ಮಾಜಿ ಸಿಎಂ ಎಸ್ ಎಂಕೃಷ್ಣರ ಮದುವೆ ಆಹ್ವಾನ ಪತ್ರಿಜೆ ಮತ್ತು ಮದುವೆ ಫೋಟೊ |
ಸುದ್ದಿಲೈವ್/ಶಿವಮೊಗ್ಗ
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಶಿವಮೊಗ್ಗದ ತೀರ್ಥಹಳ್ಳಿಯ ಅಳಿಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಮಂಡ್ಯದ ಮದ್ದೂರಿನ ಸೋಮನಹಳ್ಳಿಯ ಎಸ್ ಎಂ ಕೃಷ್ಣರಿಗೆ ಮಲೆನಾಡಿನ ಗೌಡ್ತಿ ಪ್ರೇಮ ನಡುವಿನ ಮದುವೆ ಹೇಗೆ ನಡೆಯಿತು ಎಂಬುದೇ ಸ್ವಾರಸ್ಯಕರ.
ಎಸ್ ಎಂ ಕೃಷ್ಣರ ಮದುವೆ ಆಹ್ವಾನ ಪತ್ರಿಕೆ ಪ್ರಕಾರ 1966 ಏಪ್ರಿಲ್ 29 ರಂದು. ಆದರೆ ಅವರ ಸಂಬಂಧಿಯ ಪ್ರಕಾರ 1964 ಎಂದು ಹೇಳಲಾಗುತ್ತಿದೆ. ಈ ವೇಳೆ ಎಸ್ ಎಂ ಕೃಷ್ಣ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಈವೇಳೆ ಎಸ್ ಎಂ ಕೆಅವರಿಗೆ ಮದವೆ ಮಾಡಲು ಹುಡುಗಿ ಹುಡುಕುತ್ತಿದ್ದರು.
ಇದೇ ವೇಳೆ ಎಸ್ ಎಂಕೆ ಅವರ ಸಹೋದರ ಸಂಬಂಧಿ ಶಿವಣ್ಣ ಎಂಬುವರು ಸಹ್ಯಾದ್ರಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿದ್ದರು. ಆಗ ಸಹ್ಯಾದ್ರಿ ಕಾಲೇಜಿಗೆ ವಿದ್ಯಾರ್ಥಿನಿಯಾಗಿದ್ದ ಪ್ರೇಮ ಕಾಲೇಜಿನ ಸುಂದರವಾದ ಮಲೆನಾಡ ಹುಡುಗಿ. ಇವರನ್ನ ನೋಡಿದ ಶಿವಣ್ಣ ಎಸ್ ಕೃಷ್ಣರಿಗೆ ಮದುವೆ ಮಾಡಿಸಿದ್ದರೆ ಸರಿಹೋಗುತ್ತೆ ಎಂಬ ಲೆಕ್ಕಾಚಾರದಲ್ಲಿದ್ದರು.
ಇದು ಒಂದು ಕಡೆಯಾದರೆ ಮತ್ತೊಂದೆಡೆ ಶಿವಮೊಗ್ಗದ ಗುತ್ತಿ ನರ್ಸಿಂಗ್ ಹೋಮ್ ನ ವೆಂಕಟರಮಣೇ ಗೌಡರ ಪುತ್ರಿ ಇಂದ್ರಕ್ಕ ಜಡ್ಡ್ ಆಗಿ ನಿವೃತ್ತ ಹೊಂದಿದ್ದ ಶಾಮ್ ಸುಂದರ್ ಅವರ ಪತ್ನಿಯಾಗಿದ್ದರು.
ಶಾಮ್ ಸುಂದರ್ ಮತ್ತು ಎಸ್ ಎಂ ಕೃಷ್ಣ ಆಗಿನ ಕಾಲದಲ್ಲಿ ಅಚ್ಚುಮೆಚ್ಚಿನ ಸ್ನೇಹಿತರು. ಇತ್ತ ಶ್ಯಾಮ್ ಸುಂದರ್ ಅವರ ಪತ್ನಿ ಇಂದ್ರಕ್ಕ ಪ್ರೇಮರ ಮಾವನ ಮಗಳು. ಶಾಮ್ ಸುಂದರ್ ನ್ನ ಭೇಟಿ ಮಾಡಿದ ವೇಳೆ ಎಸ್ ಎಂ ಕೃಷ್ಣರಿಗೆ ಪ್ರೇಮರನ್ನ ಮದುವೆಯಾಗಲು ತಿಳಿದ್ದರು. ಕೃಷ್ಣರಿಗೆ ಇಂದ್ರಕ್ಕನೂ ಹೇಳಿದ್ದರು. ಕೃಷ್ಣರವರು ಒಮ್ಮೆ ಪ್ರೇಮರನ್ನ ನೋಡಿ ಮನಸ್ಸಾಗಿತ್ತು. ಇದನ್ನ ಶಿವಣ್ಣರ ಗಮನಕ್ಕೆ ತಂದಿದ್ದಾರೆ. ನೀನು ಇಷ್ಟಪಟ್ಟರೆ ಮದುವೆ ಮಾಡುವುದಾಗಿ ಶಿವಣ್ಣ ಭರವಸೆ ನೀಡಿದ್ದಾರಂತೆ. ಇದೆಲ್ಲಾ ಬೆಳವಣಿಗೆ ಒಂದು ಕಡೆಯಾದರೆ
ಮಂತ್ರಿಯಾಗಿದ್ದ ಕಡಿದಾಳ ಮಂಜಪ್ಪರೂ ಸಹ ಕೃಷ್ಣರಿಗೆ ಪ್ರೇಮಾರ ಮದುವೆ ಬಗ್ಗೆ ತಿಳಿಸಿದ್ದಾರೆ. ಕಡಿದಾಳ್ ಮಂಜಪ್ಪನವರಿಗೆ ಪ್ರೇಮಾರ ತಂದೆ ಚೆನ್ನಪ್ಪಗೌಡರಿಗೆ ಸಂಬಂಧಿಯಾಗಿದ್ದರು ಮೂರಕಡೆಯಿಂದ ಹೋದ ಪ್ರಸ್ತಾವನೆಯಿಂದಾಗಿ ಇಬ್ವರ ಮದುವೆಯಾಗಿದ್ದಾಗಿ ತಿಳಿದು ಬಂದಿದೆ. ಚೆನ್ನಪ್ಪಗೌಡರಿಗೆ ಐದು ಜನ ಮಕ್ಕಳಿದ್ದು ಪ್ರೇಮಕ್ಕ ನಾಲ್ಕನವರಾಗಿದ್ದಾರೆ.
ಇವೆಲ್ಲ ಸರಿಯೋದ ಪ್ರಸಂಗದ ನಡುವೆ ಎಸ್ ಎಂಕೃಷ್ಣರಿಗೆ ಎದುರಾಗಿದ್ದ ಚುನಾವಣೆಯಲ್ಲಿ ಎಸ್ ಎಂ ಕೃಷ್ಣ ಸೋತಿದ್ದರು. ಇದು ಮದುವೆಯಾದ ಹೊಸದರಲ್ಲಿ ಆಪಾದನೆಯನ್ನ ಕೇಳುವಂತಾಗಿತ್ತು. ಇವರಿಬ್ಬರ ಮದುವೆ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ನ್ಯಾಷನಲ್ ಬಾಯ್ಸ್ ಹೈಸ್ಕೂಲ್ ನಲ್ಲಿ ಮದುವೆಯಾಗಿತ್ತು ಎಂಬುದು ಸಹ ಸವಿನೆನಪಾಗಿದೆ.
ಕೃಷ್ಣರನ್ನ ಕಳೆದುಕೊಂಡ ರಾಜ್ಯವೇ ಶೋಕಾಚರಣೆಯಲ್ಲಿದೆ. ಈಗ ಕುಡುಮಲ್ಲಿಗೆಯ ಪ್ರೇಮರ ಮನೆಯಲ್ಲಿರುವರು ಕೃಷ್ಣರ ಅಂತ್ಯ ಸಂದ್ಕಸರಕ್ಕೆ ಸೋಮನಹಳ್ಳಿಗೆ ತೆರಳಿದೆ. ಮನೆ ಮೌನವಾಗಿದೆ.