ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆಯ ಕೊರಳಲ್ಲಿದ್ದ ಸರವನ್ನಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಇದರಿಂದ ಈ ವರ್ಷದಲ್ಲಿ ಸರ್ಕಾರಿ ಸಾರಿಗೆ ಬಸ್ ನಿಲ್ದಾಣದಲ್ಲಿ ಚಿನ್ನಾಭರಣಗಳ ಕಳುವಾದ ಪ್ರಕರಣ 09 ಕ್ಕೇರಿದೆ.
ಶಿಕಾರಿಪುರದ 56 ವರ್ಷದ ಮಹಿಳೆ ತಮ್ಮ ಬಿಪಿ ಶುಗರ್ ತಪಾಸಣೆಗಾಗಿ ಶಿವಮೊಗ್ಗಕ್ಕೆ ಪತಿ ಮತ್ತು ಸಹೋದರಿಯೊಂದಿಗೆ ಬಂದಿದ್ದು ಸಂಜೆ 4-30 ರ ವೇಳೆಗೆ ಶಿವಮೊಗ್ಗದ ಸರ್ಕಾರಿ ಸಾರಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ.
ಬಸ್ ಹತ್ತುವ ವೇಳೆ ಮಹಿಳೆಯ ಕೊರಳಲ್ಲಿರುವ 35 ಗ್ರಾಂನ ಮಾಂಗಲ್ಯ ಸರ ಕಳುವಾಗಿದೆ. ಇದರಿಂದ ಮಹಿಳೆ ನಾಗರತ್ನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ವರ್ಷ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮಹಿಳೆಯರ ಚಿನ್ನಾಭರಣ ಮತ್ತು ಮಾಂಗಲ್ಯಸರ ಕಳುವಿನ ಪ್ರಕರಣ 09 ಕ್ಕೇರಿದೆ. ಕಳೆದ ವರ್ಷ 23 ಪ್ರಕರಣಗಳು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ನಡೆದಿದ್ದವು. ಇವುಗಳನ್ನ ದೊಡಪೇಟೆ ಪೊಲೀಸ್ ಠಾಣೆಯ ಪಿಐ ರವಿ ಸಂಗನಗೌಡ ಪತ್ತೆಹಚ್ಚಿದ್ದರು. ಈ ಬಾರಿ ಇದರ ಸಂಖ್ಯೆ ಇಳಿದಿದೆ. ಇದರಲ್ಲೂ ಸಹ ಅವರ ಶ್ರಮವನ್ನ ಅಲಗಲಗೆಳೆಯುವ ಹಾಗಿಲ್ಲ.