ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಸಹಾಯಕ ಔಷಧ ನಿಯಂತ್ರಕರಿಗೆ ದಮ್ಕಿ ಪತ್ರ ಬಂದಿದೆ. ಡಿ.12 ರಂದು ಪತ್ರ ಬಂದಿದ್ದು ಇದೊಂದು ಅಸಂಜ್ಞೇಯ ಪ್ರಕರಣವೆಂದು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಡ್ರಗ್ ಕಂಟ್ರೋಲ್ ಕಚೇರಿಯ ಸಹಾಯಕ ಔಷಧ ನಿಯಂತ್ರಕ ವೈದ್ಯರಿಗೆ ನೀನು ಸಿಕ್ಕ ಸಿಕ್ಕವರಿಗೆ ಕೊಡುತ್ತಿರುವ ಕಿರುಕುಳಕ್ಕೆ ಮುಕ್ತಾಯ ಮಾಡಲು ಸೂಚಿಸುತ್ತೇನೆ. ಇಲ್ಲವಾದಲ್ಲಿ ಮನೆಗೆ ನುಗ್ಗಿ ಆಸಿಡ್ ಅಟ್ಯಾಕ್ ಮಾಡಲು ಹುಡುಗರು ರೆಡಿ ಇದ್ದಾರೆ.
ನಿನಗೆ ಹೆಂಡತಿ ಮಕ್ಕಳು ಮುಖ್ಯವಲ್ಲ, ಧನದಾಹಿಯಾಗಿರುವ ನಿನಗೆ ಕೈ ಕಾಲು ಮುರಿಸಿಕೊಳ್ಳುವ ಚಟ ಇರಬಹುದು, ನಮ್ಮವರ 14-15 ಮೆಡಿಕಲ್ ಶಾಪ್ ಗಳಿವೆ, ಅವುಗಳಲ್ಲಿ ಒಂದಕ್ಕೆ ತೊಂದರೆಯಾದರೆ ನಿನ್ನ ಕೈ ಕಾಲು ಮುರಿಯುತ್ತೇನೆ.
ನೀನು ಯಾರಿಗೆ ಬೇಕಾದರೂ ದೂರು ಮಾಡಬಹುದು, ಜೀವ ಮುಖ್ಯವೋ, ಜೀವನ ಮುಖ್ಯವೋ ನಿರ್ಧರಿಸು, ನಾನು ಜೈಲಿಗೆ ಹೋದರೆ ಭಯವಿಲ್ಲ, ನನ್ನನ್ನು ಬಿಡಿಸಲು ಜನರಿದ್ದಾರೆ, ನಿನ್ನ ಹೆಂಡತಿಯನ್ನು ಎತ್ತಿ ಹಾಕಿಕೊಂಡು ಹೋದರೆ ಏನು ಮಾಡುತ್ತೀಯಾ?ಈಗ್ಗೆ 2 - 3 ತಿಂಗಳಿಂದ ನಿನ್ನನ್ನು ಫಾಲೋ ಮಾಡುತ್ತಿದ್ದೇವೆ, ನಿನ್ನ ಕೆಟ್ಟ ಕಾಲ ಶುರುವಾಗಿದೆ ಎಂದು ಪತ್ರ ಬಂದಿದೆ.
ಸಹಾಯಕ ಔಷಧ ನಿಯಂತ್ರಕ ಡಾ.ವೀರೇಶ್ ಬಾಬು ಅವರಿಗೆ ನಗರದಲ್ಲಿ ಪ್ರಾಮಾಣಿಕ ಅಧಿಕಾರಿ ಎಂಬ ಹೆಸರಿದೆ. ನಗರದ ಕೆಲ ಮೆಡಿಕಲ್ ಶಾಪ್ ಗಳಲ್ಲಿ ಕಾನೂನು ಬಾಹಿರ ಮೆಡಿಸಿನ್ ಮಾರಾಟಕ್ಕೆ ಕ್ರಮ ಜರುಗಿಸಿದ್ದ ಡಾ.ವೀರೇಶ್ ಬಾಬುವಿಗೆ ಇಂತಹ ಧಮ್ಕಿ ಪತ್ರಗಳು ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೆ ಗಾಂಜಾದಂತಹ ಕಿಕ್ ಬರುವ ಕೆಲ ಡ್ರಗ್ ಗಳ ಮಾತ್ರೆಯನ್ನ ಇತ್ತೀಚೆಗೆ ಮಾರುವಂತಿಲ್ಲ ಎಂಬ ಸರ್ಕಾರದ ಆದೇಶದ ಮೇರೆಗೆ ಡ್ರಗ್ ಕಂಟ್ರೋಲರ್ ದಾಳಿ ನಡೆಸಿದ್ದರು. ಅದು ಖರ್ಚಾಗುವ ಬಗ್ಗೆ ಮೆಡಿಕಲ್ ಶಾಪ್ ನವರು ಡ್ರಗ್ ನಿಯಂತ್ರಣಾಧಿಕಾರಿಗಳಿಗೆ ವರದಿ ನೀಡಬೇಕಿತ್ತು. ಈ ಹಿನ್ನಲೆಯಲ್ಲಿ ದಾಳಿ ನಡೆದಾಗ ಮೆಡಿಕಲ್ ಶಾಪ್ ನವರು ಸಂಘಟನೆಗೆ ದೂರು ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿಯಾಲ್ಲಿ ಬೆದರಿಕೆ ಪತ್ರಗಳು ಬಂದಿವೆಯಾ? ಅಥವಾ ಬೇರೆ ಕಾರಣಕ್ಕೆ ಪತ್ರ ಬಂದಿವೆಯೋ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿಯಬೇಕಿದೆ.