ಹೊಳೆಹೊನ್ನೂರಿನ ಬಳಿ ಎರಡು ಪ್ರತ್ಯೇಕ ರಸ್ತೆ ಅಪಘಾತ ಇಬ್ಬರು ಸಾವು



ಸುದ್ದಿಲೈವ್/ಶಿವಮೊಗ್ಗ

ಹೊಳೆಹೊನ್ನುರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳು ನಡೆದಿದ್ದು ಘಟನೆಯಲ್ಲಿ ಇಬ್ಬರು ಯುವಕರು ಸಾವು ಕಂಡಿರುವ ಬಗ್ಗೆ ವರದಿಯಾಗಿದೆ. 

ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಬಳಿ ಕ್ಯಾಂಟರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು ಕಂಡಿದ್ದಾನೆ. ಭುವನ ಎಂಬ ಯುವಕ (18) ಅಪಘಾತದಲ್ಲಿ ಸಾವನ್ನಪ್ಪಿದ್ದು ಈತ ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದ ನಿವಾಸಿಯಾಗಿದ್ದಾನೆ. 

ಸ್ನೇಹಿತನನ್ನ ಎಕ್ಸಾಮ್ ಬರೆಯಲು ಕೈಮರಕ್ಕೆ ಬಿಡುವಾಗ ಬಳಿ ಸಗಣಿ ಗೊಬ್ಬರದ ಲಾರಿ ಅನ್ ಲೋಡ್ ಮಾಡುವಾಗ ಸೈಡ್ ಹೊಡೆದುಕೊಳ್ಳು ಶಿವಪ್ರಕಾಶ್ ಹೊಳೆಹೊನ್ನೂರು ಅಡ್ಮಿಟ್ ಆಗಿದ್ದಾರೆ. 

ನಾಗಸಮುದ್ರ ಸಮೀಪ ಕಾರು ಹಾಗೂ ಬೈಕ್ ನಡುವೆ  ಇನ್ನೊಂದು ರಸ್ತೆ ಅಪಘಾತ ನಡೆದಿದ್ದು, ಸಾಗರ ಎಂಬ ಯುವಕ (25)  ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಹೊನ್ನಾಳಿ ತಾಲೂಕಿನ ಸೋಮಲಪುರ ಗ್ರಾಮದ ನಿವಾಸಿಯಾಗಿದ್ದಾನೆ. ಹೊಳೆಹೊನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ನಾಗಸಮುದ್ರದಿಂದ ಸನ್ಯಾಸಿಕೋಡಮಗ್ಗಿ ಜಡೆ  ಬೈಕ್ ನಲ್ಲಿ ಮನು ಮತ್ತು ಸಾಗರ ಎಂಬ ಇಬ್ಬರು ಯುವಕರು ಇದ್ದು ಹಿಂಬದಿ ಕುಳಿತಿದ್ದ ಸಾಗರ್ ಸಾವುಕಂಡಿದ್ದಾನೆ. ಮನುವಿನ ಕಾಲು ಮುರಿದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close