ಜನಶತಾಬ್ದಿ ರೈಲಿಗೆ ಸಿಲುಕಿ ನಿವೃತ್ತ ನೌಕರ ಆತ್ಮಹತ್ತೆ



ಸುದ್ದಿಲೈವ್/ಶಿವಮೊಗ್ಗ

ರೈಲಿಗೆ ಸಿಲುಕಿಕೊಂಡು ಸರ್ಕಾರಿ ನಿವೃತ್ತ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ನಗರದ ಶೇಷಾದ್ರಿಪುರಂನ ಸಾಮಿಲ್ ಬಳಿ ನಿನ್ನೆ ಜನ ಶತಾಬ್ದಿ ರೈಲಿಗೆ ಸಲುಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರನ್ನ ಚಿಕ್ಕನರಸಯ್ಯ(70) ಎಂದು ಗುರುತಿಸಲಾಗಿದೆ. 

ನಿನ್ನೆ ಜನಶತಾಬ್ದಿ ರೈಲು ಶಿವಮೊಗ್ಗಕ್ಕೆ ವಾಪಾಸ್ ಬರುವ ವೇಳೆ ಚಿಕ್ಕನರಸಯ್ಯ ರೈಲಿಗೆ ಮೈವೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರನ್ನ ಮೊದಲಿಗೆ ಅಪರಿಚಿತ ಶವ ಎಂದು ಪರಿಗಣಿಸಲಾಗಿತ್ತು. 

ಇಂದು ಚಿಕ್ಕನರಸಯ್ಯನವರು ಬಂದು ಮೃತದೇಹವನ್ನ ಗುರುತುಹಚ್ಚಿದ್ದಾರೆ. ತ್ಯಾವರೆ ಚಟ್ನಹಳ್ಳಿಯ ನಿವಾಸಿಯಾದ ಚಿಕ್ಕನರಸಯ್ಯ ಕೃಷಿ ಇಲಾಖೆಯಲ್ಲಿ ಸೇವೆಸಲ್ಲಿಸಿದ್ದರು. ಪ್ರಕರಣ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close