ಹರಮಘಟ್ಟ ರಂಗಪ್ಪ |
ಸುದ್ದಿಲೈವ್/ಶಿವಮೊಗ್ಗ
ಅಂಬೇಡ್ಕರ್ ರವರನ್ನ ಅವಮಾನಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ರನ್ನ ಅವಮಾನಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾರನ್ನ ಕೇಂದ್ರ ಮಂತ್ರಿ ಮಂಡಲದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹರಮಘಟ್ಟ ರಂಗಪ್ಪ ಆಗ್ರಹಿಸಿದ್ದಾರೆ.
ಡಿ.18 ರಂದು ಸದನದಲ್ಲಿ ಡಾ.ಅಂಬೇಡ್ಕರ್ ಬಗ್ಗೆ ಅಮಿತ್ ಶಾರವರು ತಮ್ಮ ಮನಸ್ಸಿನಲ್ಲಿರುವ ಮಾತನ್ನ ಆಡಿದ್ದಾರೆ.ಅಂಬೇಡ್ಕರ್ ರವರ ಸ್ಮರಣೆ ಮಾಡುವುದೆ ಒಂದು ವ್ಯಸನವಾಗಿದೆ ಎಂದು ಬಹಿರಂಗ ಹೇಳಿಕೆ ನೀಡಿರುವ ಗೃಹಸಚಿವರ ಮಾತು ಖಂಡನೀಯ, ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವುದು ವ್ಯಸನವಲ್ಲ ಸ್ಮರಣೆ ಎಂದು ಹೇಳಿದ್ದಾರೆ.
ಅವಹೇಳನಕಾರಿಯಾಗಿ ಬಿಂಬಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಕೇಂದ್ರ ಗೃಹಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಹರಮಘಟ್ಟ ರಂಗಪ್ಪ ಆಗ್ರಹಿಸಿದ್ದಾರೆ.