ಬೇಡರಹೊಸಳ್ಳಿಯಲ್ಲಿ ಸರಣಿ ಅಪಘಾತ, ಓರ್ವರು ಸಾವು!


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹೊರವಲಯದಲ್ಲಿ ಸರಣಿ ಅಪಘಾತ ನಡೆದಿದೆ. ಮೂಡಿಗೆರೆ ಆಳ್ವಾಸ್ ಕಾಲೇಜಿನಲ್ಲಿ ವಿರಾಸತ್-2024 ಕಾರ್ಯಕ್ರಮವನ್ನ‌ನೋಡಿಕೊಂಡು ವಾಪಾಸ್ ಕೊಪ್ಪಳ ಜಿಲ್ಲೆ ಯಲ್ಬುರ್ಗ ತಾಲೂಕಿನ ಲಿಂಗನಬಂಡಿ ಗ್ರಾಮಕ್ಕೆ ವಾಪಾಸ್ ಆಗುವಾಗ ಅಪಘಾತ ನಡೆದಿದೆ. 

ಅಪಘಾತದಲ್ಲಿ ಸುಲೋಚನಾ ಎಂಬ ಮಹಿಳೆ ಸಾವುಕಂಡಿದ್ದು ಏಳುಜನರಿಗೆ ತೀವ್ರಗಾಯಗಳಾಗಿವೆ. ಶಿವಮೊಗ್ಗದಿಂದ ಹೊನ್ನಾಳಿ ಮಾರ್ಗವಾಗಿ ಯಲ್ಬುರ್ಗಾ ತಾಲೂಕಿಗೆ ಹೊರಟಿದ್ದ  ಕೆ.ಎ-37-ಎನ್-5529 ಕಿಯಾ ಸೆಲ್ಟೋಸ್ ಕಾರಿಗೆ ಎದುರಿನಿಂದ ಬರುತ್ತಿದ್ದ ಕೆ.ಎ-20-ಸಿ-0434 ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. 

ಇನ್ನೋವಾ ಕಾರು ಕಿಯಾ ಸೆಲ್ಟೋಸ್ ಗೆ ಹೊಡೆದ ರಭಸಕ್ಕೆ ಹಿಂಬದಿಯಲ್ಲಿ ಬರುತ್ತಿದ್ದ ಕೆ.ಎ-15-ಎನ್-8277 ಕ್ರಮಸಂಖ್ಯೆಯ ಸ್ವಿಫ್ಟ್ ಡಿಸೇರ್ ವಾಹನಕ್ಕೆ ಡಿಕ್ಕಿಯಾಗಿದೆ. ಸ್ವಿಫ್ಟ್ ಡಿಸೇರ್ ಕಾರಿನಲ್ಲಿದ್ದ, ಚಾಲಕ ಜಾಫರ್ ಸಾಧಿಕ್, ಮಿರಾಜುದ್ದೀನ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಈ ಘಟನೆ ಬೇಡರ ಹೊಸಳ್ಳಿಯ ಕೆರೆ ಏರಿ ಮೇಲೆ ಈ ಘಟನೆ ನಡೆದಿದೆ. ಗಾಯಗೊಂಡ ಸುಲೋಚನಾ, ಅವರ ಅಳಿಯ ಸಂಗನಗೌಡ, ಮಗಳು ಗೀತಾ, ಡ್ರೈವರ್ ಸಿರಾಜ್ ಮೊಮ್ಮಗಳಿಗೆ ತೀವ್ರ ಗಾಯಗಳಾಗಿವೆ. ಸ್ಥಳೀಯರು ಉಪಚರಿಸಿ ಮ್ಯಾಕ್ಸ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕಳುಹಿಸಿದ್ದಾರೆ. 

ಸುಲೋಚನ ಎಂಬ 60 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವುಕಂಡರೆ, ಇವರ ಮಗಳು ಸಹ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.  ಇವರ ಅಳಿಯ ಸಂಗನಗೌಡರು ಲಿಂಗನಬಂಡಿ ಗ್ರಾಮದಲ್ಲಿ ಶಿಕ್ಷಕರಾಗಿದ್ದು ಮಗಳನ್ನ ಮೂಡಿಗೆರೆ ಕಾಲೇಜಿಗೆ ಸೇರಿಸಿದ್ದರು. 

ಮಗಳ ಕಾಲೇಜಿನ ಕಾರ್ಯಕ್ರಮವನ್ನ ನೋಡಿಕೊಂಡು ವಾಪಾಸ್ ಊರಿಗೆ ಶಿವಮೊಗ್ಗದ ಮೂಲಕ ಹೋಗುವಾಗ ಈ ದುರ್ಘಟನೆ ನಡೆದಿದೆ.  ಇನ್ನೋವ ಕಾರಿನ ಚಾಲಕ ಫರಾಜ್ ಎಂದು ತಿಳಿದು ಬಂದಿದ್ದು ಇನ್ನೋವಾಕಾರಿನಲ್ಲಿ ಫರಾಜ್ ಸೇರಿದಂತೆ ನಾಲ್ವರು ಇದ್ದು ಇವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮೂರು ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close