ಸುದ್ದಿಲೈವ್/ಶಿವಮೊಗ್ಗ
ತಮಿಳುನಾಡಿನ ಮೇಲ್ಮರತ್ತೂರು ಓಂಶಕ್ತಿ ದೇವಿಯ ದರ್ಶನಕ್ಕೆ ಕಳುವಹಿಸುವ ವಿಚಾರದಲ್ಲಿ ಒಂದು ಕಡೆ ಈಶ್ವರಪ್ಪನವರ ರಾಷ್ಟ್ರಭಕ್ತರ ಬಳಗ ಟೊಂಕಕಟ್ಟಿ ನಿಂತರೆ ಮತ್ತೊಂದೆಡೆ ಸಂಸದ ರಾಘವೇಂದ್ರ ಮತ್ತು ಶಾಸಕರಿಂದ ಬಸ್ ವ್ಯವಸ್ಥೆ ಮಾಡುವ ಮೂಲಕ ಓಂಶಕ್ತಿ ಭಕ್ತರಿಗೆ ಶಕ್ತಿ ತುಂಬಿದ್ದಾರೆ.
ಇಂದು ಶಿವಮೊಗ್ಗ ನಗರದ ಗುಡ್ಡೆಕಲ್ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆವರಣದಿಂದ ತಮಿಳುನಾಡಿನ ಮೇಲ್ಮರತ್ತೂರು ನಲ್ಲಿರುವ ಓಂ ಶಕ್ತಿ ದೇವಿಯ ದರ್ಶನಕ್ಕೆ ತೆರಳುತ್ತಿರುವ ಮಾಲಾಧಾರಿಗಳನ್ನು ಬೀಳ್ಕೊಡಲಾಯಿತು. ಈ ವೇಳೆ ಶಾಸಕರುಗಳಾದ ಚೆನ್ನಬಸಪ್ಪ, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮೋಹನ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಮತ್ತು ಎಂಎಲ್ ಸಿ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್ ಅವರು ತಲೆಗೆ ಪೇಟ ಸುತ್ತಿಕೊಂಡು ಮಾಲಧಾರಿಗಳ ಪ್ರಯಾಣಕ್ಕೆ ಶುಭಕೋರಿದ್ದಾರೆ. 20 ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸಲು ವ್ಯವಸ್ಥ ಮಾಡಿಕೊಟ್ಟಿದ್ದಾರೆ.
ಇಂದು 16 ನೇ ವರ್ಷದಿಂದ ಸತತ ತಮಿಳುನಾಡಿನ ಮೇಲ್ಮರತ್ತೂರುನ ಓಂ ಶಕ್ತಿ ದೇವಿಯ ದರ್ಶನಕ್ಕೆ ತೆರಳುವ ಮಾಲಾಧಾರಿಗಳನ್ನು ನಗರದ ಬೈಪಾಸ್ ರಸ್ತೆಯ ಓಂ ಶಕ್ತಿ ದೇವಿಯ ಆವರಣದಿಂದ 100 ಬಸ್ಸ್ ಗಳಲ್ಲಿ ಸುಮಾರು 5000 ಸಾವಿರ ನಗರದ ಓಂಶಕ್ತಿಗಳಿಗೆ ಇರುಮುಡಿ ಕಟ್ಟು ಸೇವೆ ನಡೆದಿದೆ.
ಇದರಲ್ಲಿ ರಾಷ್ಟ್ರಭಕ್ತರ ಬಳಗದ ಕಾಂತೇಶ್ ರವರು ಊಟದ ವ್ಯವಸ್ಥೆ ಮಾಡಲಾಗಿದೆ. ರಾಗಿಗುಡ್ಡ, ಬಾಪೂಜಿನಗರ ಸೇರಿದಂತೆ 14 ಕಡೆ ಇರಿಮುಡಿ ಕಟ್ಟುವ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರಭಕ್ತರ ಕಡೆಯಿಂದ ಪ್ರಯಾಣಿಸುವ ಭಕ್ತರು ಡಿ.26 ಕ್ಕೆ ಮೇಲ್ಮರತ್ತೂರಿಗೆ ತೆರಳಲಿದ್ದು ಡಿ 31ಕ್ಕೆ ಶಿವಮೊಗ್ಗ ವಾಪಾಸಾಗಲಿದ್ದಾರೆ.
ಬಿಜೆಪಿ ಕಡೆಯಿಂದ ಓ ಶಕ್ತಿ ದರ್ಶನಕ್ಕೆ ಇಂದು ಹೊರಟವರು ಡಿ.24 ಕ್ಕೆ ಮೇಲ್ಮರತ್ತೂರು ತಲುಪಲಿದ್ದು ದೇವಿ ದರ್ಶನಪಡೆದು ವಾಪಾಸ್ ಡಿ.26 ಕ್ಕೆ ಶಿವಮೊಗ್ಗಕ್ಕೆ ವಾಪಾಸ್ ಆಗಲಿದ್ದಾರೆ.