ಕುವೆಂಪು ವಿವಿಯ ಕಾರ್ಯಕ್ರಮದಲ್ಲಿ ಊಟದಲ್ಲಿ ತಾರತಮ್ಯ-ಪತ್ರಕರ್ತರನ್ನ ಅವಮಾನಿಸಿದ್ರಾ ವಿಸಿ?


ಸುದ್ದಿಲೈವ್ ‌/ಶಿವಮೊಗ್ಗ

ಕುವೆಂಪು ವಿಶ್ವ ವಿದ್ಯಾನಿಲಯದ ಸಹ್ಯಾದ್ರಿ ಉತ್ಸವ ಉದ್ಘಾಟನೆ ಕಾರ್ಯಾಕ್ರಮದಲ್ಲಿ ಊಟದ ವ್ಯವಸ್ಥೆಯಲ್ಲಿ ತಾರತಮ್ಯದ ಆರೋಪ ಕೇಳಿ ಬಂದಿದೆ. ಪತ್ರಕರ್ತರನ್ನ  ಮಾತನಾಡಿಸದೆ ಅತಿಥ್ಯದಲ್ಲೂ ಲೋಪವೆಸಗಿರುವ ಬಗ್ಗೆ ಆಕ್ಷೇಪ ಕೇಳಿ ಬಂದಿದೆ.ವ

ಇಂದು ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಇಂದು ಸಹ್ಯಾದ್ರಿ ಉತ್ಸವ ಕಾರ್ಯಕ್ರಮ ಜರುಗಿದೆ.  ವಿದ್ಯಾರ್ಥಿಗಳಿಗೆ,  ಸಿಂಡಿಕೇಟ್ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ಊಟದಲ್ಲಿ ತಾರತಮ್ಯ ಮಾಡಿರುವ ಬಗ್ಗೆ ದೂರು ಕೇಳಿ ಬಂದಿದೆ. 

ಉದ್ಘಾಟನೆ ಕಾರ್ಯಕ್ರಮ ಮುಗಿದ ನಂತರ ಅತಿಥಿಗೃಹದಲ್ಲಿ ಇವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಅತಿಥಿ ಗೃಹದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಅತಿಥಿ ಗೃಹದಲ್ಲಿದ್ದ ಸಿಂಡಿಕೇಟ್ ಮೆಂಬರ್ಸ್ ಮತ್ತು ಅಧಿಕಾರಿಗಳಿಗೆ ಭಕ್ಷ ಭೋಜನದ ವ್ಯವಸ್ಥೆ ಮಾಡಿದರೆ ವಿದ್ಯಾರ್ಥಿಗಳಿಗೆ  ಅನ್ನ ಸಾಂಬರ್ ವ್ಯವಸ್ಥೆ ಮಾಡಿ ತಾರತಮ್ಯ ಮಾಡಿರುವ ಕುರಿತು ಆರೋಪ ಕೇಳಿಬಂದಿದೆ. ಇದನ್ನ ನೋಡಿದ ಪತ್ರಕರ್ತರಿಗೂ ಮುಜುಗರ ಉಂಟಾಗಿದ್ದು ಮಾತ್ರ ಸುಳ್ಳಲ್ಲ. 

ಇದರ ಜೊತೆಯಲ್ಲಿ ಕಾರ್ಯಕ್ರಮದ ಸುದ್ದಿ ಮಾಡಲು ತೆರಳಿದ್ದ ಪತ್ರಕರ್ತರನ್ನ ಮಾತನಾಡಿಸದೆ ವಿಸಿ ಶರತ್ ಅನಂತ್ ಮೂರ್ತಿ ಅವಮಾನ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಒಂದು ಕಾರ್ಯಕ್ರಮವೆಂದರೆ ಊಟದ ವ್ಯವಸ್ಥೆ ಸರಿಯಿದ್ದರೆ ಕಾರ್ಯಕ್ರಮದ ಯಶಸ್ಸಾಗಲಿದೆ. ಒಂದು ಮದುವೆ ಸಮಾರಂಭ, ತಿಥಿ, ಇನ್ನಿತರೆ ಕಾರ್ಯಕ್ರಮಗಳಲ್ಲಿ ಊಟವೇ ಪ್ರಧಾನ ಆಕರ್ಷಕ ಕೇಂದ್ರ ಬಿಂದು ವಾಗಿರುತ್ತದೆ. 

ಆದರೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಊಟದ ಬಗ್ಗೆನೇ ಆಕ್ಷೇಪ ಕೇಳಿ ಬಂದಿದೆ. ಊಟದ ವಿಚಾರದಲ್ಲಿ ಲೋಪ ಉಂಟಾಗಿರುವ ಬಗ್ಗೆ ಎದ್ದಿರುವ ಆಕ್ಷೇಪ ವಿವಿಯ  ಆಯೋಜನಕರನ್ನ ಸುಮ್ಮನೆ ಬಿಟ್ಟೀತೆ?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close