ಮಾಜಿ ಕಾರ್ಪೊರೇಟರ್ ಎಸ್ ಎಸ್ ಸತೀಶ್ ನಿಧನ


ಸುದ್ದಿಲೈವ್/ಶಿವಮೊಗ್ಗ

 ಮಾಜಿ ಸೂಡ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿ ಪ್ರಕಾಶ್ ಇವರ ಸ್ವಂತ ಸಹೋದರ ಶಿವಮೊಗ್ಗ ಗಾಂಧಿನಗರ ವಾರ್ಡಿನ ಮಾಜಿ ಕಾರ್ಪೊರೇಟರ್ ಹಾಗೂ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಹಾಲಿ ಉಪಾಧ್ಯಕ್ಷರಾದ ಮತ್ತು ಕವಿತಾ ಪೆಟ್ರೋಲ್ ಬಂಕ್ ಮಾಲೀಕರೂ ಆದ ಎಸ್ ಎಸ್ ಸತೀಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸತೀಶ್ ಶಿವಮೊಗ್ಗ ಸಿಟಿ ಕ್ಲಬ್ಬಿನ ಸದಸ್ಯರು ಹಾಗೂ ಶಿವಮೊಗ್ಗ ನಗರದ ಹಲವಾರು ಸಂಘಟನೆಗಳಲ್ಲಿ ಅಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಎರಡು ಜನ ಹೆಣ್ಣು ಮಕ್ಕಳಿದ್ದಾರೆ. 

ಇವರ ಇಚ್ಛೆಯಂತೆ ತಮ್ಮ ಎರಡು ಕಣ್ಣುಗಳನ್ನು ಶಂಕರ ನೇತ್ರಾಲಯಕ್ಕೆ ದಾನ ಮಾಡಲಾಯಿತು ಅಪಾರ ಸ್ನೇಹಿತರು ಬಂಧು ಮಿತ್ರರು ಕುಟುಂಬ ವರ್ಗದವರನ್ನು ಅಗಲಿದ ಸತೀಶ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಶಿವಮೊಗ್ಗ ನಗರದ ಶಾಸಕರಾದ ಎಸ್ ಎಸ್ ಚನ್ನಬಸಪ್ಪ. 

ಡಾಕ್ಟರ್ ಧನಂಜಯ ಸರ್ಜಿ. ಭದ್ರಾವತಿ ಶಾಸಕ ಸಂಗಮೇಶ್. ಡಿ ಎಸ್ ಅರುಣ್. ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ ವಿಜಯಕುಮಾರ್ ಮತ್ತು ಸಂಘದ ಪದಾಧಿಕಾರಿಗಳು  ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ. ಜಿಲ್ಲಾ ಅಧ್ಯಕ್ಷ ಎಸ್ಎಂ ರುದ್ರಮುನಿ ಸಜ್ಜನ್  ಪ್ರೊಫೆಸರ್ ಎಎಸ್ ಚಂದ್ರಶೇಖರ್ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷರೂ ಪದಾಧಿಕಾರಿಗಳು ತೀರ್ವ ಸಂತಾಪ ಕೋರಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close