ಸುದ್ದಿಲೈವ್/ಶಿವಮೊಗ್ಗ
ಮಾಜಿ ಡಿಸಿಎಂ ಈಶ್ವರಪ್ಪನವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಪ್ರಚೋದನಾಕಾರಿ ಭಾಷಣ ಮಾಡಿರುವ ಆರೋಪದ ಮೇರೆಗೆ ಈಶ್ವರಪ್ಪನವರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ. ನ.13 ರಂದು ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಡಿಸಿಎಂ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಸುಮೀಟೊ ಪ್ರಕರಣ ದಾಖಲಾಗಿತ್ತು. ಅದರ ಬೆನ್ನಲ್ಲೇ ಕೋಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಡಿ.3 ರಂದು ಮಥುರಾ ಪ್ಯಾರಾಡೈಸ್ ಹೋಟೆಲ್ ಮುಂಭಾಗ ಬಾಲರಾಜ್ ಅರಸ್ ರಸ್ತೆಯಲಿರುವ ಟ್ಯಾಕ್ಸಿ ಸ್ಟಾಂಡ್ ಹತ್ತಿರ ಹಿಂದೂ ಹಿತ ರಕ್ಷಣಾ ಸಮಿತಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ರವರು ಬಾಂಗ್ಲಾ ದೇಶದಲಿ ಹಿಂದೂ ಸಂತ ಚಿನ್ಮಯ ಕೃಷ್ಣದಾಸ್ ಪ್ರಭು ರವರನ್ನು ಬಂಧಿಸಿರುವುದನ್ನು ಖಂಡಿಸಿ ಹಾಗೂ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನಾ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಭೆಯಲಿ ಭಾಗಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್ ಈಶ್ವರಪ್ಪ ರವರ ವಿರುದ್ಧ ಪ್ರಚೋದನಾಕಾರಿ ಭಾಷಣದ ಹಿನ್ನಲೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ಈ ಮುಸಲ್ಮಾನರು ಅನ್ನ ಹಾಕಿದ ಮನೆಗೆ ಕನ್ನ ಹಾಕುವ ರಕ್ತದವರು ಅನ್ನೋದರಲಿ ಯಾವ ಅನುಮಾನವಿಲ್ಲ. ಬಾಂಗ್ಲಾ ವಿಮೋಚನಾ ಸಂದರ್ಭದಲಿ ತಿನ್ನೋದಕ್ಕೆ ಅವರಿಗೆ ಅನ್ನ ಇರಲಿಲ್ಲ, ಇದೇ ಇಸ್ಕಾನ್ ಸಂಸ್ಥೆಯವರು ಅನ್ನ ಹಾಕಿದಕ್ಕೋಸ್ಕರ ಇವತ್ತು ಆ ದೇಶದವರು ನೆನಪು ಮಾಡಿಕೊಳ್ಳುತ್ತಿಲ್ಲ ಎಂದು ಗುಟರ್ ಹಾಕಿದ್ದರು.
ಸಂತ ಚಿನ್ನಯ್ ರವರನ್ನು ಜೈಲಿಗೆ ಅಟ್ಟಿದ್ದಾರೆ. ಅವರ ಸ್ವತಃ ಕೈಯಿಂದಾನೇ ಅನ್ನ ಹಾಕಿದ್ದ ಮುಸ್ಲೀಂರಿಗೆ ತಿನ್ನೋಕೆ ಯೋಗ್ಯತೆ ಇಲ್ಲವಾಗಿದೆ. ಚಿನ್ಮಯ ದಾಸ್ ರವರ ಪರವಾಗಿ ಅಲ್ಲಿ ಒಬ್ಬ ಅಡ್ವೋಕೇಟ್ ರಾಮನನ್ ಅನ್ನುವಂತ ವ್ಯಕ್ತಿ ಅವರ ಪರವಾಗಿ ವಕಾಲತ್ತು ಹಾಕಲಿಕ್ಕೆ ಹೋಗಿದ್ದಕ್ಕೆ ಆ ಮುಸಲ್ಮಾನ್ ಗುಂಡಾಗಳು ಆ ಅಡ್ವಕೇಟ್ ಗೆ ರಾಮನ್ ನ್ನ ಹೊಡೆದಿದ್ದರು. ಅವರು ಇವತ್ತು ಸಾಯುವ ಸ್ಥಿತಿಯಲ್ಲಿದ್ದಾರೆ. ಇದು ಎಷ್ಟರಮಟ್ಟಿಗೆ ಅಲ್ಲಿನ ವ್ಯವಸ್ಥೆ ಆಗಿದೆ.
ಬಾಂಗ್ಲಾ ದೇಶದಲಿ, ಅಲ್ಲಿರುವ ಹಿಂದುಗಳ ಬಗ್ಗೆ, ಇಷ್ಟರಮಟ್ಟಿಗೆ ತೊಂದರೆ ಕೊಡ್ತಾ ಇದಾರೆ, ಅಕಸ್ಮಾತ್ ಭಾರತದಲಿರುವಂತಹ ಹಿಂದೂಗಳು ಈ ದೇಶದಲ್ಲಿರುವಂತಹ ಮುಸಲ್ಮಾನರಿಗೆ ಸಿಕ್ಕಸಿಕ್ಕಲಿ ಸಿಕ್ಕಿದ್ದನ್ನ ತಗೊಂಡು ಹೊಡೆಯಲಿಕ್ಕೆ ಶುರು ಮಾಡಿದರೆ, ಈ ದೇಶದಲಿ ಮುಸಲ್ಮಾನರು ಉಳಿತಾರಾ ಎಂದು ಹೇಳಿದ್ದರು.
ಮುಸಲ್ಮಾನರೂ ಹಿಂದೂ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುತ್ತಾ ಇದ್ದಾರೆ. ಈ ದೇಶ ಭಾರತ, ಹೆಣ್ಣಿಗೆ ತಾಯಿ ಸ್ಥಾನ ಕೊಟ್ಟಿರುವಂತಹ ಭಾರತ, ಇಲ್ಲಿ ಯಾವ ಹಿಂದೂ ಕಾರ್ಯಕರ್ತರೂ ಕೂಡಾ ಮುಸಲ್ಮಾನರಿಗೆ ಅತ್ಯಾಚಾರ ಮಾಡೋಕ್ಕೆ ಹೋಗಿಲ್ಲಾ, ಹೋಗಲಾ ಒಂದೇ ಒಂದು ಮಸೀದಿಯನ್ನು ಧ್ವಂಸ ಮಾಡಕ್ಕೆ ನಾವು ಪ್ರಯತ್ನ ಮಾಡಿಲ್ಲ. ಒಂದ್ ಉದಾಹರಣೆಯನ್ನು ಮಾತ್ರ ತೋರಿಸಿಕೊಟ್ಟಿದ್ದೇವೆ, 500 ವರ್ಷಗಳ ಹಿಂದೆ ಆ ರಾಮಮಂದಿರವನ್ನು ನೀವ್ ಧ್ವಂಸ ಮಾಡಿ ಬಾಬರಿ ಮಸೀದಿಯನ್ನು ಕಟ್ಟಿದ್ದೀರಿ. ಇನ್ನೊಮ್ಮೆ ನಮ್ಮ ದೇಶದಲಿರುವಂತಹ ದೇವಸ್ಥಾನಗಳನ್ನು ಮುಟ್ಟಿದರೆ ಹುಷಾರ್ ಅಂತಾ, ಆ ಬಾಬರಿ ಮಸೀದೀನಾ ಧ್ವಂಸ ಮಾಡಿ ತೋರಿಸಿದ್ದೇವೆ, ಪಾಕಿಸ್ತಾನದಲಿ.., ಬಾಂಗ್ಲಾ ದೇಶದಲ್ಲಿ.. ಮುಸಲ್ಮಾನರು ಹಿಂದೂಗಳನ್ನು ಪ್ರತಿನಿತ್ಯ ತೊಂದರೆ ಕೊಡ್ತಾ ಇದ್ದಾರೆ.
ಹಿಂದೂಗಳ ಜನಸಂಖ್ಯೆ ಕಡಿಮೆಯಾಗ್ತಾ ಇದೆ. ಇದೂ ವಿಶ್ವದ ಮುಸಲ್ಮಾನರು ಗಮನಿಸಬೇಕು. ಭಾರತ ಇಷ್ಟರಮಟ್ಟಿಗೆ ಸಹಿಷ್ಣುತೆ ಧೈಯವಾಗಿದೆ, ಶಾಂತಿಪ್ರಿಯ ದೇಶವಾಗಿದೆ. ಎಷ್ಟೇ ಹಿಂದೂಗಳಿಗೆ ಪಾಕೀಸ್ಥಾನದಲ್ಲಿ, ಭಾಂಗ್ಲಾದೇಶದಲಿ., ತೊಂದರೆ ಕೊಟ್ಟರೂ ಕೂಡ ಇಷ್ಟು ಶಾಂತಿಯಿಂದ ಇದಾರೆ ಅಂದರೆ ಅದರ ಅರ್ಥ ದೌರ್ಬಲ್ಯ ಅಲ್ಲ. ಆರ್ಟಿಕಲ್ 370 ಬಗ್ಗೆ ಕಿತ್ತು ಹಾಕಿದ್ದು ನಿಮಗೆಲ್ಲರಿಗೂ ಗೊತ್ತಿದೆ. ಇದೇ ರೀತಿ ಮುಸಲ್ಮಾನರು ಪಾಕೀಸ್ನಾನದಲ್ಲಿ.., ಬಾಂಗ್ಲಾ ದೇಶದದಲಿ ಹಿಂದೂ ಗಳ ಮೇಲೆ ದೌರ್ಜನ್ಯ ಮುಂದುವರೆದರೆ ಬಾಂಗ್ಲಾದೇಶನೂ ಇರಲಾ, ಪಾಕಿಸ್ತಾನನೂ ಇರಲಾ, ಅಖಂಡ ಭಾರತ ಆಗುತ್ತೆ ಎಂದಿದ್ದರು.
ಯಾರೋ ಒಂದ್ ನಾಲ್ಕು ಜನ ಹಿಂದೂಗಳು ಹೋರಾಟಕ್ಕೆ ಇಳಿದರೆ ಅವರ ಮೇಲೂ ಹಲ್ಲೆ ನಡೆಸಲಾಗಿದೆ. ಒಬ್ಬ ಹಿಂದೂ ನಾಯಕನಿಗೆ ಆಸ್ಪತ್ರೆಗೆ ಕರ್ಕೊಂಡು ಹೋಗಿ ಸೇರಿಸಲಿಕ್ಕೆ ಪ್ರಯತ್ನ ಮಾಡಿದರೆ ಯಾವ ಆಸ್ಪತ್ರೆಯವರೂ ಸಹ ಅಡ್ಮಿಟ್ ಮಾಡಿಕೊಳ್ಳಲಿಲ್ಲ. ಹಲ್ಲೆಗೊಳಗಾದ ವ್ಯಕ್ತಿ ಇವತ್ತೂ ಅಥವಾ ನಾಳೆ ಎಂದು ನರಳ್ತಾ ಇದ್ದಾನೆ, ಇವತ್ತು ಬೆಳಿಗ್ಗೆ, ಟಿ.ವಿ ನೋಡ್ಕೊಂಡು ಬಂದೆ ನಾನು. ಬೆಳಿಗ್ಗೆ, ಕೂಡಾ ಹಿಂದೂ ಬಾಂಗ್ಲಾದಲ್ಲಿ ದೇವಸ್ಥಾನಗಳು ಕೂಡ ಧ್ವಂಸ ಆಗುತ್ತಿವೆ. ಎಂದು ಈಶ್ವರಪ್ಪ ಅಬ್ಬರಿಸಿದ್ದರು.
ಒಂದು ಅನ್ನ ಕೋಮಿನ ವಿರುದ್ಧ ದ್ವೇಷ ಭಾವನೆಗಳನ್ನು ಕೆರಳಿಸಿ ಅಸೌಹಾರ್ದತೆಯನ್ನು ಹೆಚ್ಚಿಸುವ ರೀತಿಯಲಿ ಅನ್ನಕೋಮಿಗೆ ಉದ್ರೇಕ ಉಂಟಾಗುವಂತೆ ಪ್ರಚೋದನಾಕಾರಿಯಾಗಿ ಭಾಷಣ ಮಾಡಿರುತ್ತಾರೆಂದು ಕೆ.ಎಸ್ ಈಶ್ವರಪ್ಪನವರ ವಿರುದ್ಧ ಸುಮೋಟೊ ಕೇಸ್ ದಾಖಲಾಗಿದೆ.