ಅಮಿತ್ ಶಾ ರಾಜೀನಾಮೆಗೆ ಎಸ್ ಡಿಪಿಐ ಹಾಗೂ ದಲಿತ ಸಂಘರ್ಷ ಸಮಿತಿ ಆಗ್ರಹ



ಸುದ್ದಿಲೈವ್/ಶಿವಮೊಗ್ಗ

ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಡಿಎಸ್ಎಸ್ ಗುರುಮೂರ್ತಿ ಬಣ ಮತ್ತು ಎಸ್ ಡಿಪಿಐ ಸಂಘಟನೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದೆ. 

ಮೊದಲು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆ ಅಂಬೇಡ್ಕರ್ ಅವರನ್ನ ಅವಮಾನಿಸಿರುವ ಗೃಹಸಚಿವ ಅಮಿತ್ ಶಾ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಿಲಾನ್ ಮತ್ತು ಇತರರು ಉಪಸ್ಥಿತರಿದ್ದರು. 

ನಂತರ ನಡೆದ ಡಿಎಸ್ ಎಸ್ ಗುರುಮೂರ್ತಿ ಬಣದ ಸಂಘಟನೆ ಟೆಯನ್ನ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎಂ.ಗುರುಮೂರ್ತಿ, ಅಂಬೇಡ್ಕರ್ ಅವರಿಂದಲೇ ಇಂದು ಅಮಿತ್ ಶಾ ಗೃಹಸಚಿವರಾಗಿದ್ದಾರೆ. ಸಂಸತ್ ನಲ್ಲಿ  ಅಂಬೇಡ್ಕರ್ ಅವರನ್ನ ಅಪಮಾನಿಸಿದ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

ಡಿಎಸ್ಎಸ್ ಗುರುಮೂರ್ತಿ

ಜಿಲ್ಲಾ ಸಂಚಾಲಕ ಎಂ ಏಳುಕೋಟಿ, ರಾಜ್ಯ ಕಾರ್ಯಕಾರಿ ಸದಸ್ಯರಾದ ಶಿವಬಸಪ್ಪ, ಜಿಲ್ಲಾ ಸಂಘಟನಾ ಸಂಚಳಕರು, ಶ್ರೀಕಾಂತ್ ಚಂದ್ರಜೋಗಿ ಕಾಚಗೊಂಡನಹಳ್ಳಿ ನಾಗರಾಜ್, ಚಿಕ್ಕಮರಡಿ ರಮೇಶ್, ಹರಿಗೆ ರವಿ, ಚಂದ್ರಜೋಗಿ, ನಿವೃತ್ತ ಪ್ರಾಂಶುಪಾಲ ಆಂಜನಪ್ಪ ಮೊದಲಾದವರು ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close