ಸುದ್ದಿಲೈವ್/ಶಿವಮೊಗ್ಗ
ಸದನದಲ್ಲಿ ಬಿ.ಅರ್ ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಗೃಹಸಚಿವ ಅಮಿತ್ ಶಾರನ್ನ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಗ್ರಾಮಾಂತರ ವಿಭಾಗ ಮಹಾನಗರ ಪಾಲಿಕೆಯ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ , ಬಿಜೆಪಿ ಅಂಬೇಡ್ಕರ್ ವಿರುದ್ಧ ಅವಹೇಳನ ಕಾರಿ ಮಾತನಾಡಿದ್ದಾರೆ. ಮೋದಿ ಅಮಿತ್ ಶಾ ಅವರ ದೊಡ್ಡಅಣ್ಣ ಆಗಿದ್ದಾರೆ. ಗೃಹಸಚಿವರನ್ನ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಬಿಜೆಪಿ ಮನು ಸಂಸ್ಕೃತಿ ಹೊಂದಿದ ಪಕ್ಷವಾಗಿದೆ. ಪಾರ್ಲಿಮೆಂಟ್ ನಲ್ಲಿಅಂಬೇಡ್ಕರ್ ವಿರುದ್ಧ ಮಾತನಾಡುತ್ತಾರೆ ಗೃಹಸಚಿವರು ಎಂದರೆ ಅವರಿಗೆ ಆ ಸಮುದಾಯದ ಬಗ್ಗೆ ಇರುವ ಮನಸ್ಥಿತಿ ಅರ್ಥವಾಗಲಿದೆ.
ಇಂದು ಸಂಜೆ ಜಿಲ್ಲಾ ಕಾಂಗ್ರೆಸ್ ಶಿವಪ್ಪ ನಾಯಕ ವೃತ್ತದಿಂದ ಗೋಪಿ ವೃತ್ತದ ವರೆಗೆ ಪಂಚಿನ ಮೆರವಣಿಗೆ ನಡೆಯಲಿದೆ ಎಂದರು
ಹೆಚ್ ಸಿ ಯೋಗೀಶ್ ಮಾತನಾಡಿ, ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವ ಬದಲು ಭಗವಂತನ ಪ್ರಾರ್ಥಿಸಿದ್ದರೆ ಏಳು ಜನ್ಮದ ಪುಣ್ಯ ಸಿಗಲುದೆ ಎಂದು ಹೇಳಿದ್ದ ಅಮಿತ್ ಶಾ ಮತ್ತು ಬಿಹೆಪಿಗರು ಮೋದಿ ಮೋದಿ ಎಂಬುದನ್ನ ಜಪಮಾಎಉವುದನ್ನ ಬಿಡಿ. ಪರಕೆ ಪರಜದ ಎಂದಿದ್ದರೆ ಬಿಜೆಪಿಯರಿಗೆ ಲಕ್ಷ್ಮಿನಾದರೂ ಒಲಿದು ಬರುತ್ತಿತ್ತು. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸಿರುವ ಬಿಜೆಪಿ ಈಗ ಅಂಬೇಡ್ಕರ್ ರನ್ನ ಅಪಮಾನಿಸಿದೆ. ಎಂದು ದೂರಿದರು
ಸಂವಿದಾನದಲ್ಲಿ ರಿಸರ್ವೇಷನ್ ಕೊಟ್ಟಿರುವುದು ಅಂಬೇಡ್ಕರ್ ಅವರು. ಮಾಜಿ ಉಪಮುಖ್ಯಮಂತ್ರಿ ಅದ್ವಾನಿ ಅವರು ಅಂಬೇಡ್ಕರ್ ಸಂವಿದಾನ ದೊಡ್ಡ ಸಂವಿಧಾನ ಎಂದು ಹೇಳಿದ್ದರು. ಆದರೆ ಬಿಜೆಪಿ ಅಂಬೇಡ್ಕರ್ ವಿರುದ್ಧ ಮಾತನಾಡಿರುವುದು ಅವಹೇಳನಕಾರಿ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಕಾರ್ಪರೇಟರ್ ವಿಶ್ವನಾಥ್ ಕಾಶಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ ಪಾಶ, ಚೇತನ್ ಗೌಡ ಮೊದಲಾದವರು ಭಾಗಿಯಾಗಿದ್ದರು.