ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗೆ ಒತ್ತಾಯಿಸಿ ಜಿಪಂ ಮುಂಭಾಗ ಪ್ರತಿಭಟನೆ

 


ಸುದ್ದಿಲೈವ್/ಶಿವಮೊಗ್ಗ

ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ಜಿಲ್ಲಾ ಪಂಚಾಯಿತಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ (ರಿ.) ಶಿವಮೊಗ್ಗ ಜಿಲ್ಲಾ ಸಮಿತಿ(CITU) ಸಾರ್ವತ್ರಿಕ ಹೋರಾಟದ ಅಡಿ ಪ್ರತಿಭಟನೆ ನಡೆಸಿದೆ.

ಜಿಪಂ ಸಿಇಒ ಮೂಲಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವ ಪ್ರಿಯಾಂಜ್ ಖರ್ಗೆಗೆ ಮನವಿ ಸಲ್ಲಿಸಿದ ಸಂಘಟನೆ ಗ್ರಾಮ ಪಂಚಾಯಿತಿಯ ನೌಕರರಿಗೆ ನ್ಯಾಯಯುತ ಬೇಡಿಕೆಗಳಿಗೆ ನ್ಯಾಯ ಸಿಗಬೇಕು ಎನ್ನುವ ಮೂಲಕ ಮನವಿ ಮಾಡಲಾಯಿತು.

31-10-2017 ರ ವೇಳಗೆ ನೇಮಕಾತಿಯಾದ  ಗ್ರಾಮ ಪಂಚಾಯತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ವೃಂದದ ನೌಕರರನ್ನ ಏಕ ಕಾಲದಲ್ಲಿ ಅನುಮೋದನೆ ಮಾಡಬೇಕು, ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಆದೇಶದಂತೆ ಪ್ರೊಟೆಕ್ಟಿವ್ ಕಿಟ್ ನೀಡುವಂತೆ,

15ನೇ ಹಣಕಾಸು ಯೋಜನೆ ಮತ್ತು ವರ್ಗ 01 ರಲ್ಲಿ ಕಡ್ಡಾಯವಾಗಿ ಸಿಬ್ಬಂದಿಗಳ ವೇತನಕ್ಕೆ ಮೀಸಲಿಡುವ ಬಗ್ಗೆ ಒತ್ತಾಯಿಸಲಾಗಿದೆ.

ಈ ಒಂದು ಸಂದರ್ಭದಲ್ಲಿ ಶ್ರೀಯುತ ಬಂಗಾರಪ್ಪನವರು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ ಸಾಗರ ಅಧ್ಯಕ್ಷರು ನಾಗೇಶ್ ಕೆ ವಾಲೆ ಸೊರಬ ತಾಲೂಕ ಅಧ್ಯಕ್ಷರು ಚೆನ್ನಬಸಪ್ಪ.

ತೀರ್ಥಳ್ಳಿ ತಾಲೂಕ ಅಧ್ಯಕ್ಷರು ಉಮೇಶ್ ಹೊಸನಗರ ತಾಲೂಕು ಅಧ್ಯಕ್ಷರು ಬಂಗಾರಪ್ಪ ಶಿಕಾರಿಪುರ ತಾಲ್ಲೂಕು ಅಧ್ಯಕ್ಷರು ಸ್ವಾಮಿ ಮತ್ತು ಶಿವಮೊಗ್ಗ ತಾಲೂಕಿನ ಅಧ್ಯಕ್ಷರು ರಂಗಸ್ವಾಮಿ ಹಾಗೂ ನನ್ನ ನೆಚ್ಚಿನ ಎಲ್ಲಾ ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯಿತಿಯ ನೌಕರರು ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close