ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಯಲ್ಲಿ ದೋಖಾ

 


ಸುದ್ದಿಲೈವ್/ಶಿವಮೊಗ್ಗ

ಸೆಕೆಂಡ್ ಹ್ಯಾಂಡ್ ವಾಹನ ಖರೀದಿಯಲ್ಲಿ ದೋಖಾ ಆಗಿದೆ. ಸೆಕೆಂಡ್ ಹ್ಯಾಂಡ್ ಕಾರನ್ನ ಖರೀದಿಸಿದ ವ್ಯಕ್ತಿಗೆ ನಕಲಿ ಆರ್ ಸಿ ಮತ್ತು ನಕಲಿ ದಾಖಲೆಗಳನ್ನ ನೀಡಿ ಮೋಸಮಾಡಲಾಗಿದೆ,
ನಂತರ  ನಕಲಿ ದಾಖಲೆಗಳನ್ನ ವಾಪಾಸ್ ಪಡೆದ ವ್ಯಕ್ತಿ ಚೆಕ್ ನ್ನ ನೀಡಿ ಬೌನ್ಸ್ ಮಾಡಿರುವ ಘಟನೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರಾಗಿ ದಾಖಲಾಗಿದೆ.

ಗೋಪಾಳದ ನಿವಾಸಿ ಪ್ರದೀಪ್ ಎಂಬುವರು ಸೆಕೆಂಡ್ ಹ್ಯಾಂಡ್ ಖರೀದಿಗೆ ಕಾರಿದ್ದರೆ ತಿಳಿಸು ಎಂದು ಹೇಳಿದ್ದಕ್ಕೆ,  ನಿಶ್ಚಲ್ ಎಂಬಾತನು ಕೆ ಎ 18 ಎಂ ಎ 9953 ಮಹೇಂದ್ರ ಎಕ್ಸ್ ಯು ವಿ -500 ಕಾರನ್ನ ತಂದಿದ್ದನು. ಈ ವೇಳೆ ನುಮಾನ್ ಮತ್ತು ನವಾಜ್ ಎಂಬುವರ ಜೊತೆ ಬಂದು ಕಾರು ತೋರಿಸಿದ್ದನು. ಕಾರು ಇಷ್ಟವಾದ ಕಾರಣ ಪ್ರದೀಪ್ 5.5 ಲಕ್ಷ ರೂ ಹಣ ನೀಡಿ ದಾಖಲಾತಿ ಪಡೆದಿದ್ದರು.

ಎರಡು ತಿಂಗಳ ನಂತರ ಎಸ್ ಯು ವಿ ಕಾರನ್ನ  ಮಾರಾಟ ಮಾಡಲು ಹೋದಾಗ ನಿಶ್ಚಲ್ ಕೊಟ್ಟ ದಾಖಲಾತಿಗಳು ನಕಲಿ ಎಂದು ತಿಳಿದು ಬಂದಿದೆ. ಕರೆ ಮಾಡಿದಾಗ ಮೂವರ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಸಿಟಿಯಲ್ಲಿ ನಿಶ್ಚಲ್ ಸಿಕ್ಕಾಗ ಪ್ರದೀಪ್ ದಾಖಲಾತಿಗಳು ನಕಲಿ ಇವೆ ನನ್ನ ಹಣ ಕೊಡು ಎಂದಿದ್ದಾರೆ.

ಆಗ ನಿಶ್ಚಲ್ ನುಮಾನ್ ನನ್ನ‌ಕರೆಯಿಸಿ ಚೆಕ್ ನೀಡಿ ಗಾಡಿ ತೆಗೆದುಕೊಂಡು ಹೋಗಿದ್ದಾರೆ. ಚೆಕ್ ಕ್ಲಿಯರೆನ್ಸ್ ಗೆ ಹಾಕಿದಾಗ ಚೆಕ್ ಬೌನ್ಸ್ ಆಗಿದೆ. ನಂತರ ನಿಶ್ಚಲ್ ಹಾಗೂ ನುಮಾನ್ ರವರಿಗೆ ಪೋನ್ ಮಾಡಿ ಕೇಳಿದಾಗ ಚೆಕ್ ಹಾಕಬೇಡಿ ನಗದು ಹಣವನ್ನು ನಿಮಗೆ ಕೊಡುತ್ತೇವೆ ಎಂದು ಸುಳ್ಳು ಹೇಳಿ ಕಾಲಹರಣ ಮಾಡಿರುತ್ತಾರೆ,

ನಿಶ್ಚಲ್, ನುಮಾನ್, ನವಾಜ್ ರವರು ಪ್ರದೀಪ್ ಗೆ ಸುಳ್ಳು, ದಾಖಲೆ ನೀಡಿ ಕಾರನ್ನು ಕೊಟ್ಟು ನಂತರ ನನ್ನಿಂದ ಕಾರನ್ನು ವಾಪಾಸ್ಸು ಪಡೆದು ಚೆಕ್ ನೀಡಿ ಚೆಕ್ ನಗದೀಕರಣಕ್ಕೆ ಅವರ ಅಕೌಂಟ್ ಗೆ ಹಣ ಹಾಕದೆ  ವಂಚನೆ ಮಾಡಿರುವುದಾಗಿ ದೂರು ದಾಖಲಾಗಿದೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close