ಕುವೆಂಪು ವಿವಿಯಲ್ಲಿ ಮಾರ್ಕ್ಸ್ ಕಾರ್ಡ್ ನೀಡದೆ ವಿದ್ಯಾರ್ಥಿಗಳ ಪರದಾಟ



ಸುದ್ದಿಲೈವ್/ಶಿವಮೊಗ್ಗ

ಕುವೆಂಪು ವಿವಿಯಲ್ಲಿ ಯುಯುಸಿಎಂಎಸ್ ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ  ಮಾರ್ಕ್ಸ್ ಕಾರ್ಡ್ ಬಂದಿಲ್ಲ‌ ಎಂದು ಇಂದು ವಿವಿಯ ಸಾಮೂಹಿಕ ವಿದ್ಯಾರ್ಥಿಗಳು ಸುದ್ದಿಗೋಷ್ಠಿ ನಡೆಸಿ ಆತಂಕ ವ್ಯಕ್ತಪಡಿಸಿದ್ದಾರೆ. 

ಎಂಎಸ್ಸಿ ಪದವಿ ಪಾಸ್ ಆಗಿರುವ ಅನಿಕೇತ್, ಸೈಕಲಜಿ ವಿದ್ಯಾಭ್ಯಾಸ ನಡೆಸಿದ ದೃಶ್ಯ, ಎಂಟೆಕ್ ಪಾಸ್ ಆಗಿರುವ ಅಮೃತ,  ಭರತ್ ಹಾಗೂ ಗೌರವ್ ಗೌಡ ಸೇರಿ ಅನೇಕ ವಿದ್ಯಾರ್ಥಿಗಳು 6 ಸೆಮ್ ಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು 3 ಸಾವಿರ ಜನವಿದ್ದಾರೆ.  ಮುಂದಿನ ವಿದ್ಯಾಭ್ಯಾಸ ಹಾಗೂ ಕೆಲಸಕ್ಕೆ ಹೋಗುಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. 

ಯುಯುಸಿಎಂಎಸ್ ನ ಅಡಿಯಲ್ಲಿ ರಾಜ್ಯದ ಎಲ್ಲಾ ಪದವಿ ಕಾಲೇಜುಗಳು ಬರಲಿದೆ. ಕಿಯೋನಿಕ್ಸ್ ಗೆ ಮಾರ್ಕ್ಸ್ ಕಾರ್ಡ್ ಪ್ರಿಂಟಿಂಗ್ ಗೆ ಕೊಡಲಾಗಿತ್ತು. ಆದರೆ ಕಿಯೋನಿಕ್ಸ್ ನವರ ಸಮಸ್ಯೆಯಿಂದಾಗಿ 6 ಸೆಮ್ ನವರಿಗೂ ಮಾರ್ಕ್ಸ್ ಕಾರ್ಡ್ ನೀಡುತ್ತಿಲ್ಲ. ಇದನ್ನ ಕೇಳಲು ಹೋದ ಕುವೆಂಪು ವಿವಿಯವರು ನಮಗೆ ಸಂಬಂಧಪಟ್ಟಿದ್ದಲ್ಲ. 

ಇದು ಸಮಗ್ರ ವಿಶ್ವವಿದ್ಯಾಲಯಗಳ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಅಡಿಬರುತ್ತದೆ. ಎಂದು ವಿವಿಯವರು ತಿಳಿಸುವ ಮೂಲಕ ಜವಬ್ದಾರಿಯಿಂದ ನುಣಚಿಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.  

ಮಾರ್ಕ್ಸ್ ಕಾರ್ಡ್ ಇಲ್ಲದೆ ಜನವರಿಯಲ್ಲಿ ಕುವೆಂಪು ವಿವಿಯ ಘಟಿಕೊತ್ಸವ ನಡೆಯುತ್ತಿದೆ. ಘಟಿಕೋತ್ಸವದ ಒಳಗೆ ಮಾರ್ಕ್ಸ್ ಕಾರ್ಡ್ ಬಾರದಿದ್ದರೆ ವಿದ್ಯಾರ್ಥಿ ಸಂಘಟಿತರೊಂದಿಗೆ ಸೇರಿ ಎಲ್ಲಾ ವಿದ್ಯಾರ್ಥಿ ಸಂಘಟನೆಯೊಂದಿಗೆ ಪ್ರತಿಭಟನೆ ನಡೆಸುವುದಾಗಿ ಆರೋಪಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close