ಆಶ್ರಯ ಮನೆ ಹಂಚಿಕೆಯಲ್ಲಿ ರಾಜಕೀಯ ಸಲ್ಲದು-ಈಶ್ವರಪ್ಪ


ಸುದ್ದಿಲೈವ್/ಶಿವಮೊಗ್ಗ

ಆಶ್ರಯ ಮನೆ ಹಂಚಿಕೆಯಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿಗರಿಗೆ ಹೆಚ್ಚಿಗೆ ಹಂಚಲಾಗಿದೆ ಎಂಬ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಹೇಫಿಕೆಗೆ ಈಶ್ವರಪ್ಪ ತಿರುಗೇಟು ನೀಡಿದ್ದು ಆರ್ ಎಸ್ ಎಸ್ ಮತ್ತು ಬಿಜೆಪಿಗರು ಮನುಷ್ಯರಲ್ವಾ? ಅವರು ಮನೆಕಟ್ಟಿಲ್ವಾ ಎಂದು ಗರಂ ಆದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶ್ರಯ ಮನೆಗಳ ಬಗ್ಗೆ ರಾಜಕೀಯ ಬೆರಸೋದು ಸರಿಯಲ್ಲ. ಬಡವರು ಕಣ್ಣೀರು ಹಾಕ್ತೀದ್ದಾರೆ. ಇವತ್ತು ನಾಳೆ ಮನೆ ಹಂಚುವುದಾಗಿ ಹೇಳಿ  ಆಟಾಡುತ್ತಿದ್ದಾರೆ. 624 ಮನೆಗಳನ್ನ ಹೋರಾಟ ಮಾಡಿ ಹಂಚಲಾಯಿತು. 638 ಮನೆಗಳನ್ನ ಲಾಟರಿ ಮೂಲಕ ಎತ್ತಲು ಮುಂದಾಗಿದ್ದರು. ಆದರೆ ಸಭೆ ಮುಂದು ಹೋಯಿತು. ಮೂಲಭೂತ ಸೌಕರ್ಯಿಲ್ಲವೆಂದು ಪಾಲಿಕೆ ಆಯುಕ್ತರು ಹೇಳಿದ್ದಾರೆ.

ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ತುಂಗನದಿಯಿಂದ ನೀರು ತಲಾಗಿದೆ. ಮೂಲಭೂತ ಸೌಕರ್ಯ ಇಲ್ಲದೆ ಮನೆ ಹಂಚಲು ಮುಂದಾಗಿದ್ದು ಯಾಕೆ? ಇದು ಶಾಸಕರ ಕರ್ತವ್ಯನಾ? ಸರ್ಕಾರದ ಕೆಲಸ ಏನು? ಈ ಬಗ್ಗೆ ಸಚಿವರು ಮಾತನಾಡಲಿ. ಮನೆ ಹಂಚಿಕೆಯ ಬಗ್ಗೆ ಸಚಿವರು ಒಂದು ದಿನಾಂಕ ಸೂಚಿಸಲಿ.  ಮುಸ್ಲೀಂರಿಗೂ ಮನೆ ಹಂಚಲಾಗಿದೆ. ಇದರಲ್ಲಿ ಮುಸ್ಲೀಂ, ಆರ್ ಎಸ್ ಎಸ್ ಪ್ರಶ್ನ ಏಕೆ? ಭ್ರಷ್ಠಾಚಾರ ಇದೆ ಎನಿಸಿದರೆ ಸೀಮಿತ ಅವಧಿಯಲ್ಲಿ ತನಿಖೆ ನಡೆಸಿ ಎಂದರು. 

ಆರ್ ಎಸ್ ಎಸ್ ಬಿಜೆಪಿಗಗರಿಗೆ ಮನೆ ಹಂಚಲಾಗಿದೆ ಎಂದು ಏಕೆ ಹೇಳ್ತೀರಾ? ಬಡವರಿಗೆ ಅನ್ಯಾಯ ಮಾಡಬೇಡಿ, ಸಚಿವರು ಬಂದು ಪಟ್ಟಿ ನೋಡಲಿ ಅನ್ಯಾಯವಾಗಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ. ಆರ್ ಎಸ್ ಎಸ್ ಮುಸ್ಲೀಂರು ಹಣಕಟ್ಟಿರಲ್ವಾ? ಎಂದು ಹೇಳಿದರು. 

ಪತ್ರಕರ್ತರ ಸೂರ್ಯನಾರಾಯಣ್ ಅವರ ಮಗ ಅನಿಕೇತನ್ ಕ್ಲಾಟ್ ನಲ್ಲಿ ದೇಶಕ್ಕೆ 7 ನೇ ರ್ಯಾಂಕ್ ಪಡೆದಿದ್ದು ಖುಷಿ ತಂದಿದೆ. ಡಿ.14 ರಂದು ಪೇಜಾವರ ಶ್ರೀಗಳು ನಮ್ಮ‌ಮನೆಗೆ ಬರ್ತಾ ಇದ್ದಾರೆ. ಬಾಲರಾಮನ ಪೂಜೆ ನಡೆಯಲಿದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close