ಬುದ್ದಿವಾದ ಹೇಳಿದ ಮಾಜಿ ನಗರ ಸಭೆ ಸದಸ್ಯನಿಗೆ ಮಚ್ಚಿನೇಟು


ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಯಲ್ಲಿ ಮಾಜಿ ನಗರ ಸಭಾ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದೆ. ಮಚ್ಚಿನಿಧ ಹಲ್ಲೆ ನಡೆಸಿದ ಪರಿಣಾಮ ಗಾಯಗಳಾಗಿದ್ದು, ಗಾಯಾಳುವನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಾಜಿ ನಗರ ಸಭಾ ಸದಸ್ಯ 46 ವರ್ಷದ ಅನಿಲ್ ಕುಮಾರ್ ಅವರು ಹೊಸ ಸಿದ್ದಾಪುರ ಗ್ರಾಮದವರಾಗಿದ್ದು, ಅವರ ಮನೆಯ ಪಕ್ಕದ ನಿವಾಸಿಯಾಗಿರುವ  ಆನಿ ಯಾನೆ ಅನಿಲ್ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಯುವ ಹಿಂದಿನ ದಿನ ರಾತ್ರಿ ಅನಿ ಮಧ್ಯಪಾನ ಮಾಡಿಕೊಂಡು ರಸ್ತೆಯಲ್ಲಿ ಇದ್ದಂತಹ ಬೀದಿ ದೀಪಗಳ ವೈಯರ್ ಗಳನ್ನು ಕಿತ್ತು ಹಾಕಿ ದೀಪಗಳನ್ನು ಒಡೆದುಹಾಕಿದ್ದನು.

ಅಮಲಿನಲ್ಲಿ  ರಸ್ತೆಯಲಿ ಹೋಗುವ ಬರುವ ಜನರಿಗೆ ಬೈದಾಡುತ್ತಾ ತೊಂದರೆ ಕೊಡುತ್ತಿದ್ದನು.‌ಇದಕ್ಕೆ ಬುದ್ದಿವಾದ ಹೇಳಿದ ನಗರ ಸಭೆಯ ಮಾಜಿ ಸದಸ್ಯ ಯಾಕೆ ಈ ರೀತಿ ಪದೇ ಪದೇ ಏರಿಯಾದಲಿ, ಗಲಾಟೆ ಮಾಡುತ್ತೀಯಾ ಎಂದು ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದರು.‌ 

ಇದಾದ ಮರುದಿನ ಬೆಳಿಗ್ಗೆ 09-40 ತೋಟಕ್ಕೆ ಹೋಗಲು ಬೈಕ್ ತೆಗೆಯುತ್ತಿರುವಾಗ ಅನಿ @ ಅನಿಲ್ ಈತನು ಏಕಾಏಕಿ ಬಂದವನೇ  ನಿನ್ನೆ ನನಗೆ ಬುದ್ಧಿ ಹೇಳಲು ಬರುತ್ತೀಯಾ ಎಂದು ಆರೋಪಿಸಿ ಏಕಾಏಕಿ ಮಚ್ಚಿನಿಂದ ಅನಿಲ್ ಕುಮಾರ್ ಅವರ ತಲೆಯ ಎಡಭಾಗಕ್ಕೆ ಹೊಡೆದಿದ್ದಾನೆ. 

ಮಚ್ಚಿನ ಏಟಿನಿಂದ ಗಾಯವಾಗಿದ್ದು, ಆಗ ಅಲ್ಲಿಯೇ ಇದ್ದಂತಹ ಸ್ಥಳೀಯರು ಗಲಾಟೆ ಬಿಡಿಸಿರುತ್ತಾರೆ, ನಂತರ ಅವರನ್ನ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close