ಸುದ್ದಿಲೈವ್/ಶಿವಮೊಗ್ಗ
ಆಶ್ರಯ ಮನೆ ಹಂಚಿಕೆಯ ವಿಚಾರದಲ್ಲಿ ಕಾಂಗ್ರೇಸ್ v/s ಬಿ ಜೆ ಪಿ ಆಶ್ರಯ ಟಾಕ್ ವಾರ್ ಮುಂದುವರೆದಿದೆ. ಶನಿವಾರ ಆಶ್ರಯ ಸಮಿತಿಯ ಲಾಟರಿ ಸಭೆಯ ಗದ್ದಲ ನಡೆದಿದ್ದು ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಶಾಸಕ ಚೆನ್ನಬಸಪ್ಪನವರ ವಿರುದ್ಧ ಮುಗಿಬಿದ್ದಿದ್ದಾರೆ.
ಮೂಲಭೂತ ಸೌಕರ್ಯ ವಿಲ್ಲದೆ ತರಾತುಯಲ್ಲಿ ಮನೆ ವಿತರಣೆಗೆ ಮುಂದಾಗಲಾಗಿದೆ. ನೀರಿನ ವ್ಯವಸ್ಥೆ ಇಲ್ಲ ಕರೆಂಟ್ ವ್ಯವಸ್ಥೆ ಇಲ್ಲ. 2018 ರಲ್ಲಿ ಸಿದ್ದರಾಮಯ್ಯನವರು ನೀಡಿದ ಯೋಜನೆ ಇದಾಗಿದ್ದು ಇದುವರೆಗೂ ಬಿಜೆಪಿ ನಿರ್ಲಕ್ಷ ವಹಿಸಿದ್ದೇಕೆ ಎಂದು ಗುಡುಗಿದರು
ಈ ರೀತಿಯ ಪ್ರವೃತ್ತಿ ಶಾಸಕರಿಗೆ ಒಳ್ಳೆದಲ್ಲ. ಬಡವರಪರ ಹೋರಾಟ ಮಾಡುವುದು ಇವರಿಂದ ಕಲಿಯಬೇಕಾಗಿಲ್ಲ. ಅರ್ಧ ಆದ ಮನೆಗಳನ್ನು ಹಂಚಿದರೆ ಮುಂದೆ ಜನ ಸರ್ಕಾರ ಕ್ಕೆ ಕೇಳ್ತಾರೆ. ಅದೂ ಅಲ್ಲದೆ ಆಶ್ರಯ ಸಮಿತಿಗೆ ಅಧ್ಯಕ್ಷರು ಮಾತ್ರ ಆಯ್ಕೆಯಾದರೆ ಉಳಿದ ಸದಸ್ಯರ ಆಯ್ಕೆಯಿಲ್ಲವಾಗಿದೆ.
ಅದೂ ಅಲ್ಲದೆ ಸಮಿತಿ ಸದ್ಯರಿಲ್ಲದೇ ಶಾಸಕರು ಶಿಷ್ಠಾಚಾರವನ್ನ ಉಲ್ಲಂಘಿಸಿದ್ದಾರೆ. ಜಿಲ್ಲಾ ಉಸ್ತುವರಿ ಸಚಿವ ಮಧುಬಂಗಾರಪ್ಪನವರ ಗಮನಕ್ಕೆ ತಾರದೆ ಹಂಚಕಿಗೆ ಮುಂದಾಗಿರುವುದನ್ನ ಆರೋಪಿಸಿದರು.
ನಾಲ್ಕು ವರ್ಷದ ಹಿಂದೆ 5.20 ಲಕ್ಷ ರೂ ಹಣ ಕಟ್ಟುವಂತಿತ್ತು. ಈಗ 7.50 ಸಾವಿರ ರೂ. ಹಣ ಕಟ್ಟುವಂತಾಗಿದೆ. ಎರಡು ಲಕ್ಷ ರೂಹೆಚ್ಚಾಗಿದ್ದು ಯಾರಿಂದ? ಇದಕ್ಕೆ ಬಿಜೆಪಿ ಕಾರಣವಲ್ಲವೇ ಎಂದು ಪ್ರಶ್ನಿಸಿದ ಆರ್ ಪ್ರಸನ್ನ ಕುಮಾರ್ ಹಳೆಯ ಹಂಚಿಕೆಯಲ್ಲಿ ಬೋಗಸ್ ಆಗಿದೆ ತನಿಖೆಯಾಗಬೇಕು ಎಂದರು.
ಲಾಟರಿ ಪ್ರಕ್ರಿಯೆಗೂ ಮುಂಚೆ ಕುವೆಂಪು ರಂಗ ಮಂದಿರಕ್ಕೆ ಫಲಾನುಭವಿಗಳನ್ನ ಬರಲು ಕರೆಯಲಾಗಿತ್ತು. ಅಂದೇ 11 ಗಂಟೆಗೆ ಸಭೆ ಮುಂದೂಡಲಾಗಿದೆ ಎಂಬ ಬೋರ್ಡ್ ಹಾಕಲಾಯಿತು. ಇದೂ ಸಹ ಆಶ್ರಯ ಸಮಿತಿ ಅಧ್ಯಕಗಷರಾದ ಶಾಸಕ ಚೆನ್ನಬಸಪ್ಪನವರ ಗಮನಕ್ಕೆ ತಾರದೆ ಮುಂದೂಡಿರುವ ಬಗ್ಗೆ ಶಾಸಕರು ಆಕ್ಷೇಪಿಸಿದ್ದಾರೆ ಎಂದು ಮಾಧ್ಯಮದವರು ಸ್ಪಷ್ಠೀಕರಣಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧ್ಯಕ್ಷರು ಸಭೆ ಮುಂದೂಡಿರುವ ಬಗ್ಗೆ ಫಲಾನುಭವಿಗಳಿಗೆ ತಿಳಿಸಲಾಗಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಕಾರ್ಪರೇಟರ್ ಗಳಾದ ಹೆಚ್.ಸಿ. ಯೋಗೀಶ್, ಯಮುನಾರಂಗೇಗೌಡ, ರೇಖಾ ರಂಗನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್,ಭೋವಿ ಸಂಘದ ಅಧ್ಯಕ್ಷ ರವಿಕುಮಾರ್, ರಮೇಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.