನೆಯ ಉಪಾಧ್ಯಕ್ಷರಾದ ಶ್ರೀ ಉಮೇಶ್ ವರಕ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೋಂಡು ಬಾವದಾನೆ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ‌ಬಮ್ಮು ಫೋಂಡೆ, ಖಜಾಂಚಿಗಳಾದ ಲಕ್ಷ್ಮಣ ಕೋಕರೆ, ಸದಸ್ಯರಾದ ವಿಠ್ಠಲ್ ಎಡಗೆ, ಚಿಂಗಳು ಬಾವದಾನೆ, ಜಾನು ಕೋಕರೆ,ಸಕ್ಕು ಡೋಯಿಪೊಡೆ, ವಿಶ್ವ ಎಡಗೆ, ಗಣೇಶ ವರಕ್, ರಾಮಚಂದ್ರ ಶಿಂಧೆ, ಕುಮಾರ್ ಖರಾತ್ ಹಾಗೂ ಇತರರು ಇದ್ದರು.

ಈ ಸಂದರ್ಭದಲ್ಲಿ ಯುವ ಸೇನೆಯ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಪಟಕಾರೆ ಕಾರ್ಯಕ್ರಮವನ್ನು ನಿರ್ವಹಿಸಿ ಸ್ವಾಗತಿಸಿದರು ಹಾಗೂ ಉಪಾಧ್ಯಕ್ಷರಾದ ಉಮೇಶ್ ವರಕ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close