ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಉಡುಪಿಯಲ್ಲಿ ಶಿವಮೊಗ್ಗ ಜಿಲ್ಲಾ ದೇಹದಾರ್ಡ್ಯ ಪಟುಗಳ ಸಂಘ ನವೀಕರಣ ಮಾಡಲಾಗಿದ್ದು, ಈ ನಿಮಿತ್ತ ತರೀಕೆರೆಯಲ್ಲಿ ಫೆ.27 ರಂದು ರಾಜ್ಯ ಮಟ್ಟದ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾವಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಯೋಗೀಶ್, ಅಂದು ಸಂಜೆ 5 ಗಂಟೆಗೆ ಸ್ಪರ್ಧೆ ನಡೆಯಲಿದ್ದು, ರಾಜ್ಯ ಮಟ್ಟದ ಸ್ಪರ್ಧೆಗೆ 300 ರೂ. ಜಿಲ್ಲಾ ಮಟ್ಟದ ಸ್ಪರ್ಧೆಗೆ 200 ರೂ. ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ.
ರಾಜ್ಯಮಟ್ಟದ ಬಹುಮಾನವಾಗಿ 20 ಸಾವಿರ, ಪ್ರಥಮ ರನ್ನರ್ ಗೆ 15000, ದ್ವಿತೀಯ ರನ್ನರ್ ಗೆ 10 ಸಾವಿರ, ಬೆಸ್ಟ್ ಪೋಸರ್ ಗೆ 5000 ರೂ. ನಿಗದಿ ಪಡಿಸಲಾಗಿದೆ. 55 ಕೆಜಿ ರಿಂದ 90 ಕೆಜಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲೂ ಬಹುಮಾನ ನಿಗದಿಪಡಿಸಲಾಗಿದೆ ಎಂದರು.