ಸುದ್ದಿಲೈವ್/ಶಿವಮೊಗ್ಗ
ಪೇಪರ್ ಉಂಡೆ ಗ್ಯಾಂಗ್ ನ ಉಪಟಳ ಕಡಿಮೆಯಾಗುತ್ತಿದೆ ಎನಿಸಿತ್ತಿರುವ ಬೆನ್ನಲ್ಲೇ ಮತ್ತೊಂದು ಲಕೋಟೆ ಗ್ಯಾಂಗ್ ಆಕ್ಟಿವ್ ಆಗಿದೆ. ಲಕೋಟೆ ಗ್ಯಾಂಗ್ ಹೊಸ ರೂಪದಲ್ಲಿ ಆಕ್ಟಿವ್ ಆಗಿದೆ. ವೃದ್ಧ ಮಹಿಳೆಯರು, ಮಹಿಳೆಯರನ್ನ ಗುರಿಯಾಗಿಸಿಕೊಂಡು ದರೋಡೆಗೆ ಇಳಿಯುತ್ತಿದ್ದ ಉಂಡೆ ಗ್ಯಾಂಗ್ ಶಿವಮೊಗ್ಗದಲ್ಲಿ ಇನ್ ಆಕ್ಟಿವ್ ಆಗಿದೆ ಎಂದು ಭಾವಿಸಲಾಗಿತ್ತು.
ಆದರೆ ಮೊನ್ನೆ ಲಕೋಟೆಗ್ಯಾಂಗ್ ಹೊಸ ಐಡಿಯಾದೊಂದಿಗೆ ದರೋಡೆ ನಡೆಸಿದೆ. ಈ ಲಕೋಟೆ ಗ್ಯಾಂಗ್ ಗೂ ಉಂಡೆ ಗ್ಯಾಂಗ್ ಗೂ ಕನೆಕ್ಷನ್ ಇದೆಯಾ ಎಂಬುದರ ಬಗ್ಗೆ ಪೊಲೀಸ್ ತನಿಖೆಯಾಗಬೇಕಿದೆ. ಆದರೆ ದರೋಡೆ ಮಾಡಿದ್ದ ಉಂಡೆ ಗ್ಯಾಂಗ್ ನ ಪತ್ತೆ ಇದುವರೆಗೂ ಆಗಿಲ್ಲ.
ಘಟನೆಯ ವಿವರ
ಎನ್.ಟಿ ರಸ್ತೆಯಲ್ಲಿರುವ ವೀರಶೈವ ಸ್ಮಶಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರನ್ನ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು 11 ಗ್ರಾಂ ಉಂಗುರವನ್ನ ಲಪ್ಟಾಯಿಸಿದ್ದಾರೆ.
ರೇವಣ್ಣ ಎಂಬ 70 ವರ್ಷದ ವೃದ್ಧ ಎನ್ ಟಿ ರಸ್ತೆಯ ವೀರಶೈವ ರುದ್ರಭೂಮಿಯ ಬಳಿ ನಡೆದುಕೊಂಡು ಹೋಗುವಾಗ ಆಕ್ಸಿಸ್ ಸ್ಕೂಟರ್ ನಲ್ಲಿಬಂದ ಇಬ್ಬರು ಅಪರಿಚಿತರು ನಮ್ಮ ಚಿಕ್ಕಮ್ಮ ತೀರಿ ಎರಡು ವಾರವಾಗಿದೆ. ಅವರ ಆಸೆಯಂತೆ ಕುರುಬರ ಪಾಳ್ಯದಲ್ಲಿರುವ ದುರ್ಗಮ್ಮನ ದೇವಸ್ಥಾನದಲ್ಲಿ ಪೂಜೆ ಮಾಡಿಸಬೇಕು.
ಪೂಜೆ ಮಾಡಿಸಲು ದೇವಸ್ಥಾನದ ಬಾಗಿಲು ಹಾಕಿದೆ ಸಂಜೆ ಮಾಡಿಸಿ ಎಂದು ಪೂಜಾ ಸಾಮಾಗ್ರಿಗಳನ್ನ ಮತ್ತು 2000 ಸಾವಿರೂ ಹಣ ನೀಡಲು ಮುಂದಾಗಿದ್ದಾರೆ. ಸ್ಕೂಟರ್ ಹಿಂದೆ ಕುಳಿತಿದ್ದ ಯುವಕನೋರ್ವ ಈ ಲಕೋಟೆಗಳನ್ನ ಉಂಗುರ ಮುಟ್ಟಿಸಿ ಸ್ವೀಕರಿಸುವಂತೆ ಕೋರಿದ್ದಾನೆ.
ಬೆರಳಲ್ಲೇ ಇದ್ದ ಉಂಗುರವನ್ನ ಮುಟ್ಟಿಸಲು ಹೋದ ವೃದ್ಧರಿಗೆ ಉಂಗುರ ಬಿಚ್ಚಿ ಮುಟ್ಟಿಸುವಂತೆ ಕೋರಿದ್ದಾರೆ. ನವಗ್ರಹದ ಉಂಗುರ ಬಿಚ್ಚಿದ ರೇವಣ್ಣನವರು ಹಣದ ಮೇಲೆ ಇಟ್ಟಿದ್ದಾರೆ. ಉಂಗುರವನ್ನ ಹಣವನ್ನ ಮಡಚಿ ಪೂಜಾ ಕವರ್ ನಲ್ಲಿಟ್ಟಿದ್ದಾರೆ.
ಮನೆಗೆ ಹೋಗಿ ನೋಡಿದ ವೃದ್ಧ ರೇವಣ್ಣನವರಿಗೆ ಶಾಕ್ ಆಗಿದೆ. ಲಕೋಟೆಯಲ್ಲಿ ನವಗ್ರಹ ಉಂಗುರದ ಬದಲು ಸಣ್ಣ ಕಲ್ಲಿದ್ದು ಲಕೋಟೆಯಲ್ಲಿ 2000 ರೂ. ಬದಲು 500 ರೂ. ಇತ್ತು. ಇದರಲ್ಲಿ ಮೋಸಹೋಗಿರುವುದು ಅರಿತ ರೇವಣ್ಣನವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.