ಭೂಮಿ ಹಕ್ಕು ವಿಚಾರದಲ್ಲಿ ಐತಿಹಾಸಿಕ ನಿರ್ಣಯವಾಗುವ ಸಾಧ್ಯತೆಯಿದೆ-ಸಂಸದ ರಾಘವೇಂದ್ರ


ಸುದ್ದಿಲೈವ್/ಶಿವಮೊಗ್ಗ

70 ವರ್ಷಗಳ ಶರಾವತಿ ಜಲವಿದ್ಯುತ್ ಅಡಿಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಭೂಮಿಯನ್ನ ಡಿರಿಸರ್ವ್ ಮಾಡುವ ವಿಚಾರದಲ್ಲಿ ಕಳೆದ 50-60 ವರ್ಷಗಳಿಂದ ಚರ್ಚೆಯಲ್ಲಿದೆ ಎಂದು ಸಂಸದ ರಾಘವೇಂದ್ರ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 9136 ಎಕರೆ ಭೂಮಿಯನ್ನ ಪುನರ್ವಸತಿ ಮಾಡಲಾಗಿತ್ತು. ಆದರೆ ಆಗಲಿಲ್ಲ. ನ್ಯಾಯಯುತ ಪ್ರಯತ್ನವಾಗಿರಲಿಲ್ಲ. ದೆಹಲಿಗೆ ತೆಗೆದುಕೊಂಡು ಹೋದ ವಿಚಾರದಲ್ಲಿ ಮಾಜಿ ಸಿಎಂ ಬಿಎಸ್ ವೈ, ಕುಮಾರ ಸ್ವಾಮಿ,  ಮಾಜಿ ಸಚಿವರಾ ಹಾಲಪ್ಪ, ಆರಗ ಜ್ಞಾನೇಂದ್ರ ಮೊದಲಾದ ನಾಯಕರ ಪ್ರಯತ್ನ ಮಾಡಿದ್ದರು. 

ಚುನಾವಣೆ ವೇಳೆ, ರಾಜ್ಯ ಸರ್ಕಾರಕ್ಕೆ ಸುಪ್ರೀಂ‌ಕೋರ್ಟ್ ಐಒ ಹಾಕಲು ಸೂಚಿಸಿತ್ತು. ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ ಸರ್ಕಾರ ಐಒ ಹಾಕಿದೆ. ವಿಶ್ವಾಸವೇ ಕಳೆದು ಹೋಗುವ ವಿಚಾರವಾಗಿ ಮತ್ತೆ ಆಶಾಭಾವನೆ ಮೂಡಿದೆ. 

ನ್ಯಾಯಾಲಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಷಯ ಬಗೆಹರಿಸಲು ಸಲಹೆ ನೀಡಿದೆ. ಈ ಸಲಹೆ ಆಶಾಭಾವನೆ ಮೂಡಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾರ್ಯದರ್ಶಿಗಳ ನಡುವೆ ಈ  ಹಕ್ಕು ಸಂರಕ್ಷಣೆ ಕಾಯ್ದೆ ಬಗೆಹರಿಸಲಾಗುತ್ತಾದಾ ಎಂದು ಕೇಳಲಾಗಿದೆ. ಇದು ಭರವಸೆ ಮೂಡಿಸಿದೆ ಎಂದರು.  

ಅರಣ್ಯ ಸಚಿವ ಭುಪೇಂದ್ರ ಯಾದವ್ ಭೇಟಿ ಮಾಡಿ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ನ್ಯಾಯ ಒದಗಿಸಲು ಪ್ರಮಾಣಿಕ ಪ್ರಯತ್ನ ನಡೆದಿದೆ. ಇದಕ್ಕೆ ಕೇಂದ್ರಕ್ಕೆ ಅಭಿನಂದಿಸುವೆ. ರಾಜ್ಯ ಸರ್ಕಾರ ಐಒ ಹಾಕಿದೆ ಇಲ್ಲಿಗೆ ಮುಗಿಯಲ್ಲ. ಇದನ್ನ ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು. 

ಆಯಾ ತಾಲೂಕುಗಳಲ್ಲಿ ಬೌಂಡರಿ ಫಿಕ್ಸ್ ಆಗಲಿದೆ. ಎರಡು ತಲೆಮಾರು ಮುಗಿದಿದೆ.ಇದು ಮೂರನೇ ತಲೆಮಾರಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ, ಜನ ಶಾಪಹಾಕುತ್ತಾರೆ.  ರಾಜ್ಯ ಸರ್ಕಾರ ನ್ಯಾಯ ಬಂದಮೇಲೆ ತಡಮಾಡುವ ಬದಲು ಪಕ್ಕಾಪೋಡಿ, ಆರ್ಟಿಸಿ ಗಳನ್ನ ಸಿದ್ದಪಡಿಸಿಕೊಳ್ಳಬೇಕು. ಇದು ಐತಿಹಾಸಿಕ ನಿರ್ಷಯವಾಗಬಹುದು ಎಂದು ಹೇಳಿದರು. 

ಒನ್ ನೇಷನ್ ಒನ್ ಎಲೆಕ್ಷನ್ ನ್ನ ಜಾರಿಗೆ ತಂದರೆ ಯಾರಿಗೂ ನಷ್ಟವಿಲ್ಲ. ಕೆಲವರು ವಿರೋಧಿಸಲು ವಿರೋಧ ಮಾಡಲಾಗುತ್ತಿದೆ ಎಂದ ಅವರು ವಕ್ಫ್ ವಿಚಾರದಲ್ಲಿ ವಿಜೇಂದ್ರರಿಗೆ 150 ಕೋಟಿ ಹಗರಣ ಎಂಬುದನ್ನ ಎತ್ತಿದ್ದಾರೆ ಇದಕ್ಕೆ ಅರ್ಥವಿಲ್ಲ. ರಾಜ್ಯಸರ್ಕಾರ ಯಾರೋ ಮೇಲೆ ಟಾರ್ಗೆಟ್ ಮಾಡಲು ಈ ಹಗರಣದ ಪ್ರಸ್ತಾವನೆ ಮಾಡಿರಬಹುದು ಎಂಬ ಅನುಮಾನ ಹೆಚ್ಚಾಗಿದೆ ಎಂದರು. 

ಕುಮಾರ್ ಬಂಗಾರಪ್ಪನವರ ರಾಜ್ಯಾಧ್ಯಕ್ಷರ ಆಕಾಂಕ್ಷಿ ಎಂದಿರುವುದು ತಪ್ಪಿಲ್ಲ. ಹೈಕಮಾಂಡ್ ಉತ್ತರ ಕೊಡುತ್ತೇ. ರಾಜ್ಯಧ್ಯಕ್ಷ ವಿಜೇಂದ್ರ ಧಕ್ಷ ನಾಯಕರಾಗಿದ್ದಾರೆ. ಜಿಪಂ ತಾಪಂ ಚುನಾವಣೆ ಬರ್ತಾಇದೆ. ಯಾರೇ ಆಕಾಂಕ್ಷಿಗಳಿದ್ದರು. ಕಾರ್ಯಕರ್ತರ ವಿಶ್ವಾಸ ತುಂಬುವ ಕೆಲಸವನ್ನ‌ನಾವು ಮಾಡಬೇಕು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close