ಸುದ್ದಿಲೈವ್/ಶಿವಮೊಗ್ಗ
ಮಾಜಿ ಸಚಿವ ಕುಮಾರ್ ಬಂಗಾರಪ್ಪನವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ವೊಂದು ಸದ್ದು ಮಾಡುತ್ತಿದೆ. ಮಾಜಿ ಸಚಿವರ ಸದಸ್ಯತ್ವ ಅಭಿಯಾನದ ಪೋಸ್ಟ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಫೊಟೊ ಇಲ್ಲದೆ ಇರುವ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.
ಡಿ.09 ರಿಂದ ಸೊರಬ ಮಂಡಲದ ಸಂಘಟನಾ ಪರ್ವದಲ್ಲಿ ಬರುವಂತಹ ವಿಷಯದ ಮೇರೆಗೆ ಸೊರಬ ಕ್ಷೇತ್ರಾದ್ಯಂತ ನೂತನ ಬೂತ್ ರಚನೆಗಾಗಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 8-30 ರ ವರೆಗೆ ಬೂತ್ ಪ್ರವಾಸ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿಯನ್ನ ಕುಮಾರ್ ಬಂಗಾರಪ್ಪ ಹಮ್ಮಿಕೊಂಡಿದ್ದಾರೆ.
ಪ್ರಕಾಶ್ ತಲಕಾಲಕೊಪ್ಪದವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು, ಸಹಕಾರ ಕ್ಷೇತ್ರದ ಪ್ರತಿನಿಧಿಗಳು, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಕ್ತಿ ಕೇಂದ್ರದ ಪ್ರಮುಖರು, 8 ಮಹಾಶಕ್ತಿ ಕೇಂದ್ರಗಳ ಸಂಚಾಲಕರು ಭಾಗಿಯಾಗುವಂತೆ ಒಂದು ಪೋಸ್ಡ್ ನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.
ಈ ಪೋಸ್ಟ್ ಡಿಜಿಟಲ್ ಮಾಧ್ಯಮಗಳಲ್ಲಿ ಚರ್ಚೆ ಉಂಟಾಗಿದೆ. ಈ ಪೋಸ್ಟ್ ನಲ್ಲಿ ಬಿಜೆಪಿ ರಾಜ್ಯಧ್ಯಕ್ಷರ ಫೊಟೊ ಇಲ್ಲದೆ ಇರುವ ಬಗ್ಗೆ ಚರ್ಚೆ ಆಗಿದೆ. ಕೆಲ ನೆಟ್ಟಿಗರು ರಾಜ್ಯಾಧ್ಯಕ್ಷರ ಫೊಟೊ ಇಲ್ಲದೆ ಇರುವುದರಿಂದ ಕುಮಾರ್ ಬಂಗಾರಪ್ಪನವರು ಬಣ ರಾಜಕಾರಣದ ಬಗ್ಗೆಯೂ ಚರ್ಚೆ ಮಾಡಲಾಗಿದೆ.
ಆದರೆ ಈ ಬಗ್ಗೆ ಸುದ್ದಿಲೈವ್ ಗೆ ಮಾತನಾಡಿದ ಮಾಜಿ ಸಚಿವರು ನನಗೆ ಇದು ಗೊತ್ತೇ ಆಗಿಲ್ಲ ಎಂಬ ಸ್ಪಷ್ಠೀಕರಣವನ್ನ ನೀಡಿದ್ದಾರೆ. ಅದನ್ನ ಗಮನಿಸುವೆ ಎಂದು ಪ್ರತಿಕ್ರಿಯಿಸಿ ಪೋಸ್ಟ್ ನ್ನ ತೆಗೆದಿದ್ದಾರೆ.