ಶವಗಾರಕ್ಕೆ ತೆರಳಿದ ಅಂಬ್ಯುಲೆನ್ಸ್?


ಸುದ್ದಿಲೈವ್/ನಗರ

ಹೊಸನಗರ ತಾಲೂಕು ನಗರ ಹೋಬಳಿಯ 24×7 ಅಂಬ್ಯುಲೆನ್ಸ್ ನ್ನ ಸ್ಥಗಿತಗೊಳಿಸಿತುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಕ್ರಮ ಜರುಗಿಸುವುದಾಗಿ ಡಿಹೆಚ್ ಒ ಡಾ.ನಟರಾಜ್ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. 

ನಗರ ಹೋಬಳಿಯ 24×7 ಆಸ್ಪತ್ರೆಯಲ್ಲಿ ಈ ಹಿಂದೆ ಬಿಜೆಪಿ ನಗರ ಹೋಬಳಿ ಘಟಕ ಭರ್ಜರಿ ಪ್ರತಿಭಟನೆ ನಡೆಸಿ ಅವ್ಯವಸ್ಥೆಯ ಕುರಿತು ಗಮನ ಸೆಳೆದಿದ್ದರು. ಆದರೆ ಡಿಹೆಚ್ ಒ ಅವರ ಮಧ್ಯಪ್ರವೇಶದಿಂದ ಸಮಸ್ಯೆಯನ್ನ ಬಗೆಹರಿಸುವುದಾಗಿ ಹೇಳಿದ್ದು ಪ್ರತಿಭಟನೆ ಹಿಂಪಡೆಯಲಾಗಿತ್ತು. 

ಆದರೆ ಇದೀಗ ಬಿಜೆಪಿಯ ನಗರದ ನಿತಿನ್ ಮಾತನಾಡಿ, ಈ ಪ್ರತಿಭಟನೆಯ ವೇಳೆ ಡಿಹೆಚ್ ಒ ಅವರ ಆಶ್ವಾಸನೆಯಿಂದಾಗಿ ಪ್ರತಿಭಟನೆ ಹಿಂಪಡೆಯಲಾಗಿತ್ತಾದರೂ ಅಂಬ್ಯುಲೆನ್ಸ್ ನ ಕೊರತೆ ಹಾಗೆ ಉಳಿದಿದೆ ಎಂದು ಆರೋಪಿಸಿದ್ದಾರೆ. 

ನಗರದಲ್ಲಿ ಎರಡು ಘಟಿಗಳು, ಸಿಗಂದೂರು ಭಾಗದಿಂದಲೂ ರೋಗಿಗಳನ್ನ ಹೊತ್ತು ತರಬೇಕಿದೆ. ಆದರೆ ಕಳೆದ ಒಂದು ತಿಂಗಳಿಂದ ಅಂಬ್ಯುಲೆನ್ಸ್ ಸ್ಥಗಿತಗೊಂಡಿದೆ. ಪ್ರತಿಭಟನೆಯ ವೇಳೆ ಹೊರಭಾಗದಲ್ಲಿ ನಿಂತಿದ್ದ ವಾಹನ ಈಗ ಶವಪರೀಕ್ಷೆ ಕೇಂದ್ರದ ಬಳಿ ತಂದು ಇರಿಸಲಾಗಿದೆ. ಇದು ಕಳೆದ ಒಂದು ವಾರದಿಂದ ನಿಂತಿದೆ. ಹೊಸದಾಗಿ ಈ ಆಸ್ಪತ್ರೆಗೆ ಬಂದಿರುವ ಅಂಬ್ಯುಲೆನ್ಸ್ ನ ನಾಲ್ಕು ಚಕ್ರಗಳನ್ನ ಬೇರೆ ವಾಹನಕ್ಕೆ ಹಾಕಿರುವುದರಿಂದ ಸವೆದಿರುವ ಟಯರ್ ಗಳನ್ನ ಅಳವಡಿಸಿರುವ ಅಂಬ್ಯಲೆನ್ಸ್ ಶವಗಾರಕ್ಕೆ ಸೇರಿದ್ದಾಗಿ ವ್ಯಂಗ್ಯವಾಡಿದ್ದಾರೆ. 

ಆದರೆ ಡಿಹೆಚ್ ಒ ಡಾ.ನಟರಾಜ್ ಮಾತನಾಡಿ, ನಗರ ಹೋಬಳಿಯ ಆಸ್ಪತ್ರೆಯ ಅಂಬ್ಯುಲೆನ್ಸ್ ಇತ್ತೀಚಿನವರೆಗೂ ಕೆಲಸ ನಿರ್ವಹಿಸುತ್ತಿತ್ತು. ಸರಿಯಿಲ್ಲವೆಂದರೆ ಬೇರೆ ವಾಹನ ಬಳಕೆಗೂ ಸೂಚಿಸಿದ್ದೆ. ವೈದ್ಯರ ಬಗ್ಗೆ ಮಾಹಿತಿ ಪಡೆದು ಸರಿಪಡಿಸಲಾಗಿವುದು. ಈಗಾಗಲೇ ಹಿಂದೆ ಪ್ರತಿಭಟನೆ ನಡೆಸಿದ ಸ್ಥಳೀಯರಿಗೆ ವೈದ್ಯರನ್ನ ಮತ್ತು ಲ್ಯಾಬ್ ಟೆಕ್ನಿಷಿಯನ್ ನನ್ನ ನೀಡಿ ಸರಿಪಡಿಸಲಾಗಿದೆ. ಅಂಬ್ಯುಲೆನ್ಸ್ ಸಮಸ್ಯೆಯನ್ನ ಬಗೆಹರಿಸುವುದಾಗಿ ಭರವಸೆ ನೀಡಿದರು


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close