ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯ ಸಾಗರ ತಾಲೂಕು ಕಲ್ಮನೆ ಗ್ರಾಮದ ಉದ್ರಿ ಸನ್ಯಾಸಿ ಜೆಡ್ಡುಗ್ರಾಮದ ಯುವಕ ಮೀಟರ್ ಬಡ್ಡಿಗೆ ಬೇಸತ್ತು ವಿಷ ಸೇವಿಸಿದ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಡಿ.4 ರಂದು ಮೀಟರ್ ದಂಧೆಗೆ ಬೇಸತ್ತ ವಿಶ್ವನಾಥ್ (28) ಹಳೆ ಮನೆಯಲ್ಲಿ ವಿಷ ಸೇವಿಸಿದ್ದರು. ವಿಶ್ವನಾಥ್ ರನ್ನ ಮೆಗ್ಗಾನ್ ಗೆ ದಾಖಲಾಗಿಸಿತ್ತು. ವಿಶ್ವನಾಥ್ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೂರವ ವಿರುದ್ಧ ದೂರು ದಾಖಲಾಗಿದೆ.
ಶಿವಮೊಗ್ಗದ ಫೈನಾನ್ಸ್ ಸೇರಿದಂತೆ ಎರಡು ಫೈನಾನ್ಸ್ ನಿಂದ ಮತ್ತು ಓರ್ವ ಮಹಿಳೆಯಿಂದ ಸಾಲ ಪಡೆದಿದ್ದರು. ಸಾಲಕ್ಕೆ ಮೀಟರ್ ಬಡ್ಡಿ ಚಾಲೂ ಆಗಿತ್ತು. ಅಸಲಿಗೆ ಬಡ್ಡಿನೇ ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಕುರಿತು ಇಂದು ಬಿಜೆಪಿ ಉಪಾಧ್ಯಕ್ಷ ಹರತಾಳ ಹಾಲಪ್ಪ ಸಹ ಈ ಮೀಟರ್ ಬಡ್ಡಿ ವಿರುದ್ಧ ಗುಡುಗಿದ್ದಾರೆ. ಸಾಗರ ಉಪವಿಭಾಗದ ಪೊಲೀಸರು ಯಾವುದೇ ಕ್ರಮ ಜರುಗಿಸದೆ ಇಲ್ಲ ಎಂಬ ಆರೋಪ ಮಾಡಿದ್ದಾರೆ. ತಕ್ಷಣವೇ ಕ್ರಮ ಆಗುವ ಬಗ್ಗೆ ಆಗ್ರಹಿಸಿದ್ದಾರೆ.