ತಾಳೆಎಣ್ಣೆ ಫ್ಯಾಕ್ಟರಿಯ ಮೋರಿಯಲ್ಲಿ ಪರಶುರಾಮ್ ನ ಹೆಣವನ್ನ ಉರುಳಿಸಿದ್ದು ಹೇಗೆ? ಮೂವರು ಬಂಧನವಾಗಿದ್ದು ಹೇಗೆ?

 


ಸುದ್ದಿಲೈವ್/ಭದ್ರಾವತಿ

ಕಾರೇಹಳ್ಳಿಯ ತಾಳೆಎಣ್ಣೆ ಫ್ಯಾಕ್ಟರಿಯಲ್ಲಿ ಮೈದಳಲು ಪರಶುರಾಮನನ್ನ ಕೊಲೆಗೆ ಸಂಬಂಧಿಸಿದಂತೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತರೀಕೆರೆ ಎಂಸಿ ಹಳ್ಳಿ ನಿವಾಸಿ ಸುದೀಪನಿಗೆ ಭದ್ರಾವತಿ ಮೀನುಗಾರರ ಬೀದಿಯ ಕೃಷ್ಣ ಎಂಬಾತ ಪರಿಚಯವಿದ್ದ. ಸುದೀಪ ಬಿನ್ ಪಳನಿ ಈತ ಮೊದಲು ಎಂಸಿ ಹಳ್ಳಿಯಲ್ಲಿದ್ದು ನಙತರ ಭದ್ರಾವತಿಗೆ ಶಿಫ್ಟ್ ಆಗ್ತಾನೆ. ಈ ವೇಳೆ  ಸುದೀಪ್ ತನಗೆ ಪರಿಚಯಸ್ಥ ಗೋಂದಿ ನಿವಾಸಿ ಮಹಂತೇಶ್ ಅವರ ಪತ್ನಿಯ ಸಹೋದರ ಮತ್ತು ಮೈದೊಳಲು ಪರಮೇಶ್ವರ್ ದುಡಿಮೆ ಇಲ್ಲದೆ ಮನೆಮಂದಿಯವರಿಗೆಲ್ಲಾ ಹಣದ ವಿಚಾರದಲ್ಲಿ ಕಾಟಕೊಡುತ್ತಿರುವ ಬಗ್ಗೆ ಕೃಷ್ಣನ ಬಳಿ ಹೇಳಿಕೊಂಡಿರುತ್ತಾನೆ.

ಮೈದೊಳಲು ಮಲಾಪುರ ಗ್ರಾಮದ ವಾಸಿ ಪರಶುರಾಮ ಈತನನ್ನ ಕೊಲೆ ಮಾಡಿದರೆ 3 ಲಕ್ಷ ರೂ. ಕೊಡುವುದಾಗಿ ಮಹಂತೇಶ್ ಹೇಳಿಕೊಂಡಿರುವುದಾಗಿ, ಅದೂ ಅಲ್ಲದೆ ತನಗೆ ಕೆಲಸ ಇಲ್ಲದ ಕಾರಣ ಕೊಲೆಗೆ ಸಿದ್ದನಿರುವುದಾಗಿ  ಸುದೀಪ್ ತಿಳಿಸಿದ್ದ.

ಆತ ತಿಳಿಸಿದಂತೆ, ಡಿ.09 ರಂದು ಸುದೀಪ್, ಬೊಮ್ಮೇನಹಳ್ಳಿ ಅರುಣ್ ಗೆ ಹೇಳಿದ್ದು, ಅರುಣ್ ಪರಶುರಾಮ್ ನನ್ನ ಹೊಳೆಹೊನ್ಬೂರಿನ ಮೈದೊಳಲು ಮಲಾಪುರದಿಂದ ಭದ್ರಾವತಿಗೆ ಕರೆಯಿಸಿಕೊಂಡು, ಅಲ್ಲಿಂದ ಬಾರಂದೂರಿನ ವೈನ್ ಶಾಪ್ ಕಡೆ ಎಣ್ಣೆಹೊಡೆಯಲು ಹೋಗಿದ್ದಾರೆ.

ಕಾರೇಹಳ್ಳಿಯ ತಾಳೆ ಎಣ್ಣೆ ಪ್ರಾಕ್ಟರಿಗೆ ಸೇರಿದ ತಾಳೆ ಮರಗಳಿರುವ ತೋಟದಲ್ಲಿ ಕಾಲುವೆಯ ಮೋರಿಕಟ್ಟೆಯ ಮೇಲೆ ಸುದೀಪ ಮತ್ತು ಅರುಣ ಕುಡಿಯುವಂತೆ ನಾಟಕ ಮಾಡಿ ಪರಶುರಾಮನಿಗೆ ಎಣ್ಣೆಯನ್ನು ಕುಡಿಸಿದ್ದಾರೆ. ಸುದೀಪನು ತನ್ನ ಬಳಿ ಇದ್ದ ಟವೆಲ್ ನಿಂದ ಪರಶುರಾಮನ ಕುತ್ತಿಗೆ ಬಿಗಿದು ಕಾಲಿನಿಂದ ಮೈಕೈಗೆ ಒದ್ದು ಉಸಿರು ಕಟ್ಟಿಸಿ ಸಾಯಿಸಿ, ಪರಶುರಾಮನು ಸತ್ತ ಮೇಲೆ ಶವವನ್ನು ಕಾಲುವೆಗೆ ತಳ್ಳಿ ವಾಪಾಸ್ ಭದ್ರಾವತಿಗೆ ಬಂದಿದ್ದಾರೆ.

ಆದರೆ ಆ ರಾತ್ರಿ ಪರಶುರಾಮನ ಕೊಲೆ ಮಾಡಿದ್ದರಿಂದ ಸುದೀಪ್ ಗೆ ನಿದ್ದೆ ಬಾರದಿರುವ ಕಾರಣ ಸ್ನೇಹಿತ ಕೃಷ್ಣನಿಗೆ ಕರೆ ಮಾಡಿದ್ದಾನೆ. ನಿಮ್ಮ ಬಳಿ ಒಂದು ವಿಷಯ ಹೇಳ್ಕೊಬೇಕು ಎಂದು ಹೇಳಿದ್ದಾನೆ. ಎಣ್ಣೆ ಹೊಡೆದ ಗುಂಗಿನಲ್ಲಿ ಮಾತನಾಡುತ್ತಿರುವುದಾಗಿ  ಕೃಷ್ಣ ನಿರ್ಲಕ್ಷಿಸಿದ್ದು,  ಅಯ್ಯಪ್ಪ ಮಾಲೆ ಹಾಕಿದ್ದರಿಂದ ಸುದೀಪ್ ಮಾತಿನ‌ಬಗ್ಗೆ ಲಕ್ಷ್ಯ ನೀಡಿರಲಿಲ್ಲ. ಪೂಜೆ ಪುನಸ್ಕಾರ ಮುಗಿಸಿದ್ದಾರೆ. ಈವೇಳೆ ಸುದೀಪ್ ಕೃಷ್ಣನನ್ನ ಹುಡುಕಿಕೊಂಡು ಬಂದು  ಪರಶುರಾಮನ ಕೊಲೆ ವಿಚಾರ ಹೇಳಿದ್ದಾನೆ.

ಕೊಲೆ ಪ್ರಕರಣ ಮುಚ್ಚಿಟ್ಟರೆ ತಪ್ಪಾಗುತ್ತದೆ ಎಂದು ತಿಳಿದು ಕಾರೇಹಳ್ಳಿ ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತೆ ಎಂದು ತಿಳಿದು ಪೇಪರ್ ಟೌನ್ ಪೊಲೀಸ್ ಠಾಣೆಗೆ ಕೃಷ್ಣ‌ಅವರೇ ದೂರು ನೀಡಿದ್ದಾರೆ. ದೂರಿನ ಆಧಾರದ ಮೇರೆಗೆ ಮೂವರನ್ನ ಬಂಧಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close